LPG ಸಿಲಿಂಡರ್‌ ಗ್ರಾಹಕರಿಗೆ ಬಿಗ್ ಶಾಕ್ !! ಇನ್ಮುಂದೆ ಒಂದೇ ಗ್ಯಾಸ್​ ಕನೆಕ್ಷನ್ ಹೊಸ ರೂಲ್ಸ್ ?

ದೇಶದಲ್ಲಿ ಅನಿಲ ಬಿಕ್ಕಟ್ಟು ಇನ್ನೂ ಕಡಿಮೆಯಾಗಿಲ್ಲ. ಇದರ ಪರಿಣಾಮವಾಗಿ LPG ಸಿಲಿಂಡರ್ ಬೆಲೆ ಗಗನಕ್ಕೇರಿದೆ. ಈ ಪರಿಸ್ಥಿತಿಯಲ್ಲಿ ಕೇಂದ್ರ ಸರ್ಕಾರ ಗ್ರಾಹಕರಿಗೆ ಮತ್ತೊಂದು ಕಠಿಣ ನಿಯಮವನ್ನು ಜಾರಿಗೊಳಿಸಿದೆ – "ಒಂದು ಮನೆ, ಒಂದು ಗ್ಯಾಸ್‌ ಕಲೆಕ್ಷನ್" ಎಂಬ ನಿಯಮ.

LPG ಸಿಲಿಂಡರ್‌ ಗ್ರಾಹಕರಿಗೆ ಬಿಗ್ ಶಾಕ್ !! ಇನ್ಮುಂದೆ ಒಂದೇ ಗ್ಯಾಸ್​ ಕನೆಕ್ಷನ್ ಹೊಸ ರೂಲ್ಸ್ ?
LPG ಸಿಲಿಂಡರ್‌ ಗ್ರಾಹಕರಿಗೆ ಬಿಗ್ ಶಾಕ್ !! ಇನ್ಮುಂದೆ ಒಂದೇ ಗ್ಯಾಸ್​ ಕನೆಕ್ಷನ್ ಹೊಸ ರೂಲ್ಸ್ ?

ಅನೇಕ ಮನೆಗಳಲ್ಲಿ LPG ಸಿಲಿಂಡರ್ ಮತ್ತು PNG (ಪೈಪ್ಡ್ ನ್ಯಾಚುರಲ್ ಗ್ಯಾಸ್) ಎರಡೂ ಸಂಪರ್ಕಗಳಿವೆ. ಸರ್ಕಾರ ಈಗ ಇಂತಹ ಮನೆಗಳನ್ನು ಗುರುತಿಸಿ, ಎರಡೂ ಸಂಪರ್ಕಗಳನ್ನು ಏಕಕಾಲದಲ್ಲಿ ಬಳಸುವುದನ್ನು ಕಾನೂನುಬಾಹಿರವೆಂದು ಘೋಷಿಸಿದೆ. ಇದರ ಹಿಂದಿನ ಉದ್ದೇಶ ಬ್ಲ್ಯಾಕ್ ಮಾರುಕಟ್ಟೆಯನ್ನು ತಡೆಯುವುದು ಮತ್ತು ಸಬ್ಸಿಡಿ ನಿಜವಾದ ಅರ್ಹರಿಗೆ ತಲುಪುವಂತೆ ಮಾಡುವುದು.

ಹೊಸ ನಿಯಮದ ಪ್ರಕಾರ, PNG ಸಂಪರ್ಕ ಹೊಂದಿರುವ ಮನೆಗಳಿಗೆ ಇನ್ನು ಮುಂದೆ ಸಬ್ಸಿಡಿ ಹೊಂದಿರುವ LPG ಸಿಲಿಂಡರ್‌ಗಳನ್ನು ನೀಡುವುದಿಲ್ಲ. ಪೆಟ್ರೋಲಿಯಂ ಮತ್ತು ನೈಸರ್ಗಿಕ ಅನಿಲ ಸಚಿವಾಲಯವು ಅಗತ್ಯ ಸರಕುಗಳ ಕಾಯ್ದೆಯಡಿ ತಿದ್ದುಪಡಿ ಮಾಡಿ ಈ ನಿಯಮವನ್ನು ಜಾರಿಗೊಳಿಸಿದೆ. PNG ಹೊಂದಿರುವವರು ತಮ್ಮ LPG ಸಂಪರ್ಕವನ್ನು ಸ್ವಯಂ ಕಡಿತಗೊಳಿಸಬೇಕಾಗಿದೆ. ಜಾಗತಿಕ ಇಂಧನ ಬಿಕ್ಕಟ್ಟಿನ ನಡುವೆ LPG ಬೇಡಿಕೆಯನ್ನು ಕಡಿಮೆ ಮಾಡಿ PNG ಬಳಕೆಯನ್ನು ಉತ್ತೇಜಿಸುವುದು ಸರ್ಕಾರದ ಉದ್ದೇಶ.

ಗ್ರಾಹಕರಿಗೆ LPG ಸಂಪರ್ಕವನ್ನು ಕಡಿತಗೊಳಿಸಲು ಮೂರು ತಿಂಗಳ ಕಾಲಾವಕಾಶ ನೀಡಲಾಗಿದೆ. ಈ ನಿಯಮವು ಗ್ರಾಹಕರಿಗೆ ಮಾತ್ರವಲ್ಲದೆ ತೈಲ ಕಂಪನಿಗಳು ಮತ್ತು ಅನಿಲ ವಿತರಕರಿಗೂ ಅನ್ವಯಿಸುತ್ತದೆ. PNG ಹೊಂದಿರುವ ಮನೆಗಳಿಗೆ ಹೊಸ LPG ಸಂಪರ್ಕ ನೀಡಬಾರದು, ಈಗಾಗಲೇ ಇರುವ LPG ಸಿಲಿಂಡರ್‌ಗಳನ್ನು ಮರುಪೂರೈಕೆ ಮಾಡಬಾರದು ಎಂದು ಕಟ್ಟುನಿಟ್ಟಿನ ಸೂಚನೆ ನೀಡಲಾಗಿದೆ.

ಜಂಟಿ ಕಾರ್ಯದರ್ಶಿ ಸುಜಾತಾ ಶರ್ಮಾ ಅವರ ಪ್ರಕಾರ, ದೇಶಾದ್ಯಂತ ಎಷ್ಟು ಮನೆಗಳು ಎರಡೂ ಸಂಪರ್ಕಗಳನ್ನು ಬಳಸುತ್ತಿವೆ ಎಂಬುದರ ಮಾಹಿತಿ ಸರ್ಕಾರ ಸಂಗ್ರಹಿಸುತ್ತಿದೆ.