ಬುಲಂದ್‌ಶಹರ್ ಜಿಲ್ಲೆಯ ಗಲಾವಟಿ ನಿವಾಸಿ ಆಕಾಶ್ ಕುಮಾರ್ ಮತ್ತು ಮಹಿಮಾರಾಣಿ ಮದುವೆಯಾದದ್ದು ಮೂರುವರೆ ವರ್ಷಗಳ ಹಿಂದೆ. ಪ್ರೀತಿಸಿ ಮದುವೆಯಾದರೂ, ಮಹಿಮಾರಾಣಿ ನಿಖಿಲ್ ಎಂಬಾತನೊಂದಿಗೆ ಅಕ್ರಮ ಸಂಬಂಧ ಹೊಂದಿದ್ದಾಳೆ ಎಂಬುದು ಪತಿಯ ಅನುಮಾನವಾಗಿತ್ತು. ಈ ಹಿಂದೆ ಗಂಡನ ವಿರುದ್ಧ ವರದಕ್ಷಿಣೆ ಕಿರುಕುಳದ ಆರೋಪ ಹೊರಿಸಿದ್ದರೂ, ನಿಖಿಲ್ ಜೊತೆ ಹೊಸ ಜೀವನ ಕಟ್ಟಿಕೊಳ್ಳಲು ಪತ್ನಿ ಯೋಜನೆ ಮಾಡಿಕೊಂಡಿದ್ದಾಳೆ.
ಇತ್ತೀಚೆಗೆ ಅಲಿಗಢದಲ್ಲಿ ಸೋದರಿ ಬಳಿ ಬಂದಿದ್ದ ಆಕಾಶ್ ಕುಮಾರ್, ನಗರದಲ್ಲಿ ಸುತ್ತಾಡುವಾಗ ಪತ್ನಿ ಮಹಿಮಾರಾಣಿ ನಿಖಿಲ್ ಜೊತೆ ಕಾಣಿಸಿಕೊಂಡಿದ್ದಾಳೆ. ಅವರಿಬ್ಬರನ್ನು ಹಿಂಬಾಲಿಸಿದ ಆಕಾಶ್, ಹೋಟೆಲ್‌ಗೆ ಹೋಗಿ ಆಧಾರ್ ಕಾರ್ಡ್ ನೀಡಿ ಕೋಣೆ ಪಡೆದಿರುವುದನ್ನು ಗಮನಿಸಿದ್ದಾನೆ. ತಕ್ಷಣವೇ 112 ಸಹಾಯವಾಣಿಗೆ ಕರೆ ಮಾಡಿ ಪೊಲೀಸರಿಗೆ ಮಾಹಿತಿ ನೀಡಿದ್ದಾನೆ.
ಪೊಲೀಸರ ಸಹಾಯದಿಂದ ಹೋಟೆಲ್ ಮೇಲೆ ದಾಳಿ ನಡೆಸಿದಾಗ, ಕೋಣೆ ಸಂಖ್ಯೆ 303ರಲ್ಲಿ ಇಬ್ಬರು ಇದ್ದದ್ದು ಪತ್ತೆಯಾಗಿದೆ. ನಿಖಿಲ್ ಬಟ್ಟೆ ಹಾಕಿಕೊಂಡು ಹೊರಬಂದಿದ್ದಾನೆ, ಪತ್ನಿ ಮುಖ ಮುಚ್ಚಿಕೊಂಡು ಹೊರಗೆ ಬಂದಿದ್ದಾಳೆ. ಈ ಘಟನೆಗೆ ಸಂಬಂಧಿಸಿದ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.
ಆಕಾಶ್ ಕುಮಾರ್ ಹೇಳುವಂತೆ, ಪತ್ನಿ ತನ್ನ ವಿರುದ್ಧ ಸುಳ್ಳು ಆರೋಪ ಹೊರಿಸಿ ನಿಖಿಲ್ ಜೊತೆ ಹೊಸ ಜೀವನ ಕಟ್ಟಿಕೊಳ್ಳಲು ಯೋಜಿಸಿದ್ದಾಳೆ. ಪ್ರಿಯಕರನೊಂದಿಗೆ ಲಾಡ್ಜ್‌ನಲ್ಲಿ ಇದ್ದಾಗಲೇ ಪತಿ ರೆಡ್ ಹ್ಯಾಂಡ್ ಆಗಿ ಹಿಡಿದಿರುವ ಈ ಘಟನೆ, ಕುಟುಂಬದ ಕಲಹ ಮತ್ತು ಅಕ್ರಮ ಸಂಬಂಧದ ಬಯಲಿಗೆಳೆಯುವ ಘಟನೆಯಾಗಿ ಹೊರಹೊಮ್ಮಿದೆ.