ದರ್ಶನ್ ಹೊರಗೆ ಬರುವುದು ಪಕ್ಕಾ ಎಂದ ಖ್ಯಾತ ನಿರ್ದೇಶಕ!! ಯಾವಾಗ ನೋಡಿ ?

ನಟ ದರ್ಶನ್ ಕೊಲೆ ಪ್ರಕರಣದಲ್ಲಿ ಜೈಲು ಸೇರಿದರೂ, ಅವರ ಅಭಿಮಾನಿಗಳ ಹವಾ ಮಾತ್ರ ಕಡಿಮೆಯಾಗಿಲ್ಲ. ಅಭಿಮಾನಿಗಳು ಇನ್ನೂ ಕೂಡಾ ದರ್ಶನ್ ಯಾವಾಗ ಜೈಲಿನಿಂದ ಹೊರಬರುತ್ತಾರೆ, ಮತ್ತೆ ಸಿನಿಮಾಗಳಲ್ಲಿ ಕಾಣಿಸಿಕೊಂಡು ಮನರಂಜನೆ ನೀಡುತ್ತಾರೆ ಎಂಬ ನಿರೀಕ್ಷೆಯಲ್ಲಿ ಕಾಯುತ್ತಿದ್ದಾರೆ. ದರ್ಶನ್ ಯಾವಾಗ ಜೈಲಿನಿಂದ ಹೊರಗೆ ಬರ್ತಾರೋ? ಹಾಗೆಯೇ ಹೊರಬಂದು ಬಂದು ಮತ್ತೆ ಸಿನಿಮಾಗಳನ್ನು ಮಾಡುವ ಮೂಲಕ ಮತ್ತೆ ಮನರಂಜನೆ ನೀಡುತ್ತಾರೋ ಎಂದು ಕಾಯುತ್ತಾ ಕುಳಿತಿರುವ ದರ್ಶನ್ ಸೆಲೆಬ್ರಿಟೀಸ್ ಗೆ ಇದೀಗ ಮತ್ತೆ ಖುಷಿ ಕೊಡೊ ವಿಷ್ಯ ಒಂದು ಕೇಳಿಬಂದಿದೆ.

ದರ್ಶನ್ ಹೊರಗೆ ಬರುವುದು ಪಕ್ಕಾ ಎಂದ ಖ್ಯಾತ ನಿರ್ದೇಶಕ!! ಯಾವಾಗ ನೋಡಿ ?
ದರ್ಶನ್ ಹೊರಗೆ ಬರುವುದು ಪಕ್ಕಾ ಎಂದ ಖ್ಯಾತ ನಿರ್ದೇಶಕ!! ಯಾವಾಗ ನೋಡಿ ?

ಈ ನಡುವೆ ಸ್ಯಾಂಡಲ್‌ವುಡ್‌ನ ಖ್ಯಾತ ನಿರ್ದೇಶಕ ಓಂ ಪ್ರಕಾಶ್ ಇತ್ತೀಚೆಗೆ ಖಾಸಗಿ ಚಾನಲ್‌ಗೆ ನೀಡಿದ ಸಂದರ್ಶನದಲ್ಲಿ ದರ್ಶನ್ ಬಗ್ಗೆ ಮಾತನಾಡಿದ್ದಾರೆ. ಅವರು, “ದರ್ಶನ್ ಇದೇ ವರ್ಷ ಜೂನ್ ಅಥವಾ ಜುಲೈ ಒಳಗೆ ಖಂಡಿತಾ ಜೈಲಿನಿಂದ ಹೊರಬರುತ್ತಾರೆ. 3-4 ತಿಂಗಳಲ್ಲಿ ಅವರು ಬರುವುದು ಪಕ್ಕಾ. ನನ್ನ ಮಾತು ನಿಜವಾಗುತ್ತದೆ ಎಂಬ ನಂಬಿಕೆ ನನಗೆ ಇದೆ” ಎಂದು ಭವಿಷ್ಯ ನುಡಿದಿದ್ದಾರೆ.

ಓಂ ಪ್ರಕಾಶ್ ಅವರ ಈ ಮಾತು ಕೇಳಿದ ದರ್ಶನ್ ಅಭಿಮಾನಿಗಳು ಸಂತೋಷಗೊಂಡಿದ್ದಾರೆ. ಅವರ ಮಾತು ನಿಜವಾಗಲಿ ಎಂದು ದೇವರಲ್ಲಿ ಪ್ರಾರ್ಥಿಸುತ್ತಿದ್ದಾರೆ. ಒಟ್ಟಿನಲ್ಲಿ, ನಿರ್ದೇಶಕರ ಮಾತು ಎಷ್ಟರ ಮಟ್ಟಿಗೆ ನಿಜವಾಗುತ್ತದೆ ಎಂಬುದನ್ನು ಕಾದು ನೋಡಬೇಕಾಗಿದೆ.

ಇದೇ ವೇಳೆ, ದರ್ಶನ್ ಬಿಡುಗಡೆ ಬಗ್ಗೆ ಕೋಡಿಮಠದ ಸ್ವಾಮೀಜಿಗಳಾದ ಕೋಡಿಶ್ರೀ ಕೂಡಾ ಪ್ರತಿಕ್ರಿಯೆ ನೀಡಿದ್ದಾರೆ. ಅವರು, “ಈ ಪ್ರಕರಣ ನ್ಯಾಯಾಲಯದಲ್ಲಿದೆ. ತೀರ್ಮಾನ ಕೋರ್ಟ್‌ನಲ್ಲಿ ಆಗುತ್ತದೆ. ಹೀಗಾಗಿ ಈ ಬಗ್ಗೆ ಹೆಚ್ಚು ಮಾತನಾಡುವುದಿಲ್ಲ” ಎಂದು ಸ್ಪಷ್ಟಪಡಿಸಿದ್ದಾರೆ.

ಅಭಿಮಾನಿಗಳ ನಿರೀಕ್ಷೆ, ನಿರ್ದೇಶಕರ ಭವಿಷ್ಯ ನುಡಿ, ಮತ್ತು ಸ್ವಾಮೀಜಿಗಳ ಹೇಳಿಕೆ— ದರ್ಶನ್ ಬಿಡುಗಡೆ ವಿಚಾರದಲ್ಲಿ ಜನರ ಕುತೂಹಲ ಇನ್ನೂ ತೀವ್ರವಾಗಿದೆ.