ಖ್ಯಾತ ನಿರ್ದೇಶಕ ನನ್ನ ಖಾಸಗಿ ಅಂಗ ಮುಟ್ಟಿದ್ದಾನೆ’; ಎಂದ ಮೊನಾಲಿಸಾ ಗಂಭೀರ ಆರೋಪ !! ವಿಡಿಯೋ ವೈರಲ್

ಪ್ರಯಾಗ್ರಾಜ್ ಕುಂಭಮೇಳ ಖ್ಯಾತಿಯ ಮೊನಾಲಿಸಾ ಭೋಸ್ಲೆ ಇತ್ತೀಚೆಗೆ ತಮ್ಮ ಮುಸ್ಲಿಂ ಗೆಳೆಯ ಫರ್ಮಾನ್ ಖಾನ್ ಅವರನ್ನು ಮದುವೆಯಾದ ನಂತರ ವಿವಾದದಲ್ಲಿ ಸಿಲುಕಿದ್ದಾರೆ. ಈ ವಿವಾದದ ಮಧ್ಯೆ, ಅವರ ಚೊಚ್ಚಲ ಚಿತ್ರ ‘ದಿ ಡೈರಿ ಆಫ್ ಮಣಿಪುರ’ ನಿರ್ದೇಶಕ ಸನೋಜ್ ಮಿಶ್ರಾ ‘ಲವ್ ಜಿಹಾದ್’ ಎಂದು ಆರೋಪಿಸಿದ್ದರು. ಇದಕ್ಕೆ ಪ್ರತಿಯಾಗಿ ಮೊನಾಲಿಸಾ ಸ್ಪಷ್ಟನೆ ನೀಡುವುದರ ಜೊತೆಗೆ ನಿರ್ದೇಶಕರ ವಿರುದ್ಧ ಗಂಭೀರ ಆರೋಪಗಳನ್ನು ಹೊರಿಸಿದ್ದಾರೆ.

ಖ್ಯಾತ ನಿರ್ದೇಶಕ ನನ್ನ ಖಾಸಗಿ ಅಂಗ ಮುಟ್ಟಿದ್ದಾನೆ’;   ಎಂದ ಮೊನಾಲಿಸಾ ಗಂಭೀರ ಆರೋಪ !! ವಿಡಿಯೋ ವೈರಲ್
ಖ್ಯಾತ ನಿರ್ದೇಶಕ ನನ್ನ ಖಾಸಗಿ ಅಂಗ ಮುಟ್ಟಿದ್ದಾನೆ’; ಎಂದ ಮೊನಾಲಿಸಾ ಗಂಭೀರ ಆರೋಪ !! ವಿಡಿಯೋ ವೈರಲ್

ಮೊನಾಲಿಸಾ ಹೇಳುವಂತೆ, ಸನೋಜ್ ಮಿಶ್ರಾ ಚಲನಚಿತ್ರಗಳ ಹೆಸರಿನಲ್ಲಿ ಅಪ್ರಾಪ್ತ ಹುಡುಗಿಯರೊಂದಿಗೆ ಅನುಚಿತವಾಗಿ ವರ್ತಿಸಿದ್ದಾರೆ. ಅಲ್ಲದೆ, ಶೂಟಿಂಗ್ ಸಮಯದಲ್ಲಿ ತಮ್ಮ ದೇಹದ ಭಾಗಗಳನ್ನು ಸ್ಪರ್ಶಿಸುವ ಮೂಲಕ ಲೈಂಗಿಕ ಕಿರುಕುಳ ನೀಡಿದರೆಂದು ಅವರು ಆರೋಪಿಸಿದ್ದಾರೆ. “ಅವರು ತುಂಬಾ ಕೆಟ್ಟ ಮತ್ತು ಅಸಹ್ಯಕರ ವ್ಯಕ್ತಿ. ಅವರ ಹೆಸರನ್ನು ಹೇಳುವುದೇ ನನಗೆ ನಾಚಿಕೆಯಾಗುತ್ತದೆ” ಎಂದು ಮೊನಾಲಿಸಾ ಹೇಳಿದ್ದಾರೆ.

ಅವರು ತಮ್ಮ ಪತಿ ಫರ್ಮಾನ್ ಖಾನ್ ಜೊತೆಗೂ ಜೀವ ಬೆದರಿಕೆ ಎದುರಿಸುತ್ತಿರುವುದಾಗಿ ಹೇಳಿ, ಕೇಂದ್ರ ಹಾಗೂ ಕೇರಳ, ಮಧ್ಯಪ್ರದೇಶ ರಾಜ್ಯ ಸರ್ಕಾರಗಳಿಂದ ಸಹಾಯವನ್ನು ಕೋರಿದ್ದಾರೆ. ನಿರ್ದೇಶಕರು ತಮ್ಮ ಬಗ್ಗೆ ಕೆಟ್ಟದಾಗಿ ಮಾತನಾಡಿ, ಚಲನಚಿತ್ರಗಳಲ್ಲಿ ಅವಕಾಶ ನೀಡದಂತೆ ಮಾಡುತ್ತಿದ್ದಾರೆ ಎಂಬುದನ್ನೂ ಅವರು ದೂರಿದ್ದಾರೆ.

“ನನ್ನ ಮೊದಲ ಚಿತ್ರವಾಗಿದ್ದರಿಂದ ನಾನು ಹೊಂದಿಕೊಳ್ಳಬೇಕಾಯಿತು. ಆ ಸಮಯದಲ್ಲಿ ಯಾರಿಗೂ ಹೇಳಲು ಸಾಧ್ಯವಾಗಲಿಲ್ಲ, ಆದ್ದರಿಂದ ಮೌನವಾಗಿದ್ದೆ” ಎಂದು ಮೊನಾಲಿಸಾ ತಮ್ಮ ಕಹಿ ಅನುಭವವನ್ನು ಹಂಚಿಕೊಂಡಿದ್ದಾರೆ.