ಕೇಂದ್ರ ಸರಕಾರದಿಂದ 70 ವರ್ಷ ದಾಟಿದವರಿಗೆ ಇನ್ನುಮುಂದೆ ಈ ಸೇವೆ ಸಂಪೂರ್ಣ ಉಚಿತ |

ಆಯುಷ್ಮಾನ್ ಭಾರತ್ ವಯವಂದನ ಯೋಜನೆ – ಹಿರಿಯ ನಾಗರಿಕರಿಗೆ ಹೊಸ ಆಶಾಕಿರಣ

ಕೇಂದ್ರ ಸರಕಾರದಿಂದ  70 ವರ್ಷ ದಾಟಿದವರಿಗೆ ಇನ್ನುಮುಂದೆ ಈ ಸೇವೆ ಸಂಪೂರ್ಣ ಉಚಿತ |
ಕೇಂದ್ರ ಸರಕಾರದಿಂದ 70 ವರ್ಷ ದಾಟಿದವರಿಗೆ ಇನ್ನುಮುಂದೆ ಈ ಸೇವೆ ಸಂಪೂರ್ಣ ಉಚಿತ |

ಮೋದಿ ಸರ್ಕಾರವು 70 ವರ್ಷ ದಾಟಿದ ಹಿರಿಯ ನಾಗರಿಕರಿಗೆ ವಿಶೇಷ ಆರೋಗ್ಯ ಭದ್ರತಾ ಯೋಜನೆ ರೂಪಿಸಿದೆ. ವಯಸ್ಸಾದಂತೆ ಆರೋಗ್ಯ ಸಮಸ್ಯೆಗಳು ಹೆಚ್ಚಾಗುವುದು ಸಹಜ, ಆದರೆ ದುಬಾರಿ ವೈದ್ಯಕೀಯ ವೆಚ್ಚಗಳು ಮಧ್ಯಮ ಮತ್ತು ಕೆಳವರ್ಗದ ಕುಟುಂಬಗಳಿಗೆ ದೊಡ್ಡ ಹೊರೆ. ಈ ಆತಂಕಕ್ಕೆ ಪರಿಹಾರವಾಗಿ ಆಯುಷ್ಮಾನ್ ಭಾರತ್ ವಯವಂದನ ಯೋಜನೆ ಜಾರಿಗೆ ಬಂದಿದೆ.

ಯೋಜನೆಯ ಪ್ರಮುಖ ಅಂಶಗಳು
70 ವರ್ಷ ಮೇಲ್ಪಟ್ಟ ಪ್ರತಿಯೊಬ್ಬರಿಗೂ ವಾರ್ಷಿಕ ₹5 ಲಕ್ಷದವರೆಗೆ ಉಚಿತ ಚಿಕಿತ್ಸಾ ಸೌಲಭ್ಯ.

ಆದಾಯದ ಮಿತಿ ಇಲ್ಲ – ಬಡವರಾಗಿರಲಿ ಅಥವಾ ಶ್ರೀಮಂತರಾಗಿರಲಿ, 70 ವರ್ಷ ದಾಟಿದರೆ ಈ ಸೌಲಭ್ಯ ಲಭ್ಯ.

ವಿಶೇಷ ವಯವಂದನ ಕಾರ್ಡ್ ನೀಡಲಾಗುತ್ತದೆ.

ಒಂದು ಕುಟುಂಬದಲ್ಲಿ ದಂಪತಿಗಳಿಬ್ಬರೂ 70 ವರ್ಷ ಮೇಲ್ಪಟ್ಟವರಾಗಿದ್ದರೆ, ಒಟ್ಟಾಗಿ ₹5 ಲಕ್ಷ ವಿಮೆ ಅನ್ವಯವಾಗುತ್ತದೆ.

ಈಗಾಗಲೇ ಸಾಮಾನ್ಯ ಆಯುಷ್ಮಾನ್ ಕಾರ್ಡ್ ಇದ್ದರೂ, 70 ವರ್ಷ ಮೇಲ್ಪಟ್ಟ ಸದಸ್ಯರಿಗೆ ಹೆಚ್ಚುವರಿ ₹5 ಲಕ್ಷ ವಿಮೆ ಸಿಗುತ್ತದೆ.

ಖಾಸಗಿ ಆರೋಗ್ಯ ವಿಮೆ ಹೊಂದಿದ್ದರೂ ಕೂಡ, ಈ ಯೋಜನೆಯ ಲಾಭ ಪಡೆಯಬಹುದು.

ನೋಂದಣಿ ಪ್ರಕ್ರಿಯೆ
ಆಧಾರ್ ಕಾರ್ಡ್ ಇದ್ದರೆ ಸಾಕು.

ben.in ಅಥವಾ gment.in ಪೋರ್ಟಲ್‌ಗೆ ಭೇಟಿ ನೀಡಿ.

Google Play Store ನಿಂದ ಆಯುಷ್ಮಾನ್ ಆಪ್ ಡೌನ್‌ಲೋಡ್ ಮಾಡಿ.

ಆಧಾರ್ ಸಂಖ್ಯೆ ಹಾಕಿ OTP ಮೂಲಕ ಲಾಗಿನ್ ಆಗಿ.

ನಂತರ eKYC ಪ್ರಕ್ರಿಯೆ ಪೂರ್ಣಗೊಳಿಸಿ.

ಚಿಕಿತ್ಸೆ ಪಡೆಯುವ ಸ್ಥಳಗಳು
ಸರ್ಕಾರ ಪಟ್ಟಿ ಮಾಡಿರುವ ಸರ್ಕಾರಿ ಆಸ್ಪತ್ರೆಗಳು ಹಾಗೂ ಆಯ್ಕೆಯಾದ ಖಾಸಗಿ ಆಸ್ಪತ್ರೆಗಳಲ್ಲಿ ನಗದು ರಹಿತ ಚಿಕಿತ್ಸೆ ಪಡೆಯಬಹುದು.

 ಈ ಯೋಜನೆ ಹಿರಿಯ ನಾಗರಿಕರಿಗೆ ದೊಡ್ಡ ನೆರವಾಗಲಿದ್ದು, ಕುಟುಂಬದ ಆರ್ಥಿಕ ಭಾರವನ್ನು ಕಡಿಮೆ ಮಾಡಲಿದೆ.