ನಿನಗೆ ಅವಕಾಶ ಬೇಕಾದ್ರೆ ಇಬ್ಬರು ನಿರ್ಮಾಪಕರ ಜೊತೆ ನೀನು ಮಲಗಬೇಕು!!ಬಿಗ್ ಬಾಸ್ ಸ್ಫರ್ಧಿಯ ಆಡಿಯೋ ವೈರಲ್

ಚಿತ್ರರಂಗದ ಕರಾಳ ಮುಖ – ಚಂದ್ರಿಕಾ ದೀಕ್ಷಿತ್ ಹಂಚಿಕೊಂಡ ಅನುಭವ
ಚಿತ್ರರಂಗದಲ್ಲಿ ಅವಕಾಶ ಪಡೆಯಲು “ಪಾತ್ರಕ್ಕೆ ಪಲ್ಲಂಗವೇರಬೇಕು” ಎಂಬ ದುಷ್ಟ ಷರತ್ತುಗಳನ್ನು ಒಪ್ಪಿಕೊಳ್ಳಬೇಕಾದ ಪರಿಸ್ಥಿತಿ ಅನೇಕರಿಗೆ ಮಾನಸಿಕ ಕಿರಿಕಿರಿ ಉಂಟುಮಾಡುತ್ತಿದೆ. ಕೆಲವರು ನೇರವಾಗಿ ತಮ್ಮ ಜೊತೆ ಮಲಗಬೇಕೆಂಬ ಬೇಡಿಕೆ ಇಡುತ್ತಾರೆ, ಇನ್ನೂ ಕೆಲವರು ಅವಕಾಶ ನೀಡುವ ನೆಪದಲ್ಲಿ ಹತ್ತಿರವಾಗಲು ಪ್ರಯತ್ನಿಸುತ್ತಾರೆ. ಸ್ಥಳ, ಸಮಯ ಯಾವುದಾದರೂ ಇರಲಿ, ಬಲವಂತದಿಂದ ತಮ್ಮ ಕಾ*ಮದಾಹ ತೀರಿಸಿಕೊಳ್ಳಲು ಯತ್ನಿಸುವವರನ್ನು ಅನೇಕರು ಎದುರಿಸಿದ್ದಾರೆ.

ನಿನಗೆ ಅವಕಾಶ ಬೇಕಾದ್ರೆ ಇಬ್ಬರು ನಿರ್ಮಾಪಕರ ಜೊತೆ ನೀನು ಮಲಗಬೇಕು!!ಬಿಗ್ ಬಾಸ್ ಸ್ಫರ್ಧಿಯ ಆಡಿಯೋ ವೈರಲ್
ನಿನಗೆ ಅವಕಾಶ ಬೇಕಾದ್ರೆ ಇಬ್ಬರು ನಿರ್ಮಾಪಕರ ಜೊತೆ ನೀನು ಮಲಗಬೇಕು!!ಬಿಗ್ ಬಾಸ್ ಸ್ಫರ್ಧಿಯ ಆಡಿಯೋ ವೈರಲ್

 ಕನಸುಗಳ ಹಿಂದೆ ಇರುವ ವಾಸ್ತವ
ಚಿತ್ರರಂಗದಲ್ಲಿ ಹೆಸರು ಮಾಡಿರುವವರು, ಹೆಸರು ಮಾಡಲಾಗದೇ ಮನೆ ಸೇರಿದವರು, ಕನಸಿನ ಕುದುರೆಯನ್ನೇರಿ ಬಂದವರು—ಎಲ್ಲರೂ ಒಂದಲ್ಲೊಂದು ದಿನ ಈ ಝಗಮಗ ಲೋಕದ ವಿಕೃತ ಮುಖವನ್ನು ಕಂಡು ಬೆಚ್ಚಿಬಿದ್ದಿದ್ದಾರೆ. ಉದಾಹರಣೆಗೆ ನಟಿ ಚಂದ್ರಿಕಾ ದೀಕ್ಷಿತ್.

ಇತ್ತೀಚಿನ ಸಂದರ್ಶನವೊಂದರಲ್ಲಿ, “ನನ್ನ ಮಗನ ಭವಿಷ್ಯಕ್ಕಾಗಿ, ಅವನನ್ನು ಸಾಕಲು, ಹಣಕ್ಕಾಗಿ ನಾನು ಯಾರ ಜೊತೆ ಬೇಕಾದರೂ ಮಲಗಲು ಸಿದ್ಧ” ಎಂದು ಹೇಳಿದ ಚಂದ್ರಿಕಾ ಅವರ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿತ್ತು.

 ಕಾಸ್ಟಿಂಗ್ ಕೌಚ್ ಅನುಭವ
ಸದ್ಯ ಚಂದ್ರಿಕಾ ದೀಕ್ಷಿತ್ ಚಿತ್ರರಂಗದ ಕರಾಳ ಮುಖಕ್ಕೆ ಕೈಗನ್ನಡಿ ಹಿಡಿದಿದ್ದಾರೆ. ಸಾಕ್ಷಿ ಸಮೇತ ತಮ್ಮ ಕಾಸ್ಟಿಂಗ್ ಕೌಚ್ ಅನುಭವವನ್ನು ಹಂಚಿಕೊಂಡಿದ್ದಾರೆ. ವಿಡಿಯೋ ಮೂಲಕ ಅವರು, “ಅವಕಾಶ ಬೇಕಾದರೆ ರಾಜಿ ಮಾಡಿಕೊಳ್ಳಬೇಕು” ಎಂದು ಒಬ್ಬ ವ್ಯಕ್ತಿ ಹೇಳಿದ್ದನ್ನು ಬಹಿರಂಗಪಡಿಸಿದ್ದಾರೆ.

ಚಂದ್ರಿಕಾ ಹೇಳುವಂತೆ, “ನಟಿಯಾಗಬೇಕೆಂಬ ಕನಸು ಕಂಡರೆ, ಆ ಕನಸಿಗೆ ಕೊಳ್ಳಿ ಇಡಲು ಇಲ್ಲಿ ರಾಕ್ಷಸರು ಕಾಯುತ್ತಿದ್ದಾರೆ. ಹಾಸಿಗೆ ಹಂಚಿಕೊಳ್ಳುವಂತೆ ಒತ್ತಾಯಿಸುತ್ತಾರೆ. ನನಗೆ ಇಂತಹ ಅನುಭವ ಆಗಿದೆ.”

 ಆಡಿಯೋ ಸಾಕ್ಷಿ
ಚಂದ್ರಿಕಾ ಅವರು ಹಂಚಿಕೊಂಡ ಆಡಿಯೋ ಕ್ಲಿಪ್‌ನಲ್ಲಿ, ಒಬ್ಬ ವ್ಯಕ್ತಿ “ಅವಕಾಶ ಬೇಕಾದರೆ ಇಬ್ಬರು ನಿರ್ಮಾಪಕರ ಜೊತೆ ಹಾಸಿಗೆ ಹಂಚಿಕೊಳ್ಳಬೇಕು, ಇದಕ್ಕೆ ಎಷ್ಟು ಹಣ ಬೇಕು?” ಎಂದು ಕೇಳಿದ್ದಾನೆ. “ಹಾಸಿಗೆ ಹಂಚಿಕೊಂಡರೆ ಚಿತ್ರರಂಗದಲ್ಲಿ ಹಣ ಸಿಗುತ್ತದೆ” ಎಂಬ ಮಾತುಗಳು ಆಡಿಯೋದಲ್ಲಿ ಕೇಳಿಬಂದಿವೆ.

ಚಂದ್ರಿಕಾ ದೀಕ್ಷಿತ್ ಸಂದೇಶ
“ಚಿತ್ರರಂಗ ತಲುಪುವ ಮೊದಲು ಈ ಪ್ರಯಾಣವನ್ನು ಬಹುತೇಕರು ಮಾಡಿದ್ದಾರೆ. ಹಲವರಿಗೆ ಈ ಅನುಭವ ಆಗಿದೆ. ಕನಸುಗಳಿಗೆ ಹಲವರು ತಮ್ಮನ್ನೇ ಮಾರಿಕೊಳ್ಳುತ್ತಾರೆ” ಎಂದು ಚಂದ್ರಿಕಾ ದೀಕ್ಷಿತ್ ಹೇಳಿದ್ದಾರೆ.