ಉತ್ತರ ಪ್ರದೇಶದ ಕಾನ್ಪುರದ ಮಹಾರಾಜಪುರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದ ಘಟನೆಯೊಂದು ಸಾಮಾಜಿಕ ಮಾಧ್ಯಮಗಳಲ್ಲಿ ಭಾರೀ ಚರ್ಚೆಗೆ ಕಾರಣವಾಗಿದೆ. ಪತಿ ಬೇರೊಬ್ಬ ಮಹಿಳೆಯೊಂದಿಗೆ ಸುತ್ತಾಡುತ್ತಿರುವುದನ್ನು ಪತ್ನಿ ನರ್ವಾಲ್ ಕ್ರಾಸಿಂಗ್ ಬಳಿ ರೆಡ್ ಹ್ಯಾಂಡ್ ಆಗಿ ಹಿಡಿದಿದ್ದು, ರಾಷ್ಟ್ರೀಯ ಹೆದ್ದಾರಿಯೇ ಕೆಲಕಾಲ ಹೈಡ್ರಾಮಾದ ವೇದಿಕೆಯಾಗಿ ಮಾರ್ಪಟ್ಟಿತ್ತು.
ಪತಿಯ ವರ್ತನೆಯ ಬಗ್ಗೆ ಮೊದಲೇ ಸಂಶಯ ಹೊಂದಿದ್ದ ಪತ್ನಿ, ಆತನನ್ನು ಹಿಂಬಾಲಿಸಿ ಬಂದಿದ್ದರು. ಆಗ ಪತಿ ತನ್ನ ಗೆಳತಿಯೊಂದಿಗೆ ಹೆದ್ದಾರಿಯ ಜನನಿ ಬಿಡ ಪ್ರದೇಶದಲ್ಲಿ ಸುತ್ತಾಡುತ್ತಿರುವುದನ್ನು ಕಂಡು, ತಕ್ಷಣವೇ ತರಾಟೆಗೆ ತೆಗೆದುಕೊಂಡಿದ್ದಾಳೆ. ಆರಂಭದಲ್ಲಿ ಮಾತಿನ ಚಕಮಕಿಯಿಂದ ಶುರುವಾದ ಈ ಜಗಳ, ನೋಡುತ್ತಿದ್ದಂತೆಯೇ ತೀವ್ರ ವಿಕೋಪಕ್ಕೆ ತಿರುಗಿತು.
रंगे हाथ पकडे गए पतिदेव ने गर्लफ्रेंड से पिटवा दी धर्मपत्नी.. सडक पर हुआ फैमिली ड्रामा
— TRUE STORY (@TrueStoryUP) October 9, 2025
कानपुर के महाराजपुर थाना क्षेत्र के नेशनल हाईवे पर उस वक्त एक पारिवारिक 'ड्रामा ' देखने को मिला, जब एक पत्नी ने अपने पति को उसकी प्रेमिका के साथ घूमते रंगे हाथों पकड़ लिया... फिर क्या था, बीच… pic.twitter.com/bRqXA7b4Yy
ರಸ್ತೆಯ ಮಧ್ಯದಲ್ಲೇ ಪತಿ-ಪತ್ನಿಯ ನಡುವೆ ತೀವ್ರ ವಾಗ್ವಾದ ನಡೆದಿದೆ. ಈ ವೇಳೆ ಕೋಪಗೊಂಡ ಪತಿ, ಪತ್ನಿಯ ಮೇಲೆ ಕೈಮಾಡಿ ಹಲ್ಲೆ ನಡೆಸಿದ್ದಾನೆ. ಪತಿಯ ವರ್ತನೆಯ ಬೆನ್ನಲ್ಲೇ ಆತನ ಗೆಳತಿ ಕೂಡ ಪತ್ನಿಯ ಮೇಲೆ ದಾಳಿ ನಡೆಸಿದ್ದಾಳೆ ಎಂಬ ಮಾಹಿತಿ ಹೊರಬಂದಿದೆ.
ಈ ಘಟನೆಯ ಸಂಪೂರ್ಣ ದೃಶ್ಯವನ್ನು ಸಾರ್ವಜನಿಕರು ಮೊಬೈಲ್‌ನಲ್ಲಿ ಸೆರೆ ಹಿಡಿದಿದ್ದು, ‘ಟ್ರೂ ಸ್ಟೋರಿ’ ಎಂಬ ಎಕ್ಸ್ ಸಾಮಾಜಿಕ ಮಾಧ್ಯಮದ ಪೇಜ್‌ನಲ್ಲಿ ಶೇರ್ ಮಾಡಲಾಗಿದೆ. ಸಾರ್ವಜನಿಕ ಪ್ರದೇಶದಲ್ಲಿ ನಡೆದ ಈ ಕೌಟುಂಬಿಕ ಕಲಹದ ವಿಡಿಯೋ ಈಗ ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ವೈರಲ್ ಆಗಿ ಚರ್ಚೆಗೆ ಗ್ರಾಸವಾಗಿದೆ.