ರಾಜ್ಯ ಸರಕಾರದಿಂದ ಉದ್ಯೋಗಿನಿ ಯೋಜನೆಯ ಮೂಲಕ 3 ಲಕ್ಷದವರೆಗೆ ಸಾಲ ಸೌಲಭ್ಯ! 1.5 ಲಕ್ಷ ಸಬ್ಸಿಡಿ ಸಿಗುತ್ತೆ.! ಅರ್ಜಿ ಸಲ್ಲಿಸಿ

ಉದ್ಯೋಗಿನಿ ಯೋಜನೆ ವಿವರಗಳು
ಉದ್ಯೋಗಿನಿ ಯೋಜನೆ ಕರ್ನಾಟಕ ರಾಜ್ಯ ಮಹಿಳಾ ಅಭಿವೃದ್ಧಿ ನಿಗಮದ ಮೂಲಕ ಮಹಿಳೆಯರ ಸ್ವಾವಲಂಬನೆಗಾಗಿ ರೂಪಿಸಲಾದ ಮಹತ್ವದ ಯೋಜನೆ. ಈ ಯೋಜನೆಯ ಮುಖ್ಯ ಉದ್ದೇಶ ಮಹಿಳೆಯರನ್ನು ಸ್ವ ಉದ್ಯೋಗದತ್ತ ಪ್ರೇರೇಪಿಸಿ, ಆರ್ಥಿಕವಾಗಿ ಬಲಪಡಿಸುವುದು.

ರಾಜ್ಯ ಸರಕಾರದಿಂದ  ಉದ್ಯೋಗಿನಿ ಯೋಜನೆಯ ಮೂಲಕ 3 ಲಕ್ಷದವರೆಗೆ ಸಾಲ ಸೌಲಭ್ಯ! 1.5 ಲಕ್ಷ ಸಬ್ಸಿಡಿ ಸಿಗುತ್ತೆ.! ಅರ್ಜಿ ಸಲ್ಲಿಸಿ
ರಾಜ್ಯ ಸರಕಾರದಿಂದ ಉದ್ಯೋಗಿನಿ ಯೋಜನೆಯ ಮೂಲಕ 3 ಲಕ್ಷದವರೆಗೆ ಸಾಲ ಸೌಲಭ್ಯ! 1.5 ಲಕ್ಷ ಸಬ್ಸಿಡಿ ಸಿಗುತ್ತೆ.! ಅರ್ಜಿ ಸಲ್ಲಿಸಿ

ಮಹಿಳೆಯರ ಸ್ವಂತ ಉದ್ಯೋಗಕ್ಕೆ ಹೊಸ ಆಶಾಕಿರಣ! ಕರ್ನಾಟಕದ ಉದ್ಯೋಗಿನಿ ಯೋಜನೆ

ಕರ್ನಾಟಕದಲ್ಲಿ ಮಹಿಳೆಯರ ಆರ್ಥಿಕ ಸ್ವಾತಂತ್ರ್ಯವನ್ನು ಬೆಳೆಸುವ ದಿಕ್ಕಿನಲ್ಲಿ ಸರ್ಕಾರವು ಹಲವು ಕ್ರಮಗಳನ್ನು ಕೈಗೊಂಡಿದೆ. ಅವುಗಳಲ್ಲಿ ಕರ್ನಾಟಕ ರಾಜ್ಯ ಮಹಿಳಾ ಅಭಿವೃದ್ಧಿ ನಿಗಮವು (ಕೆಎಸ್‌ಡಬ್ಲ್ಯೂಡಿಸಿ) ಜಾರಿಗೊಳಿಸಿರುವ ಉದ್ಯೋಗಿನಿ ಯೋಜನೆಯು ವಿಶಿಷ್ಟವಾದ ಸ್ಥಾನ ಪಡೆದಿದೆ.
ಈ ಯೋಜನೆಗೆ ಅರ್ಜಿ ಸಲ್ಲಿಸಲು ಕೆಲವು ಮೂಲಭೂತ ಅರ್ಹತೆಗಳು ಇವೆ. ಕರ್ನಾಟಕದ ಖಾಯಂ ನಿವಾಸಿಯಾಗಿರಬೇಕು. ವಯಸ್ಸು ೧೮ ರಿಂದ ೫೫ ವರ್ಷಗಳ ನಡುವೆ ಇರಬೇಕು.

ಕುಟುಂಬದ ವಾರ್ಷಿಕ ಆದಾಯ ಪರಿಶಿಷ್ಟ ಜಾತಿ ಮತ್ತು ಪಂಗಡದ ಮಹಿಳೆಯರಿಗೆ ೨,೦೦,೦೦೦ ರೂಪಾಯಿಗಿಂತ ಕಡಿಮೆಯಾಗಿರಬೇಕು. ಸಾಮಾನ್ಯ ವರ್ಗದವರಿಗೆ ೧,೫೦,೦೦೦ ರೂಪಾಯಿಗಿಂತ ಕಡಿಮೆ ಇರಬೇಕು.

ಸಾಲ ಸೌಲಭ್ಯ
ಮಹಿಳೆಯರು ಬ್ಯಾಂಕ್‌ಗಳ ಮೂಲಕ ₹1 ಲಕ್ಷದಿಂದ ₹3 ಲಕ್ಷದವರೆಗೆ ಸಾಲ ಪಡೆಯಬಹುದು.

ಸಾಮಾನ್ಯ ಹಾಗೂ ವಿಶೇಷ ವರ್ಗದ ಮಹಿಳೆಯರಿಗೆ 30% ಸಬ್ಸಿಡಿ ದೊರೆಯುತ್ತದೆ.

SC/ST ವರ್ಗದ ಮಹಿಳೆಯರಿಗೆ 50% ಸಬ್ಸಿಡಿ ಸಿಗುತ್ತದೆ.

ಅಂದರೆ, ₹3 ಲಕ್ಷದ ಸಾಲ ಪಡೆದರೆ, ₹1.5 ಲಕ್ಷದವರೆಗೆ ಸರ್ಕಾರದಿಂದ ಸಬ್ಸಿಡಿ ದೊರೆಯಬಹುದು.

ಅರ್ಹತೆ
ಅರ್ಜಿ ಸಲ್ಲಿಸುವವರು ಕರ್ನಾಟಕದ ಶಾಶ್ವತ ನಿವಾಸಿ ಆಗಿರಬೇಕು.

ವಯೋಮಿತಿ: 18 ರಿಂದ 55 ವರ್ಷಗಳೊಳಗೆ ಇರಬೇಕು.

ಕುಟುಂಬದ ವಾರ್ಷಿಕ ಆದಾಯ ₹2 ಲಕ್ಷಕ್ಕಿಂತ ಕಡಿಮೆ ಇರಬೇಕು.

ಸ್ವ ಉದ್ಯೋಗ ಅಥವಾ ಸಣ್ಣ ವ್ಯಾಪಾರ ಆರಂಭಿಸಲು ಪ್ರಾಜೆಕ್ಟ್ ವರದಿ ಸಲ್ಲಿಸಬೇಕು.

ಅಗತ್ಯ ದಾಖಲೆಗಳು
ಆಧಾರ್ ಕಾರ್ಡ್

ವಾಸಸ್ಥಳ ಪ್ರಮಾಣ ಪತ್ರ / ಮತದಾರರ ಗುರುತಿನ ಚೀಟಿ / ರೇಷನ್ ಕಾರ್ಡ್

ಬ್ಯಾಂಕ್ ಖಾತೆಗೆ ಆಧಾರ್ ಲಿಂಕ್ ಮಾಡಿರಬೇಕು

ಆದಾಯ ಪ್ರಮಾಣ ಪತ್ರ

ಪ್ರಾಜೆಕ್ಟ್ ವರದಿ (ವ್ಯಾಪಾರ/ಉದ್ಯಮದ ವಿವರ)

ಅರ್ಜಿ ಸಲ್ಲಿಸುವ ವಿಧಾನ
ಅರ್ಜಿ ಸಲ್ಲಿಸಲು ಮಹಿಳೆಯರು ತಮ್ಮ ಜಿಲ್ಲಾ ಮಹಿಳಾ ಅಭಿವೃದ್ಧಿ ನಿಗಮ ಕಚೇರಿ ಅಥವಾ ಬ್ಯಾಂಕ್‌ಗಳ ಮೂಲಕ ಸಂಪರ್ಕಿಸಬಹುದು.