ಮಧ್ಯಪ್ರದೇಶದ ಛತರ್ಪುರ್ ಜಿಲ್ಲೆಯಲ್ಲಿ ಆಘಾತಕಾರಿ ಘಟನೆೊಂದು ನಡೆದಿದೆ. ಜೀವ ಉಳಿಸಬೇಕಾದ 108 ತುರ್ತು ಸೇವೆಯ ಆಂಬುಲೆನ್ಸ್ ಅನ್ನು ಅನೈತಿಕ ಚಟುವಟಿಕೆಗಳಿಗೆ ದುರ್ಬಳಕೆ ಮಾಡಿರುವುದು ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದೆ. ಈ ವಾಹನವನ್ನು ‘ಚಲಿಸುವ ಓಯೋ’ ರೀತಿಯಲ್ಲಿ ಬಳಸಲಾಗುತ್ತಿದೆ ಎಂಬ ಆರೋಪಗಳು ಕೇಳಿಬಂದಿವೆ.
ರಸ್ತೆಯಲ್ಲಿ ಸಂಚರಿಸುತ್ತಿದ್ದ ಆಂಬುಲೆನ್ಸ್‌ನ ಕಿಟಕಿಯಿಂದ ಅನುಮಾನಾಸ್ಪದ ಚಟುವಟಿಕೆಗಳನ್ನು ಗಮನಿಸಿದ ಸ್ಥಳೀಯರು ತಕ್ಷಣವೇ ವಾಹನವನ್ನು ಹಿಂಬಾಲಿಸಿದ್ದಾರೆ. ಸುಮಾರು ಐದು ಕಿಲೋಮೀಟರ್‌ಗಳವರೆಗೆ ಬೆನ್ನಟ್ಟಿದ ನಂತರ, ಸಾರ್ವಜನಿಕರು ಆಂಬುಲೆನ್ಸ್ ಅನ್ನು ತಡೆದು ನಿಲ್ಲಿಸುವಲ್ಲಿ ಯಶಸ್ವಿಯಾಗಿದ್ದಾರೆ. ಈ ವೇಳೆ ವಾಹನದೊಳಗೆ ಒಬ್ಬ ಯುವತಿ ಮತ್ತು ಇಬ್ಬರು ಯುವಕರು ಇದ್ದರು ಎಂಬುದು ಬಹಿರಂಗವಾಗಿದೆ.
एंबुलेंस बनी चलता फिरता OYO. राहगीरों ने एंबुलेंस की विंडो से देखी गलत हरकत है, जिसके बाद लोगों ने किया पीछा. तकरीबन 5 किलोमीटर बाद एक लड़की और दो लड़कों को पकड़ा गया.
— ocean jain (@ocjain4) April 23, 2026
???? छतरपुर (मध्य प्रदेश) pic.twitter.com/C2Ipwl8US3
ವಾಹನವನ್ನು ತಡೆದಾಗ ಯಾವುದೇ ರೋಗಿ ಅಥವಾ ತುರ್ತು ಪರಿಸ್ಥಿತಿಯ ಲಕ್ಷಣಗಳು ಕಂಡುಬರಲಿಲ್ಲ. ಬದಲಾಗಿ ಆಂಬುಲೆನ್ಸ್ ಅನ್ನು ಹೋಟೆಲ್ ರೂಮಿನಂತೆ ಬಳಸಲಾಗುತ್ತಿದೆ ಎಂದು ಸ್ಥಳೀಯರು ಆರೋಪಿಸಿದ್ದಾರೆ. ಸಾರ್ವಜನಿಕರು ಪ್ರಶ್ನಿಸಿದಾಗ ಒಳಗಿದ್ದವರು ತಾವು ‘ಕುಟುಂಬದ ಸದಸ್ಯರು’ ಎಂದು ಹೇಳಿ ತಪ್ಪಿಸಿಕೊಳ್ಳಲು ಪ್ರಯತ್ನಿಸಿದರೂ, ಯುವತಿ ಮುಖ ಮುಚ್ಚಿಕೊಂಡು ಕುಳಿತಿದ್ದ ದೃಶ್ಯಗಳು ಮತ್ತು ಜನರ ಆಕ್ರೋಶದ ವೀಡಿಯೋಗಳು ಈಗ ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ವೈರಲ್ ಆಗಿವೆ.
ಈ ಘಟನೆ ತುರ್ತು ಸೇವೆಗಳ ದುರ್ಬಳಕೆಯ ಬಗ್ಗೆ ಗಂಭೀರ ಚರ್ಚೆಗೆ ಕಾರಣವಾಗಿದ್ದು, ಸಾರ್ವಜನಿಕರಲ್ಲಿ ಆಕ್ರೋಶ ಹೆಚ್ಚಿಸಿದೆ.