ಪ್ರತಿಯೊಬ್ಬ ಜಾಗತಿಕ ನಾಯಕನ ದುರ್ಮರಣವು ವಿಶ್ವದ ರಾಜಕೀಯದಲ್ಲಿ ದೊಡ್ಡ ಬದಲಾವಣೆಗಳನ್ನು ತರಬಲ್ಲದು. ಇತ್ತೀಚೆಗೆ ಖಮೇನಿ ಹತ್ಯೆಯ ವಿಚಾರವು ಜಗತ್ತಿನಾದ್ಯಂತ ಚರ್ಚೆಗೆ ಕಾರಣವಾಗಿದೆ. ಈ ಘಟನೆ ಬೆನ್ನಲ್ಲೇ ದೇಶಗಳ ನಡುವೆ ಯುದ್ಧದ ಭೀತಿ ಹೆಚ್ಚುತ್ತಿದೆ ಎಂಬ ಅಭಿಪ್ರಾಯಗಳು ವ್ಯಕ್ತವಾಗುತ್ತಿವೆ.
ಕೋಡಿಮಠದ ಸ್ವಾಮಿಗಳಾದ ಕೋಡಿಶ್ರೀಗಳು ಹಿಂದೆ ಮಾಡಿದ ಭವಿಷ್ಯವಾಣಿಯಲ್ಲಿ “ಜಾಗತಿಕ ನಾಯಕನೊಬ್ಬ ದುರ್ಮರಣ ಹೊಂದುತ್ತಾನೆ, ಅದರ ಪರಿಣಾಮವಾಗಿ ದೇಶ ದೇಶಗಳ ನಡುವೆ ಸಂಘರ್ಷ ಉಂಟಾಗುತ್ತದೆ” ಎಂದು ಹೇಳಿದ್ದರು. ಈಗ ಖಮೇನಿ ಹತ್ಯೆಯ ನಂತರ ಆ ಭವಿಷ್ಯವಾಣಿ ಸತ್ಯವಾಗಿದೆಯೇ ಎಂಬ ಚರ್ಚೆ ನಡೆಯುತ್ತಿದೆ. ಅವರು ಹೇಳಿದ ಭವಿಷ್ಯ ಈಗ ಸತ್ಯವಾಗ್ತಿದೆ ಖಮೇನಿ ಹತ್ಯೆಯಾಗಿದೆ ವಿಶ್ವವು ಕೂಡ ಯುದ್ಧದ ಭೀತಿಯನ್ನ ಎದುರಿಸಬೇಕಾಗುತ್ತಾ ಗೊತ್ತಿಲ್ಲ ಯಾಕೆಂದ್ರೆ ಈಗ ಇಸ್ರೇಲ್ ಮತ್ತು ಅಮೆರಿಕ ಈಕಡೆ ಇರಾನ್ ಮೇಲೆ ದಾಳಿ ಮಾಡುತ್ತಿರುವಂತದ್ದು ಇಡೀ ಜಗತ್ತಿಗೆ ಆವರಿಸಿಕೊಳ್ಳುತ್ತಾ ನೋಡಬೇಕಿದೆ ದೇಶ ದೇಶಗಳ ನಡುವೆ ಯುದ್ಧ ಆಗಲಿದೆ ಅಂತ ಕೂಡಿ ಶ್ರೀ ಹೇಳಿದ್ರು ಈಗ ಅದೇ ರೀತಿಯಾಗಿ ಅಮೆರಿಕಾ ಇಸ್ರೇಲ್ ಇರಾನ್ ಮೇಲೆ ದಾಳಿ ಮಾಡಿತು ಈಗ ಇರಾನ್ ಪ್ರತೀಕಾರದ ಕಹಳೆಯನ್ನ ಮೊಳಗಿಸಿದೆ
ಇಸ್ರೇಲ್ ಮತ್ತು ಅಮೆರಿಕ ಇರಾನ್ ವಿರುದ್ಧ ದಾಳಿ ನಡೆಸಿರುವುದರಿಂದ ಪರಿಸ್ಥಿತಿ ಮತ್ತಷ್ಟು ಗಂಭೀರವಾಗಿದೆ. ಇರಾನ್ ಪ್ರತೀಕಾರದ ಘೋಷಣೆ ಮಾಡಿದ್ದು, ಮಸೀದಿಯ ಮೇಲೆ ಕೆಂಪು ಧ್ವಜ ಹಾರಿಸಿ ಪ್ರತೀಕಾರದ ಶಪಥ ತೆಗೆದುಕೊಂಡಿದೆ. ಇದರಿಂದ ಯುದ್ಧದ ಭೀತಿ ಇನ್ನಷ್ಟು ಗಟ್ಟಿಯಾಗುತ್ತಿದೆ.
ಈ ಹಿನ್ನಲೆಯಲ್ಲಿ, ಕೋಡಿಶ್ರೀಗಳ ಭವಿಷ್ಯವಾಣಿ “ಜಾಗತಿಕ ನಾಯಕನೊಬ್ಬ ದುರ್ಮರಣ ಹೊಂದುತ್ತಾನೆ ಮತ್ತು ದೇಶಗಳ ನಡುವೆ ಯುದ್ಧದ ಭೀತಿ ಉಂಟಾಗುತ್ತದೆ” ಎಂಬುದು ಈಗಿನ ಪರಿಸ್ಥಿತಿಗೆ ಹೊಂದಿಕೊಂಡಂತಿದೆ ಎಂದು ಕೆಲವರು ಹೇಳುತ್ತಿದ್ದಾರೆ.