55 ವರ್ಷದ ಮಹಿಳೆಯೊಬ್ಬರು 25 ವರ್ಷದ ಯುವಕನನ್ನು ಮದುವೆಯಾಗಲು ಕೊಟ್ಟ ವರದಕ್ಷಿಣೆ !!ಎಷ್ಟು ಕೋಟಿ ನೋಡಿ ?

ಚೀನಾದಲ್ಲಿ ವಿಚಿತ್ರ ಮದುವೆ ಕಥೆ

55 ವರ್ಷದ ಮಹಿಳೆಯೊಬ್ಬರು 25 ವರ್ಷದ ಯುವಕನನ್ನು ಮದುವೆಯಾಗಲು ಕೊಟ್ಟ ವರದಕ್ಷಿಣೆ !!ಎಷ್ಟು ಕೋಟಿ ನೋಡಿ ?
55 ವರ್ಷದ ಮಹಿಳೆಯೊಬ್ಬರು 25 ವರ್ಷದ ಯುವಕನನ್ನು ಮದುವೆಯಾಗಲು ಕೊಟ್ಟ ವರದಕ್ಷಿಣೆ !!ಎಷ್ಟು ಕೋಟಿ ನೋಡಿ ?

ಹಾಂಗ್ ಕಾಂಗ್‌ನ ವೈದ್ಯಕೀಯ ಸೌಂದರ್ಯ ವರ್ಧಕ ಸಾಮ್ರಾಜ್ಯದ ಯಂಗ್ ಮೆರ್ರಿ ರಿಯಲ್ ಇಂಟರ್ನ್ಯಾಷನಲ್ ಗ್ರೂಪ್ ಸಂಸ್ಥಾಪಕಿ ಯು ವೆನ್‌ಹಾಂಗ್ (Yu Wenhong), 55 ವರ್ಷದ ವಯಸ್ಸಿನಲ್ಲಿ ತನ್ನ ಕಂಪನಿಯ ಮಾಜಿ ಮಾಡೆಲ್ ಲಿಯು ಯುಚೆನ್ (Liu Yuchen) ಎಂಬ 25 ವರ್ಷದ ಯುವಕನನ್ನು ಮದುವೆಯಾಗಿದ್ದಾರೆ.

68 ಕೋಟಿ ರೂಪಾಯಿ ವರದಕ್ಷಿಣೆ

ಮಾರ್ಚ್ 2026ರಲ್ಲಿ ನಡೆದ ಈ ಮದುವೆಯಲ್ಲಿ, ಯು ವೆನ್‌ಹಾಂಗ್ ತನ್ನ ಹೊಸ ಪತಿಗೆ 50 ಮಿಲಿಯನ್ ಯುವಾನ್ (ಭಾರತೀಯ ರೂಪಾಯಿಯಲ್ಲಿ ಸುಮಾರು 68 ಕೋಟಿ) ಮೌಲ್ಯದ ನಗದು, ಆಸ್ತಿ ಹಾಗೂ ಐಷಾರಾಮಿ ಕಾರುಗಳನ್ನು ವರದಕ್ಷಿಣೆಯಾಗಿ ನೀಡಿದ್ದಾರೆ.

ಆರನೇ ಮದುವೆ

ಮಾಧ್ಯಮ ವರದಿಗಳ ಪ್ರಕಾರ, ಇದು ಯು ವೆನ್‌ಹಾಂಗ್ ಅವರ ಆರನೇ ಮದುವೆ. ಅವರು 45ರ ವಯಸ್ಸಿನಲ್ಲಿ ಅಲ್ಬೇನಿಯನ್ ಮಾಡೆಲ್ ರೊಲ್ಯಾಂಡೊ ಲೆಕಾಜ್ ಅವರನ್ನು ಮದುವೆಯಾಗಿದ್ದರು. ಆ ಸಂಬಂಧವು ಒಂದು ದಶಕ ಮುಂದುವರಿದು, ಅವರಿಗೆ ಒಬ್ಬ ಮಗುವೂ ಜನಿಸಿದ್ದಾನೆ. ಹಿಂದಿನ ಸಂಬಂಧದಿಂದ ಮತ್ತೊಂದು ಮಗುವೂ ಇದೆ.

68 ಕೋಟಿ ರೂಪಾಯಿ ವರದಕ್ಷಿಣೆ!
ಮಾರ್ಚ್ 2026 ರಲ್ಲಿ ಅವರು ವಿವಾಹವಾದಾಗ, ಯು ನಗದು, ಆಸ್ತಿ ಮತ್ತು ಐಷಾರಾಮಿ ಕಾರುಗಳನ್ನು ಒಳಗೊಂಡಂತೆ ಅಪಾರ ವರದಕ್ಷಿಣೆಯನ್ನು ಸಹ ನೀಡಿದರು. ಒಟ್ಟೂ 68 ಕೋಟಿ ರೂಪಾಯಿಗಳ ಹಣ ಹಾಗೂ ದುಬಾರಿ ವಸ್ತುಗಳನ್ನು ವರದಕ್ಷಿಣೆಯಾಗಿ ನೀಡಲಾಗಿದ್ಯಂತೆ.

ಪ್ರೀತಿಯ ಕಥೆ

2001ರಲ್ಲಿ ಜನಿಸಿದ ಲಿಯು ಯುಚೆನ್, ಯು ವೆನ್‌ಹಾಂಗ್ ಅವರ ಕಂಪನಿಯಲ್ಲಿ ಮಾಡೆಲ್ ಆಗಿ ಕೆಲಸ ಮಾಡುತ್ತಿದ್ದನು. 2025ರಲ್ಲಿ ಇವರಿಬ್ಬರ ಪರಿಚಯ ಪ್ರೀತಿಯಾಗಿ ಮಾರ್ಪಟ್ಟಿತು. ಸಂಬಂಧ ಆರಂಭವಾದಾಗಲೇ ಯು, ಲಿಯುಗೆ ರೋಲ್ಸ್ ರಾಯ್ಸ್ ಮತ್ತು ಮರ್ಸಿಡಿಸ್ ಬೆಂಜ್ ಕಾರುಗಳನ್ನು ಉಡುಗೊರೆಯಾಗಿ ನೀಡಿದ್ದರು.

 ಒಟ್ಟಿನಲ್ಲಿ, 55 ವರ್ಷದ ಮಹಿಳೆ ತನ್ನ 25 ವರ್ಷದ ಪತಿಗೆ 68 ಕೋಟಿ ರೂಪಾಯಿಗಳ ವರದಕ್ಷಿಣೆ ನೀಡಿರುವುದು ಚೀನಾದಲ್ಲಿ ದೊಡ್ಡ ಸುದ್ದಿಯಾಗಿದೆ.