"ಕರ್ಣ ಧಾರಾವಾಹಿಯಲ್ಲಿ ರಿಯಾ ಎಂಟ್ರಿ – ಕಥೆಗೆ ಹೊಸ ತಿರುವು!"

ಜೀ ಕನ್ನಡದ ಜನಪ್ರಿಯ ಧಾರಾವಾಹಿ ಕರ್ಣ ಇದೀಗ ಹೊಸ ತಿರುವುಗಳನ್ನು ಪಡೆದುಕೊಂಡಿದೆ. ಇತ್ತೀಚಿನ ಎಪಿಸೋಡ್‌ಗಳಲ್ಲಿ ನಿಧಿ–ಕರ್ಣ ಪ್ರೇಮ ಕಥೆ ಗೊಂದಲದ ಹಾದಿ ಹಿಡಿದಿದ್ದು, ನಿತ್ಯಾಳ ಮದುವೆ ಹಾಗೂ ಹೊಸ ಪಾತ್ರ ರಿಯಾ ಎಂಟ್ರಿಯಿಂದ ಕಥೆ ಇನ್ನಷ್ಟು ಕುತೂಹಲ ಮೂಡಿಸಿದೆ.

"ಕರ್ಣ ಧಾರಾವಾಹಿಯಲ್ಲಿ ರಿಯಾ ಎಂಟ್ರಿ – ಕಥೆಗೆ ಹೊಸ ತಿರುವು!"

‘ಕರ್ಣ’ ಧಾರಾವಾಹಿ ಕಿರುತೆರೆಯ ಟಾಪ್‌ ಲಿಸ್ಟ್‌ನಲ್ಲಿ ಸ್ಥಾನ ಪಡೆದಿದೆ. ತನ್ನ ಹೆಸರಿಗೆ ತಕ್ಕಂತೆ ಕರ್ಣ ಶಾಂತ ಸ್ವಭಾವದವನು. ವೈದ್ಯ ವೃತ್ತಿಯಲ್ಲಿ ಯಾವತ್ತೂ ಅಕ್ರಮಕ್ಕೆ ಅವಕಾಶ ಕೊಡದೆ, ಸಿದ್ಧಾಂತ, ದಯೆ ಮತ್ತು ಕರುಣೆಯನ್ನೇ ಜೀವನದ ಆಧಾರವನ್ನಾಗಿ ಮಾಡಿಕೊಂಡಿರುವ ವ್ಯಕ್ತಿ. ಕುಟುಂಬವೇ ಅವನಿಗೆ ಪ್ರಾಣ. ಮನೆಯವರು ಎಷ್ಟೇ ಕಷ್ಟಕೊಟ್ಟರೂ, ಎಷ್ಟೇ ನೋವು ನೀಡಿದರೂ ಸಹಿಸಿಕೊಂಡು ಬದುಕು ಸಾಗಿಸುತ್ತಿರುವ ಅನಾಥ ಹುಡುಗ.

ಕರ್ಣನ ಪಾತ್ರದ ಹಿಂದೆ ಇನ್ನೂ ಬಹಿರಂಗವಾಗಬೇಕಾದ ರೋಚಕ ಕಥೆಯಿದೆ. ಅವನು ಅನಾಥನಾಗಲು ಕಾರಣವೇನು ಎಂಬುದು ಮುಂದೆ ತಿಳಿಯಬೇಕಿದೆ. ಈಗ ಅವನು ಇರುವ ಕುಟುಂಬ, ಪದವಿ, ಆಸ್ತಿ–ಅಂತಸ್ತು ಎಲ್ಲವೂ ಒಬ್ಬ ಶ್ರೀಮಂತ ತಾತನ ಕೊಡುಗೆ. ಆದರೆ ಆ ತಾತ ಈಗ ಇಲ್ಲ. ಅದರಿಂದಲೇ ಆ ಮನೆಯವರಿಗೆ ಕರ್ಣನನ್ನು ನೋಡಿದರೆ ಕೋಪ, ಅಸಹನೆ. ಆದರೂ ಕರ್ಣ ತಾಳ್ಮೆಯಿಂದ ಬದುಕುತ್ತಿರುವುದು ತಾತ ಕೊಟ್ಟ ಜೀವನ ಮೌಲ್ಯಗಳ ಕಾರಣ.

ಹೊಸ ನಾಯಕಿ ಎಂಟ್ರಿ!

ನಾನೀಗ ಮೊದಲೇ ಹೇಳಿದ ಹಾಗೆ, ಕರ್ಣ ಈಗ ರಿವೇಂಜ್‌ ಮೂಡ್‌ಗೆ ತಿರುಗಿದ್ದಾನೆ. ಸಾಕು ತಂದೆಯ ಕುತಂತ್ರಕ್ಕೆ, ನೀಚತನಕ್ಕೆ ಬುದ್ದ ಕಲಿಸುವುದಕ್ಕೆ ಹೊಸ ಪ್ಲ್ಯಾನ್ ರೂಪಿಸಿದ್ದಾನೆ. ಇದರಲ್ಲಿ ಸಾಕು ಸಹೋದರ ಅತ್ತೆ, ಸಾಕು ತಂದೆ ರಮೇಶ ಹಾಗೂ ಸಹೋದರ ಸಂಜುಗೆ ಗಾಳ ಬೀಸಿದ್ದಾನೆ ಕರ್ಣ. ಇದರ ಭಾಗವಾಗಿಯೇ ರಿಯಾ ಎಂಬ ಪಾತ್ರದ ಎಂಟ್ರಿಯಾಗಿದೆ. ಸಂಜುಗೆ ಮೊದಲ ನೋಟದಲ್ಲಿಯೇ ಡಿಕ್ಕಿ ಹೊಡೆದು ಕಣ್ಣು ಕಣ್ಣು ಕಲೆತಾಗಿದೆ. ಮುಂದೆ ಸಂಜುಗೆ ಮಾರಿ ಹಬ್ಬ ಇದ್ಯಾ? ರಿಯಾ ಪಾತ್ರ ಯಾವ ರೀತಿಯ     

ಕಥೆ ಮುಂದುವರಿಯುತ್ತೆ ಮುಂದಿನ ದಿನಗಳಲ್ಲಿ ತಿಳಿಯಲಿದೆ.