ರಾಜ್ಯದಲ್ಲಿ ಪುರುಷರಿಗೆ ಹೊಸ ಗ್ಯಾರೆಂಟಿ ಘೋಷಣೆ !! ಏನದು ನೋಡಿ ?

ಬಾಗಲಕೋಟೆ ಉಪಚುನಾವಣೆ – ಯತ್ನಾಳ್ ಘೋಷಣೆ

ರಾಜ್ಯದಲ್ಲಿ ಪುರುಷರಿಗೆ  ಹೊಸ ಗ್ಯಾರೆಂಟಿ ಘೋಷಣೆ !! ಏನದು ನೋಡಿ ?
ರಾಜ್ಯದಲ್ಲಿ ಪುರುಷರಿಗೆ ಹೊಸ ಗ್ಯಾರೆಂಟಿ ಘೋಷಣೆ !! ಏನದು ನೋಡಿ ?

ಬಾಗಲಕೋಟೆ ಉಪಚುನಾವಣೆ ದಿನದಿಂದ ದಿನಕ್ಕೆ ರಂಗೇರುತ್ತಿದೆ. ಶಾಸಕ ಬಾಸನಗೌಡ ಪಾಟೀಲ್ ಯತ್ನಾಳ್ ಅವರು ರಾಜ್ಯ ಕಾಂಗ್ರೆಸ್ ಸರ್ಕಾರದ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ್ದಾರೆ. ಬಿಜೆಪಿ ಅಭ್ಯರ್ಥಿ ವೀರಣ್ಣ ಚರಂತಿ ಮಟ್ಟ ಅವರ ಪರವಾಗಿ ಬಿರುಸಿನ ಪ್ರಚಾರ ಕೈಗೊಂಡಿರುವ ಯತ್ನಾಳ್, ಆಡಳಿತ ಪಕ್ಷದ ಗ್ಯಾರಂಟಿ ಯೋಜನೆಗಳನ್ನು ಕಟುವಾಗಿ ಟೀಕಿಸುತ್ತಿದ್ದಾರೆ.

ಯತ್ನಾಳ್ ಅವರ ಘೋಷಣೆ
“ನಾನು ಮುಖ್ಯಮಂತ್ರಿ ಆದರೆ ಮಹಿಳೆಯರಿಗೆ ತಿಂಗಳಿಗೆ ₹3000 ಹಾಗೂ ಪುರುಷರಿಗೆ ₹2000 ನೀಡುತ್ತೇನೆ” ಎಂದು ಭರ್ಜರಿ ಘೋಷಣೆ ಮಾಡಿದ್ದಾರೆ.

ಕಾಂಗ್ರೆಸ್ ಸರ್ಕಾರ ನೀಡುತ್ತಿರುವ ಗ್ಯಾರಂಟಿ ಯೋಜನೆಗಳು ಕೇವಲ ಕಣ್ಣೆರಿಸುವ ತಂತ್ರ ಎಂದು ಟೀಕಿಸಿದ್ದಾರೆ.

ಯುವಕರಿಗೆ ಉದ್ಯೋಗ ನೀಡುವುದು ಸರ್ಕಾರದ ಮೊದಲ ಆದ್ಯತೆಯಾಗಬೇಕು, ಕೇವಲ ₹2000 ನೀಡುವುದರಿಂದ ಜನರ ಬದುಕು ಸುಧಾರಿಸುವುದಿಲ್ಲ ಎಂದು ಹೇಳಿದ್ದಾರೆ.

ಸರ್ಕಾರದ ವಿರುದ್ಧ ಟೀಕೆ
ಉಚಿತ ಯೋಜನೆಗಳ ಹೆಸರಿನಲ್ಲಿ ಜನರ ಮೇಲೆ ಹೆಚ್ಚುವರಿ ತೆರಿಗೆ ಹೊರಿಸಲಾಗುತ್ತಿದೆ ಎಂದು ಆರೋಪಿಸಿದ್ದಾರೆ.

ಮರಣೋತ್ತರ ಪ್ರಮಾಣಪತ್ರ ಶುಲ್ಕವನ್ನು ₹25ರಿಂದ ₹100ಕ್ಕೆ ಏರಿಸಲಾಗಿದೆ ಎಂದು ಉದಾಹರಣೆ ನೀಡಿದ್ದಾರೆ.

ಪ್ರತಿ ಯೂನಿಟ್ ವಿದ್ಯುತ್ ದರವನ್ನು ₹7ರಿಂದ 20 ಪೈಸೆ ಹೆಚ್ಚಿಸುವ ಮೂಲಕ ಜನರ ಜೇಬಿಗೆ ಕತ್ತರಿ ಹಾಕಲಾಗಿದೆ ಎಂದು ಕಿಡಿಕಾರಿದ್ದಾರೆ.

 ಹೀಗಾಗಿ, ಮಹಿಳೆಯರ ಜೊತೆಗೆ ಪುರುಷರಿಗೂ ₹2000 ನೀಡುತ್ತೇನೆ ಎಂದು ಘೋಷಣೆ ಮಾಡಿದ ಯತ್ನಾಳ್ ಅವರ ಹೇಳಿಕೆ ರಾಜಕೀಯ ವಲಯದಲ್ಲಿ ಚರ್ಚೆಗೆ ಕಾರಣವಾಗಿದೆ.

ಸ್ನೇಹಿತರೆ, ಈ ಬಗ್ಗೆ ನಿಮ್ಮ ಅಭಿಪ್ರಾಯವನ್ನು ಹಂಚಿಕೊಳ್ಳಿ.