ನಿಮ್ಮ ಮನೆಗೆ ಸಿಲಿಂಡರ್‌ ಬಂದಾಗ ದುಡ್ಡಷ್ಟೇ ಅಲ್ಲ !! ಇದನ್ನು ಕೊಟ್ಟರೆ ಮಾತ್ರ ನಿಮಗೆ ಸಿಗುತ್ತೆ ಗ್ಯಾಸ್‌ ಸಿಲಿಂಡರ್‌ ?

ಅಮೆರಿಕ-ಇರಾನ್ ನಡುವಿನ ಉದ್ವಿಗ್ನತೆಯಿಂದಾಗಿ ಎಲ್‌ಪಿಜಿ ಗ್ಯಾಸ್ ಕೊರತೆಯಾಗಲಿದೆ ಎಂಬ ಸುಳ್ಳು ಸುದ್ದಿ ಹರಡುತ್ತಿರುವ ಸಂದರ್ಭದಲ್ಲಿ, ಕೆಲವರು ಗ್ಯಾಸ್ ಬುಕ್ಕಿಂಗ್ ಹೆಸರಿನಲ್ಲಿ ಜನರನ್ನು ವಂಚಿಸುತ್ತಿದ್ದಾರೆ. ಈ ಅಕ್ರಮವನ್ನು ತಡೆಯಲು ಕೇಂದ್ರ ಸರ್ಕಾರ ಡೆಲಿವರಿ ಅಥೆಂಟಿಕೇಶನ್ ಕೋಡ್ (Delivery Authentication Code - DAC) ಎಂಬ ಹೊಸ ವ್ಯವಸ್ಥೆಯನ್ನು ಜಾರಿಗೆ ತಂದಿದೆ.

ನಿಮ್ಮ ಮನೆಗೆ ಸಿಲಿಂಡರ್‌ ಬಂದಾಗ ದುಡ್ಡಷ್ಟೇ ಅಲ್ಲ !! ಇದನ್ನು ಕೊಟ್ಟರೆ ಮಾತ್ರ ನಿಮಗೆ ಸಿಗುತ್ತೆ ಗ್ಯಾಸ್‌ ಸಿಲಿಂಡರ್‌ ?
ನಿಮ್ಮ ಮನೆಗೆ ಸಿಲಿಂಡರ್‌ ಬಂದಾಗ ದುಡ್ಡಷ್ಟೇ ಅಲ್ಲ !! ಇದನ್ನು ಕೊಟ್ಟರೆ ಮಾತ್ರ ನಿಮಗೆ ಸಿಗುತ್ತೆ ಗ್ಯಾಸ್‌ ಸಿಲಿಂಡರ್‌ ?

ಗ್ರಾಹಕರು ಗ್ಯಾಸ್ ಬುಕ್ ಮಾಡಿದ ತಕ್ಷಣ, ಸಿಸ್ಟಮ್ ಸ್ವಯಂಚಾಲಿತವಾಗಿ ಒಂದು ವಿಶಿಷ್ಟ ಕೋಡ್ ಉತ್ಪಾದಿಸಿ ಅವರ ಮೊಬೈಲ್‌ಗೆ ಕಳುಹಿಸುತ್ತದೆ. ಡೆಲಿವರಿ ಬಾಯ್ ಮನೆಗೆ ಬಂದಾಗ ಈ ಕೋಡ್ ಹೇಳುವುದು ಕಡ್ಡಾಯ. ಕೋಡ್ ನೀಡದಿದ್ದರೆ ಸಾಫ್ಟ್‌ವೇರ್ ಆ ಡೆಲಿವರಿಯನ್ನು ನಿರ್ಬಂಧಿಸುತ್ತದೆ. ಇದರಿಂದ ಸಿಲಿಂಡರ್ ಬೇರೆಯವರ ಪಾಲಾಗುವುದು ತಪ್ಪುತ್ತದೆ.

ಈ ನಿಯಮ ಈಗಾಗಲೇ ದೇಶಾದ್ಯಂತ ಜಾರಿಯಲ್ಲಿದ್ದು, ಸುಮಾರು ಶೇ. 92 ರಷ್ಟು ಸಿಲಿಂಡರ್ ವಿತರಣೆಯನ್ನು ಈ ಪಾರದರ್ಶಕ ವ್ಯವಸ್ಥೆಯ ಮೂಲಕವೇ ಮಾಡಲಾಗುತ್ತಿದೆ. ಆರಂಭದಲ್ಲಿ ಕೆಲವು ತಾಂತ್ರಿಕ ತೊಂದರೆಗಳಿದ್ದರೂ, ಅಧಿಕಾರಿಗಳು ಅವನ್ನು ಸರಿಪಡಿಸಿದ್ದು, ಸಿಸ್ಟಮ್ ಈಗ ಸಂಪೂರ್ಣವಾಗಿ ಅಪ್‌ಡೇಟ್ ಆಗಿದೆ. ಇದರಿಂದ ಗ್ರಾಹಕರಿಗೆ ಯಾವುದೇ ಕಿರಿಕಿರಿ ಇಲ್ಲದೆ ಗ್ಯಾಸ್ ತಲುಪುತ್ತಿದೆ.

ಸಿಲಿಂಡರ್ ಬುಕ್ ಮಾಡಲು ಹಲವು ಮಾರ್ಗಗಳಿವೆ. ಗ್ರಾಹಕರು ಐವಿಆರ್‌ಎಸ್ (IVRS) ಕರೆ ಮೂಲಕ, ನೋಂದಾಯಿತ ಮೊಬೈಲ್‌ನಿಂದ ಎಸ್‌ಎಂಎಸ್ ಕಳುಹಿಸಿ, ಅಥವಾ ಏಜೆನ್ಸಿಯ ಅಧಿಕೃತ ವೆಬ್‌ಸೈಟ್ ಮೂಲಕ ಆನ್‌ಲೈನ್‌ನಲ್ಲಿ ಬುಕ್ಕಿಂಗ್ ಮಾಡಬಹುದು. ಬುಕ್ಕಿಂಗ್ ಕನ್ಫರ್ಮ್ ಆದ ತಕ್ಷಣ ಡಿಎಸಿ ಸಂಖ್ಯೆ ಮೆಸೇಜ್ ಆಗಿ ಬರುತ್ತದೆ.

ಇತ್ತೀಚಿನ ತಾಂತ್ರಿಕ ಅಪ್‌ಡೇಟ್‌ನಿಂದಾಗಿ, ಈ ಡಿಎಸಿ ಸಂಖ್ಯೆ ಈಗ ಕೇವಲ ಎಸ್‌ಎಂಎಸ್ ಮಾತ್ರವಲ್ಲದೆ, ವಾಟ್ಸಾಪ್ ಮತ್ತು ಇಮೇಲ್ ವಿಳಾಸಕ್ಕೂ ಬರುತ್ತದೆ. ಮೊದಲು ಬೇರೆ ಸಾಧನದಿಂದ ಬುಕ್ ಮಾಡಿದಾಗ ಕೋಡ್ ಸಿಗದೆ ಗ್ರಾಹಕರು ಪರದಾಡುತ್ತಿದ್ದರು. ಆದರೆ ಈಗ ಪರ್ಯಾಯ ವ್ಯವಸ್ಥೆ ಇರುವುದರಿಂದ ಕೋಡ್ ಪಡೆಯುವುದು ಇನ್ನಷ್ಟು ಸುಲಭವಾಗಿದೆ.