‘ಡ್ಯಾನ್ಸ್ ಕರ್ನಾಟಕ ಡ್ಯಾನ್ಸ್’ ಟ್ರೋಫಿ ಗೆದ್ದ ಸಿದ್ದೇಗೌಡ - ದೀಶಲ್ ಜೋಡಿಗೆ ಸಿಕ್ಕ ಬಹುಮಾನ ಹಣವೆಷ್ಟು ?

‘ಡ್ಯಾನ್ಸ್ ಕರ್ನಾಟಕ ಡ್ಯಾನ್ಸ್’ ಕಾರ್ಯಕ್ರಮದ ಗ್ರ್ಯಾಂಡ್ ಫಿನಾಲೆ ಅದ್ಧೂರಿಯಾಗಿ ನೆರವೇರಿತು. ಈ ಸ್ಪರ್ಧೆಯಲ್ಲಿ ‘ಲಕ್ಷ್ಮೀ ನಿವಾಸ’ ಧಾರಾವಾಹಿಯ ಸಿದ್ದೇಗೌಡ - ದೀಶಲ್ ಜೋಡಿ ಚಾಂಪಿಯನ್ ಆಗಿ ಹೊರಹೊಮ್ಮಿದರು. ಹ್ಯಾಟ್ರಿಕ್ ಹೀರೋ ಶಿವರಾಜ್‌ಕುಮಾರ್ ಅವರು ವಿಜೇತರ ಹೆಸರನ್ನು ಘೋಷಿಸಿ, ಟ್ರೋಫಿ ಹಾಗೂ ಬಹುಮಾನ ಹಣವನ್ನು ನೀಡಿದರು.

‘ಡ್ಯಾನ್ಸ್ ಕರ್ನಾಟಕ ಡ್ಯಾನ್ಸ್’ ಟ್ರೋಫಿ ಗೆದ್ದ  ಸಿದ್ದೇಗೌಡ - ದೀಶಲ್ ಜೋಡಿಗೆ ಸಿಕ್ಕ   ಬಹುಮಾನ ಹಣವೆಷ್ಟು ?
‘ಡ್ಯಾನ್ಸ್ ಕರ್ನಾಟಕ ಡ್ಯಾನ್ಸ್’ ಟ್ರೋಫಿ ಗೆದ್ದ ಸಿದ್ದೇಗೌಡ - ದೀಶಲ್ ಜೋಡಿಗೆ ಸಿಕ್ಕ ಬಹುಮಾನ ಹಣವೆಷ್ಟು ?

ವಿಜೇತರಾದ ಸಿದ್ದೇಗೌಡ - ದೀಶಲ್ ಜೋಡಿಗೆ ಪವರ್ ಸ್ಟಾರ್ ಪುನೀತ್ ರಾಜ್‌ಕುಮಾರ್ ಅವರ ಹೆಸರಿನ ಟ್ರೋಫಿ ಲಭಿಸಿದ್ದು, ಜೊತೆಗೆ 15 ಲಕ್ಷ ರೂಪಾಯಿ ಬಹುಮಾನ ಹಣವನ್ನು ಪಡೆದಿದ್ದಾರೆ. ಇವರಿಗೆ ನೃತ್ಯ ಸಂಯೋಜನೆ ಮಾಡಿದವರು ರುದ್ರ ಮಾಸ್ಟರ್.

ಮೊದಲ ರನ್ನರ್ ಅಪ್ ಸ್ಥಾನವನ್ನು ಎರಡು ಜೋಡಿಗಳು ಹಂಚಿಕೊಂಡಿವೆ. ಪೂಜಾ - ಅನೂಪ್ ಜೋಡಿಗೆ 5 ಲಕ್ಷ ರೂಪಾಯಿ ಬಹುಮಾನ ದೊರೆತರೆ, ಹರ್ಷ - ನಂದು ಜೋಡಿಗೆ 8 ಲಕ್ಷ ರೂಪಾಯಿ ಕ್ಯಾಶ್ ಪ್ರೈಝ್ ಲಭಿಸಿದೆ.

ಈ ಗ್ರ್ಯಾಂಡ್ ಫಿನಾಲೆಗೆ ತೀರ್ಪುಗಾರರಾಗಿ ಡಾ. ಶಿವರಾಜ್‌ಕುಮಾರ್, ರಚಿತಾ ರಾಮ್, ಅರ್ಜುನ್ ಜನ್ಯ ಹಾಗೂ ವಿಜಯ್ ರಾಘವೇಂದ್ರ ಉಪಸ್ಥಿತರಿದ್ದರು.

 ಒಟ್ಟಿನಲ್ಲಿ, ಸಿದ್ದೇಗೌಡ - ದೀಶಲ್ ಜೋಡಿ 15 ಲಕ್ಷ ರೂಪಾಯಿ ಬಹುಮಾನ ಹಣ ಹಾಗೂ ಅಪ್ಪು ಟ್ರೋಫಿ ಗೆದ್ದು, ‘ಡ್ಯಾನ್ಸ್ ಕರ್ನಾಟಕ ಡ್ಯಾನ್ಸ್’ ಕಾರ್ಯಕ್ರಮದ ಚಾಂಪಿಯನ್ ಪಟ್ಟವನ್ನು ತಮ್ಮದಾಗಿಸಿಕೊಂಡಿದ್ದಾರೆ.