ಕೋಡಿಮಠ ಸ್ವಾಮೀಜಿ ಭವಿಷ್ಯ ನಿಜವಾಯಿತು !! ಮತ್ತೊಂದು ಗಂಡಾತರ ಕಾದಿದೆ ಎಚ್ಚರ

ದೇಶದಲ್ಲಿ ಸಕಾಲಿಕ ಮಳೆಯಾಗದೆ ಅಕಾಲಿಕವಾದ ಮಳೆಯಿಂದಾಗಿ ಜಲ ಕಂಟಕಗಳು ಎದುರಾಗಲಿದೆ. ಮಳೆ, ಗುಡುಗು, ಸಿಡಿಲು ಹೆಚ್ಚಾಗಿ ಭೂಮಿ ತಲ್ಲಣಗೊಳ್ಳಲಿದೆ ಎಂದು ಕೋಡಿಮಠದ ಡಾ.ಶಿವಾನಂದ ಶಿವಯೋಗಿ ರಾಜೇಂದ್ರ ಸ್ವಾಮೀಜಿ ಭವಿಷ್ಯ ನುಡಿದರು.

ಕೋಡಿಮಠ ಸ್ವಾಮೀಜಿ ಭವಿಷ್ಯ ನಿಜವಾಯಿತು  !! ಮತ್ತೊಂದು ಗಂಡಾತರ ಕಾದಿದೆ ಎಚ್ಚರ
ಕೋಡಿಮಠ ಸ್ವಾಮೀಜಿ ಭವಿಷ್ಯ ನಿಜವಾಯಿತು !! ಮತ್ತೊಂದು ಗಂಡಾತರ ಕಾದಿದೆ ಎಚ್ಚರ

ಜಡೆ ಸಂಸ್ಥಾನ ಮಠದಲ್ಲಿ ಸೋಮವಾರ ಮಾತನಾಡಿದ ಕೋಡಿಮಠದ ಶಿವಾನಂದ ಶಿವಯೋಗಿ ರಾಜೇಂದ್ರ ಸ್ವಾಮೀಜಿ, ರಾಜ್ಯದಲ್ಲಿ ಉತ್ತಮ ಮಳೆ-ಬೆಳೆ ಆಗಲಿದೆ ಎಂದು ಹೇಳಿದರು. ಆದರೆ ಆಕಸ್ಮಿಕ ಘಟನೆಗಳು ಸಂಭವಿಸಿ ದೊಡ್ಡ ದೊಡ್ಡ ನಗರಗಳು ಆಪತ್ತನ್ನು ಎದುರಿಸಬೇಕಾಗುತ್ತದೆ ಎಂದು ಸೂಚಿಸಿದರು.

ರಾಜಕಾರಣದ ಬಗ್ಗೆ ಕೇಳಿದಾಗ ಅವರು “ಅರಸನ ಅರಮನೆ ಕಳೆಗುಂದಿತು, ಪಟ್ಟದ ಆನೆ ಗಾಂಭೀರ್ಯದಿಂದ ನಡೆಯಿತು” ಎಂಬ ಮಾರ್ಮಿಕ ನುಡಿಗಳನ್ನು ಉಚ್ಚರಿಸಿದರು. ಸತ್ಯ ಯಾವಾಗಲೂ ಕಹಿಯಾಗಿರುತ್ತದೆ, ಅಸತ್ಯ ಸಿಹಿಯಾಗಿರುತ್ತದೆ ಎಂದು ಅವರು ಅಭಿಪ್ರಾಯಪಟ್ಟರು. ಜಾಗತಿಕ ಮಟ್ಟದಲ್ಲಿ ಎರಡು ತಲೆಗಳು ಉರುಳುತ್ತವೆ, ಯುದ್ಧ ಮತ್ತು ವಾಯು ದಾಳಿಯಿಂದ ನಗರಗಳು ನಲುಗುತ್ತವೆ ಎಂದು ಹಿಂದೆ ಹೇಳಿದ್ದೇ ಈಗ ನಿಜವಾಗಿದೆ ಎಂದು ನೆನಪಿಸಿದರು.

ಹಿಂಗಾರು ಮಳೆ ಹಾಗೂ ಗಾಳಿಯ ಆರ್ಭಟ ಹೆಚ್ಚಾಗುವ ಸಾಧ್ಯತೆ ಇದೆ. ಆದರೆ ಜನ ಜೀವನದ ಮೇಲೆ ಯಾವುದೇ ಪರಿಣಾಮ ಬೀರುವುದಿಲ್ಲ ಎಂದು ಅವರು ಭರವಸೆ ನೀಡಿದರು. ಜಡೆ ಸಂಸ್ಥಾನ ಮಠಕ್ಕೂ ಕೋಡಿಮಠಕ್ಕೂ ಬಹಳ ವರ್ಷಗಳಿಂದ ಅವಿನಾಭಾವ ಸಂಬಂಧವಿದೆ. ಈ ಭಾಗಕ್ಕೆ ಬಂದಾಗ ಯಾವಾಗಲೂ ಜಡೆ ಸಂಸ್ಥಾನ ಮಠಕ್ಕೆ ಭೇಟಿ ನೀಡುತ್ತೇನೆ ಎಂದು ಸ್ವಾಮೀಜಿ ಹೇಳಿದರು.

ಈ ಸಂದರ್ಭದಲ್ಲಿ ಜಡೆ ಸಂಸ್ಥಾನ ಮಠದ ಕುಮಾರ ಕೆಂಪಿನ ಸಿದ್ಧವೃಷಭೇಂದ್ರ ಸ್ವಾಮೀಜಿ, ವೀರಶೈವ ಲಿಂಗಾಯತ ತಾಲ್ಲೂಕು ಸಂಘಟನಾ ವೇದಿಕೆ ಅಧ್ಯಕ್ಷ ಪಂಚಾಕ್ಷರಪ್ಪಗೌಡ, ಆರ್.ಸಿ. ಪಾಟೀಲ್, ಸುಧಾ ಶಿವಪ್ರಸಾದ್, ಮಾಲಾ ಶಶಿಧರ, ಪ್ರಭಾವತಿ, ಶಿವಪ್ರಸಾದ್, ದೇಸಾಯಿ ಗೌಡ, ಗಂಗಾಧರ ಗೌಡ, ಶಿವಮೂರ್ತಿ ಗೌಡ, ವಿಜಯ್ ಕುಮಾರ್, ಪ್ರೇಮಾ, ನಾಗರಾಜ ಗೌಡ, ರಾಜು ಗೌಡ, ಸದಾಗೌಡ, ವಿರೂಪಾಕ್ಷಿ, ಸಂತೋಷ್ ಗೌಡ ಮೊದಲಾದವರು ಉಪಸ್ಥಿತರಿದ್ದರು.