ಇಂದು ಪೆಟ್ರೋಲ್‌, ಡೀಸೆಲ್‌ ಬೆಲೆ ಮತ್ತೆ ಏರಿಕೆ !! ಶಾಕ್ ಕೊಟ್ಟ ಕೇಂದ್ರ ಸರ್ಕಾರ

ಅಮೆರಿಕಾ ಮತ್ತು ಇರಾನ್ ನಡುವಿನ ಉದ್ವಿಗ್ನತೆ ಹೆಚ್ಚುತ್ತಿರುವ ಸಂದರ್ಭದಲ್ಲಿ, ದೇಶದ ತೈಲ ಕಂಪನಿಗಳು ಮತ್ತೆ ಪೆಟ್ರೋಲ್ ಮತ್ತು ಡೀಸೆಲ್ ದರಗಳನ್ನು ಏರಿಕೆ ಮಾಡಿವೆ. ಮೂರು ದಿನಗಳ ಹಿಂದೆ ಪ್ರತಿ ಲೀಟರ್‌ಗೆ 3 ರೂಪಾಯಿ ಹೆಚ್ಚಳ ಮಾಡಿದ ಕಂಪನಿಗಳು, ಮಂಗಳವಾರ ಮತ್ತೊಮ್ಮೆ 90 ಪೈಸೆ ಹೆಚ್ಚಳವನ್ನು ಜಾರಿಗೊಳಿಸಿವೆ. ವಿವಿಧ ಮಹಾನಗರಗಳಲ್ಲಿ 87 ರಿಂದ 98 ಪೈಸೆ ವರೆಗೆ ದರ ಏರಿಕೆಯಾಗಿದೆ.

ಇಂದು ಪೆಟ್ರೋಲ್‌, ಡೀಸೆಲ್‌ ಬೆಲೆ ಮತ್ತೆ ಏರಿಕೆ  !! ಶಾಕ್ ಕೊಟ್ಟ ಕೇಂದ್ರ ಸರ್ಕಾರ
ಇಂದು ಪೆಟ್ರೋಲ್‌, ಡೀಸೆಲ್‌ ಬೆಲೆ ಮತ್ತೆ ಏರಿಕೆ !! ಶಾಕ್ ಕೊಟ್ಟ ಕೇಂದ್ರ ಸರ್ಕಾರ

ಬೆಂಗಳೂರು ಸೇರಿದಂತೆ ಪ್ರಮುಖ ನಗರಗಳಲ್ಲಿ ಹೊಸ ದರ ಅನ್ವಯ ಪೆಟ್ರೋಲ್ ಬೆಲೆ ಲೀಟರ್‌ಗೆ 0.94 ಪೈಸೆ ಏರಿಕೆಯಾಗಿ 107.12 ರೂಪಾಯಿಗೆ ತಲುಪಿದೆ. ಡೀಸೆಲ್ ಬೆಲೆ 0.98 ಪೈಸೆ ಏರಿಕೆಯಾಗಿ 95.04 ರೂಪಾಯಿಗೆ ಏರಿಕೆಯಾಗಿದೆ.

ಮಾರುಕಟ್ಟೆ ವಿಶ್ಲೇಷಕರ ಪ್ರಕಾರ, ಈ ದರ ಏರಿಕೆ ಜಾಗತಿಕ ರಾಜತಾಂತ್ರಿಕ ಮತ್ತು ಸೈನಿಕ ಬಿಕ್ಕಟ್ಟಿನ ನೇರ ಪರಿಣಾಮವಾಗಿದೆ. ಅಮೆರಿಕಾ–ಇರಾನ್ ಸಂಘರ್ಷ ತೀವ್ರಗೊಂಡಂತೆ ಹಾರ್ಮುಜ್ ಜಲಸಂಧಿಯಲ್ಲಿ ತೈಲ ಪೂರೈಕೆ ಅಡಚಣೆಗೊಳಗಾಗಿದೆ. ಇದರ ಪರಿಣಾಮವಾಗಿ ಕಚ್ಚಾ ತೈಲದ ಬೆಲೆ ಪ್ರತಿ ಬ್ಯಾರಲ್‌ಗೆ 100 ಡಾಲರ್‌ಗಿಂತ ಹೆಚ್ಚಾಗಿದೆ.

ಕಚ್ಚಾ ತೈಲದ ಬೆಲೆ ಏರಿಕೆಯಿಂದ ಭಾರತೀಯ ಸಂಸ್ಕರಣಾ ಕಂಪನಿಗಳಿಗೆ ಭಾರೀ ನಷ್ಟ ಉಂಟಾಗುತ್ತಿದೆ. ಕಳೆದ ವಾರ 3 ರೂಪಾಯಿ ಹೆಚ್ಚಳ ಮಾಡಿದರೂ, ಅದು ಕಂಪನಿಗಳಿಗೆ ಶೇ.25ರಷ್ಟು ನಷ್ಟ ತಪ್ಪಿಸಿತು. ಆದರೆ ಪರಿಸ್ಥಿತಿ ಇನ್ನೂ ಗಂಭೀರವಾಗಿರುವುದರಿಂದ, ಕಂಪನಿಗಳು ಮತ್ತೆ ದರ ಏರಿಕೆ ಮಾಡಲು ಮುಂದಾಗಿವೆ