ಈ ತೀರ್ಪಿನಲ್ಲಿ ನ್ಯಾಯಾಲಯವು ಜೀವನಾಂಶದ (maintenance) ಉದ್ದೇಶವನ್ನು ಸ್ಪಷ್ಟವಾಗಿ ವಿವರಿಸಿದೆ. ಜೀವನಾಂಶವು ಕಷ್ಟವನ್ನು ತಡೆಗಟ್ಟಲು, ಬೇರ್ಪಟ್ಟ ನಂತರ ವ್ಯಕ್ತಿಯ ಘನತೆ ಮತ್ತು ಮೂಲಭೂತ ಅಗತ್ಯಗಳನ್ನು ಕಾಪಾಡಲು ಅಸ್ತಿತ್ವದಲ್ಲಿದೆ. ಅದು ಯಾವುದೇ ರೀತಿಯ ಐಷಾರಾಮಿ ಅಥವಾ ಅನ್ಯಾಯದ ಲಾಭವನ್ನು ನೀಡುವ ಸಾಧನವಾಗಬಾರದು ಎಂಬ ಸಂದೇಶವನ್ನು ನ್ಯಾಯಾಲಯವು ನೀಡಿದೆ.
ಡಿವೋರ್ಸ್ ಆದ ಮೇಲೆ ಮಹಿಳೆಯೊಬ್ಬಳು ತನ್ನ ಗಂಡನಿಂದ ತಿಂಗಳಿಗೆ ಬರೋಬ್ಬರಿ 6,16,300 ರೂಪಾಯಿ ಜೀವನಾಂಶ (Alimony) ಕೇಳಿದ್ದಾಳೆ! ಇದನ್ನು ಕೇಳಿ ಮಹಿಳಾ ನ್ಯಾಯಾಧೀಶರು ಶಾಕ್ ಆಗಿದ್ದಾರೆ. "ಒಬ್ಬಂಟಿ ಮಹಿಳೆಗೆ ತಿಂಗಳಿಗೆ ಇಷ್ಟೊಂದು ಖರ್ಚು ಹೇಗೆ ಸಾಧ್ಯ?" ಅಂತ ನೇರವಾಗಿ ಪ್ರಶ್ನೆ ಹಾಕಿದಾರೆ..
ಅದಕ್ಕೆ ಆಕೆಯ ವಕೀಲರು ಕೊಟ್ಟ ಉತ್ತರ ಇದೆಯಲ್ಲ, ಅದು ಇನ್ನೂ ಡೇಂಜರ್ ಆಗಿತ್ತು!
"ಆಕೆ ಬ್ರ್ಯಾಂಡೆಡ್ ಬಟ್ಟೆಗಳನ್ನೇ ಹಾಕೋದು, ವಿಐಪಿ ರೆಸ್ಟೋರೆಂಟ್ ಹೋಗೋದು, ಹಾಗಾಗಿ ಇಷ್ಟು ಹಣ ಬೇಕೇ ಬೇಕು" ಎಂದು ವಾದಿಸಿದ್ದಾರೆ. ಇದನ್ನ ಕೇಳಿ ಜಡ್ಜ್ ಫುಲ್ ಗರಂ ಆಗಿ "ನಿಮಗೆ ಇಷ್ಟೊಂದು ಶೋಕಿ ಇದ್ರೆ ನೀವೇ ದುಡಿಯಿರಿ, ಕಾನೂನಿನ ದುರುಪಯೋಗ ಮಾಡಿಕೊಂಡು ಇನ್ನೊಬ್ಬರ ಜೀವನ ಹಾಳು ಮಾಡಬೇಡಿ" ಅಂತ ಖಡಕ್ ವಾರ್ನಿಂಗ್ ಕೊಟ್ಟಿದ್ದಾರೆ.
ಜೀವನಾಂಶ ಅನ್ನೋದು ಜೀವನ ನಡೆಸೋಕೆ ಇರಬೇಕೇ ಹೊರತು, ಈ ತರ ಹೈ-ಫೈ ಶೋಕಿ ಮಾಡೋಕಲ್ಲ .
ನ್ಯಾಯಾಧೀಶರು ಕೊಟ್ಟ ಈ ಖಡಕ್ ತೀರ್ಪು ಕೇಳಿ ನೆಟ್ಟಿಗರೆಲ್ಲಾ ಫುಲ್ ಫಿದಾ ಆಗಿದಾರೆ.
ಜೀವನಾಂಶದ ಉದ್ದೇಶವು ಅವಲಂಬನೆ ಸೃಷ್ಟಿಸುವುದಲ್ಲ, ಬದಲಿಗೆ ಅವಶ್ಯಕತೆಯ ಆಧಾರದ ಮೇಲೆ ನ್ಯಾಯವನ್ನು ಒದಗಿಸುವುದಾಗಿದೆ. ಇದರಿಂದ, ಜೀವನಾಂಶವು ಕರುಣೆಯ ಹೆಸರಿನಲ್ಲಿ ಶಾಶ್ವತ ಅವಲಂಬನೆಗೆ ಕಾರಣವಾಗಬಾರದು ಎಂಬುದನ್ನು ನ್ಯಾಯಾಲಯ ಒತ್ತಿಹೇಳಿದೆ.