ಕೋಡಿಮಠದ ಶ್ರೀಗಳು ಇತ್ತೀಚೆಗೆ ನೀಡಿದ ಭವಿಷ್ಯವಾಣಿ ದೇಶದಾದ್ಯಂತ ಚರ್ಚೆಗೆ ಕಾರಣವಾಗಿದೆ. ಹೊಯ್ಸಳ ಶೈಲಿಯ ಪ್ರಾಚೀನ ದೇವಾಲಯಗಳಿಗೆ ಹೆಸರಾಗಿರುವ ಕೃಷ್ಣರಾಜಪೇಟೆ ತಾಲೂಕಿನ ಕಿಕ್ಕೇರಿಯಲ್ಲಿ ಮಾತನಾಡಿದ ಅವರು, ಜಗತ್ತಿನಲ್ಲಿ ಅಪಮೃತ್ಯ ಹೆಚ್ಚಾಗಲಿದೆ ಮತ್ತು ಜಾಗತಿಕ ಮಟ್ಟದಲ್ಲಿ ಪ್ರಮುಖ ವ್ಯಕ್ತಿಯೊಬ್ಬರ ತಲೆದಂಡವಾಗಲಿದೆ ಎಂದು ಹೇಳಿದ್ದಾರೆ.
ಹಾಸನ ಜಿಲ್ಲೆಯ ಅರಸೀಕೆರೆ ತಾಲೂಕು, ಹಾರನಹಳ್ಳಿ ಕೋಡಿಮಠ ಸಂಸ್ಥಾನದ ಡಾ. ಶಿವಾನಂದ ಶಿವಯೋಗಿ ರಾಜೇಂದ್ರ ಸ್ವಾಮೀಜಿಗಳು, ಹಿಂದೆ ಮುಖ್ಯಮಂತ್ರಿ ಬದಲಾವಣೆಯ ವಿಚಾರದಲ್ಲಿ “ಹಾಲು ಕೆಟ್ಟರೂ ಹಾಲುಮತ ಸಮಾಜ ಕೆಡದು” ಎಂದು ಹೇಳಿದ ಭವಿಷ್ಯ ವೈರಲ್ ಆಗಿತ್ತು. ಇದೇ ಶೈಲಿಯಲ್ಲಿ ಅವರು ಕಿಕ್ಕೇರಿಯಲ್ಲಿ ಮಾತನಾಡಿ, ದೇಶಕ್ಕೆ ಒಳ್ಳೆಯ ಸುದ್ದಿಯೂ ಇದೆ, ಕೆಟ್ಟ ಸುದ್ದಿಯೂ ಇದೆ ಎಂದು ವಿವರಿಸಿದರು.
ರಾಜ್ಯದಲ್ಲಿ ಉತ್ತಮ ಮಳೆಯಾಗಲಿದೆ, ಉತ್ತಮ ಬೆಳೆಯಾಗಲಿದೆ. ಆದರೆ, ಅವಘಡಗಳನ್ನು ತಪ್ಪಿಸಲು ಸಾಧ್ಯವಿಲ್ಲ ಎಂದು ಅವರು ಹೇಳಿದರು. ಮಹಾಭಾರತದಲ್ಲಿ ಕೃಷ್ಣನಿದ್ದರೂ, ಗಧಾಯುದ್ಧದಲ್ಲಿ ಭೀಮ ಗೆದ್ದರೂ, ರಾಜ್ಯ ಮತ್ತು ಕೇಂದ್ರ ಸರ್ಕಾರಕ್ಕೆ ಯಾವುದೇ ತೊಂದರೆಯಿಲ್ಲ ಎಂದು ಅವರು ಭರವಸೆ ನೀಡಿದರು.
ಶ್ರೀಗಳು “ಅಡವಿಯಲ್ಲಿ ಕಂಡದ್ದು ಕೇಳದ್ದು ಕುರುಹೀನ ರಟ್ಟು” ಎಂಬ ಹಳೆಯ ಮಾತನ್ನು ಉಲ್ಲೇಖಿಸಿ, ಮುಂದೆ ಏನಾಗುತ್ತದೆ ಎನ್ನುವುದನ್ನು ಹೇಳಲು ಈ ಪದವನ್ನು ಬಳಸುತ್ತಾರೆ ಎಂದು ವಿವರಿಸಿದರು. ಅವರ ಪ್ರಕಾರ, ದೇಶದಲ್ಲಿ ಮತೀಯ ಗಲಭೆಗಳು ಹೆಚ್ಚಾಗಲಿವೆ, ಅಕಾಲ ಮೃತ್ಯು ಪ್ರಕರಣಗಳು ದಿನದಿಂದ ದಿನಕ್ಕೆ ಹೆಚ್ಚಾಗಲಿವೆ. ಆದರೆ, ಈ ಬಾರಿ ಸಕಾಲಕ್ಕೆ ಮಳೆಯಾಗುವುದರಿಂದ ಅಣೆಕಟ್ಟುಗಳು ತುಂಬಲಿವೆ.
ಅವರು ಮುಂದುವರಿದು, ವಿಮಾನ ಮತ್ತು ರೈಲು ಅಪಘಾತಗಳು ಹೆಚ್ಚಾಗಲಿವೆ, ವಾಯು ಮತ್ತು ಗಾಳಿಯ ಆರ್ಭಟ ಹೆಚ್ಚಾಗಲಿದೆ, ಇದರಿಂದ ಉಸಿರುಗಟ್ಟಿಸುವ ಪರಿಸ್ಥಿತಿಗಳು ನಿರ್ಮಾಣವಾಗಬಹುದು ಎಂದು ಎಚ್ಚರಿಸಿದರು. ಮನುಷ್ಯನ ಆರೋಗ್ಯದ ಮೇಲೆ ದುಷ್ಪರಿಣಾಮ ಬೀರುವ ಸಾಧ್ಯತೆಗಳಿವೆ ಎಂದು ಹೇಳಿದರು.
ಮಕರ ಸಂಕ್ರಾಂತಿ, ಯುಗಾದಿ ಮತ್ತು ದಸರಾ ಸಂದರ್ಭದಲ್ಲಿ ಸೂರ್ಯ-ಚಂದ್ರನನ್ನು ನೋಡಿ ಭವಿಷ್ಯ ನುಡಿಯುವ ಸಂಪ್ರದಾಯವನ್ನು ಅವರು ಮುಂದುವರಿಸುತ್ತಿದ್ದಾರೆ. ಅಹ್ಮದಾಬಾದ್ ಏರ್ ಇಂಡಿಯಾ ಪತನ, ಭಾರತ-ಪಾಕಿಸ್ತಾನ ಉದ್ವಿಗ್ನತೆ, ಜಾಗತಿಕ ಯುದ್ಧ ಭೀತಿ, ಸುನಾಮಿ ಜಲಪ್ರಳದಂತಹ ಘಟನೆಗಳನ್ನು ಅವರು ತಮ್ಮದೇ ಶೈಲಿಯಲ್ಲಿ ಮುಂಚಿತವಾಗಿ