ಇತ್ತೀಚೆಗೆ ವಿಚ್ಛೇದನದ ನಂತರ ಪಾರ್ಟಿ ಮಾಡುವ ಟ್ರೆಂಡ್ ಹೆಚ್ಚುತ್ತಿರುವುದನ್ನು ನಾವು ನೋಡುತ್ತಿದ್ದೇವೆ. ಆದರೆ ಉತ್ತರ ಪ್ರದೇಶದ ಬಸ್ತಿ ಜಿಲ್ಲೆಯ 25 ವರ್ಷದ ಯುವಕನೊಬ್ಬ ತನ್ನ ವಿಚ್ಛೇದನವನ್ನು ಅತ್ಯಂತ ವಿಶಿಷ್ಟ ಮತ್ತು ಆಧ್ಯಾತ್ಮಿಕ ರೀತಿಯಲ್ಲಿ ಸಂಭ್ರಮಿಸಿದ್ದಾನೆ. ಕೋರ್ಟ್‌ನಲ್ಲಿ ಪತ್ನಿಯಿಂದ ವಿಚ್ಛೇದನ ಸಿಕ್ಕ ತಕ್ಷಣ ದೇವರಿಗೆ ಧನ್ಯವಾದ ಸಲ್ಲಿಸಿ, ಬರೋಬ್ಬರಿ 9 ಕಿಲೋಮೀಟರ್ ದೂರ ದೀಡ ನಮಸ್ಕಾರ ಹಾಕಿ ಹರಕೆ ತೀರಿಸಿದ್ದಾನೆ. ಈ ಘಟನೆಗೆ ಸಂಬಂಧಿಸಿದ ವಿಡಿಯೋ ಈಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.
ಬಸ್ತಿ ಜಿಲ್ಲೆಯ ನರ್ಖೋರಿಯಾ ಗ್ರಾಮದ ಜೋಗೇಶ್ ಎಂಬ ಯುವಕ ಈ ಸಾಹಸ ಮಾಡಿದ್ದಾರೆ. ನವರಾತ್ರಿಯ ಸಂದರ್ಭದಲ್ಲಿ ತಮ್ಮ ಗ್ರಾಮದಿಂದ ಸ್ಥಳೀಯ ‘ಬೈದಾ ಸಮಯ ಮಾತಾ’ ದೇವಸ್ಥಾನದವರೆಗೆ ನೆಲದ ಮೇಲೆ ಮಲಗಿ ಸಾಷ್ಟಾಂಗ ನಮಸ್ಕಾರ ಮಾಡುತ್ತಾ ಸಾಗಿದ್ದಾರೆ. ಬೆಳಿಗ್ಗೆ ಆರಂಭವಾದ ಈ ಯಾತ್ರೆ ಸುಮಾರು 12 ಗಂಟೆಗಳ ಕಾಲ ನಡೆದಿದ್ದು, ಇಡೀ ಹಾದಿಯಲ್ಲೂ ಉಪವಾಸವಿದ್ದು ‘ಜೈ ಶ್ರೀರಾಮ್’ ಮತ್ತು ‘ಜೈ ಬಜರಂಗಬಲಿ’ ಎಂದು ಘೋಷಣೆ ಕೂಗುತ್ತಾ ದೇವಸ್ಥಾನ ತಲುಪಿದ್ದಾರೆ.
At a time when divorce parties are emerging as a new hot invite, a 25-year-old man from Basti celebrated the personal milestone with a unique thanksgiving for the local deity.
— Hate Detector ???? (@HateDetectors) March 30, 2026
Making the most of the auspicious occasion of Navratri, the newly-divorced man undertook a 9-km… pic.twitter.com/SZlQqvRMyn
ಜೋಗೇಶ್ 2022ರಲ್ಲಿ ಮದುವೆಯಾಗಿದ್ದರು. ಆದರೆ ಮದುವೆಯಾದ ಮೊದಲ ದಿನದಿಂದಲೇ ದಂಪತಿಗಳ ನಡುವೆ ತೀವ್ರ ಗಲಾಟೆಗಳು ಶುರುವಾಗಿದ್ದವು. ಇದರಿಂದ ಬೇಸತ್ತ ಅವರು ನ್ಯಾಯಾಲಯದ ಮೊರೆ ಹೋಗಿ, “ನನಗೆ ಈ ಕಿರಿಕಿರಿ ತುಂಬಿದ ದಾಂಪತ್ಯದಿಂದ ಮುಕ್ತಿ ಸಿಕ್ಕರೆ ದೇವಾಲಯಕ್ಕೆ ದೀಡ ನಮಸ್ಕಾರ ಮಾಡುತ್ತೇನೆ” ಎಂದು ಹರಕೆ ಹೊತ್ತಿದ್ದರು. 2026 ಜನವರಿಯಲ್ಲಿ ವಿಚ್ಛೇದನ ಪ್ರಕ್ರಿಯೆ ಪೂರ್ಣಗೊಂಡ ಹಿನ್ನೆಲೆಯಲ್ಲಿ ಅವರು ತಮ್ಮ ಹರಕೆಯನ್ನು ತೀರಿಸಿದ್ದಾರೆ.
ಈ ಯಾತ್ರೆಗೆ ಮುಂಚಿತವಾಗಿ ಉಪವಿಭಾಗಾಧಿಕಾರಿಗಳಿಂದ ಅನುಮತಿ ಪಡೆದಿದ್ದ ಜೋಗೇಶ್, ಯಾತ್ರೆಯ ಸಮಯದಲ್ಲಿ ಯಾವುದೇ ಅಹಿತಕರ ಘಟನೆ ನಡೆಯದಂತೆ ಪೊಲೀಸರು ಭದ್ರತೆ ಒದಗಿಸಿದ್ದರು. ಕುಟುಂಬದ ಸದಸ್ಯರೂ ಅವರ ಜೊತೆಗಿದ್ದರು. ದೇವಸ್ಥಾನ ತಲುಪಿದ ನಂತರ ಅವರು ತೆಂಗಿನಕಾಯಿ ಒಡೆದು ವಿಶೇಷ ಪೂಜೆ ಸಲ್ಲಿಸಿ ಉಪವಾಸವನ್ನು ಅಂತ್ಯಗೊಳಿಸಿದರು.