ನಟ ದರ್ಶನ್ ಅವರ 49ನೇ ಹುಟ್ಟುಹಬ್ಬ ಆಚರಿಸುವದಕ್ಕೆ ಬಿಡುಗಡೆ ಭಾಗ್ಯ ಸಿಗುತ್ತಾ ?

ದರ್ಶನ್ ಹುಟ್ಟುಹಬ್ಬಕ್ಕೆ ಇನ್ನೂ ಹನ್ನೆರಡು ದಿನಗಳು ಮಾತ್ರ ಬಾಕಿ ಇವೆ. ಈ ಬಾರಿ ಹುಟ್ಟುಹಬ್ಬದ ವೇಳೆಗೆ ಅವರು ಹೊರಗೆ ಬರಬಹುದು ಎಂದು ಅಭಿಮಾನಿಗಳು ನಿರೀಕ್ಷಿಸಿದ್ದರು. ಆದರೆ ಕೇಸ್ ನಡೆಯುತ್ತಿರುವ ಹಾದಿ ನೋಡಿದರೆ, ಸದ್ಯಕ್ಕೆ ದರ್ಶನ್‌ಗೆ ಬಿಡುಗಡೆ ಭಾಗ್ಯ ಸಿಗುವ ಸಾಧ್ಯತೆ ಕಡಿಮೆ. ಈ ಬಾರಿ ಅವರ ಹುಟ್ಟುಹಬ್ಬ ಜೈಲಿನಲ್ಲೇ ಫಿಕ್ಸ್ ಆಗಿದೆ. ಫೆಬ್ರವರಿ 16ರಂದು ದರ್ಶನ್ 49ನೇ ಹುಟ್ಟುಹಬ್ಬವನ್ನು ಆಚರಿಸಬೇಕಾಗಿತ್ತು. ಹೊರಗಿದ್ದರೆ ಅಭಿಮಾನಿಗಳು ಅದನ್ನು ಭರ್ಜರಿಯಾಗಿ ಸೆಲೆಬ್ರೇಟ್ ಮಾಡುತ್ತಿದ್ದರು. ಆದರೆ ಈ ಬಾರಿ ಅವರು ಜೈಲಿನಲ್ಲೇ ದಿನ ಕಳೆಯಬೇಕಾದ ಪರಿಸ್ಥಿತಿ ಬಂದಿದೆ. ಕಳೆದ ವರ್ಷ ಆಗಸ್ಟ್‌ನಲ್ಲಿ ಬೇಲ್ ರದ್ದಾಗಿ ಮತ್ತೆ ಜೈಲು ಸೇರಿದ ನಂತರ, ಕನಿಷ್ಠ ಹೊಸ ವರ್ಷ ಅಥವಾ ಹುಟ್ಟುಹಬ್ಬದ ವೇಳೆಗೆ ಹೊರಬರುತ್ತಾರೆ ಎಂದು ಅಭಿಮಾನಿಗಳು ಭಾವಿಸಿದ್ದರು. ಆದರೆ ಆ ನಿರೀಕ್ಷೆ ಸುಳ್ಳಾಗಿದೆ.

ನಟ ದರ್ಶನ್ ಅವರ 49ನೇ ಹುಟ್ಟುಹಬ್ಬ ಆಚರಿಸುವದಕ್ಕೆ ಬಿಡುಗಡೆ ಭಾಗ್ಯ ಸಿಗುತ್ತಾ ?
ನಟ ದರ್ಶನ್ ಅವರ 49ನೇ ಹುಟ್ಟುಹಬ್ಬ ಆಚರಿಸುವದಕ್ಕೆ ಬಿಡುಗಡೆ ಭಾಗ್ಯ ಸಿಗುತ್ತಾ ?

ಮುಂದಿನ ವರ್ಷ ಸಿಗೋಣ ಎಂದಿದ್ದ ದಾಸ ಅಸಲಿಗೆ ದರ್ಶನ್ ಬೇಲ್‌ಗೆ ಅರ್ಜಿ ಸಲ್ಲಿಸಿಲ್ಲ. ಕೇಸ್ ಈಗಷ್ಟೇ ಹಿಯರಿಂಗ್ ಹಂತಕ್ಕೆ ಬಂದಿದ್ದು, ವಕೀಲರು ಹೇಳುವವರೆಗೂ ಬೇಲ್ ಬಗ್ಗೆ ಯೋಚಿಸುವುದೇ ಇಲ್ಲ. ಆದ್ದರಿಂದ ಈ ಬಾರಿ ಹುಟ್ಟುಹಬ್ಬದ ದಿನ ದರ್ಶನ್ ಕಂಬಿ ಹಿಂದೆ ಕಳೆಯುವುದು ಖಚಿತ. 2024ರ ಜೂನ್‌ನಲ್ಲಿ ರೇಣುಕಾಸ್ವಾಮಿ ಹತ್ಯೆ ಪ್ರಕರಣದಲ್ಲಿ ಆರೋಪ ಹೊತ್ತು ಜೈಲು ಸೇರಿದ ದರ್ಶನ್, ಡಿಸೆಂಬರ್‌ನಲ್ಲಿ ಬೇಲ್ ಪಡೆದು ಹೊರಬಂದಿದ್ದರು. ಆ ಸಮಯದಲ್ಲಿ ಹುಟ್ಟುಹಬ್ಬದ ದಿನ ಅವರು ಹೊರಗಡೆ ಇದ್ದರೂ ಅಭಿಮಾನಿಗಳಿಗೆ ಸಿಕ್ಕಿರಲಿಲ್ಲ. ಬೆನ್ನು ನೋವಿನ ಕಾರಣದಿಂದ ವಿಡಿಯೋ ಮೂಲಕವೇ ಅಭಿಮಾನಿಗಳಿಗೆ ಸಂದೇಶ ನೀಡಿದ್ದರು. “ಮುಂದಿನ ವರ್ಷ ಸಿಗೋಣ” ಎಂದಿದ್ದ ಅವರು, ಈ ಬಾರಿ ಮತ್ತೆ ಜೈಲು ಸೇರಿದ್ದಾರೆ.

ಹುಟ್ಟುಹಬ್ಬದ ಸಂಭ್ರಮದ ನೆನಪುಗಳು ಪ್ರತಿ ವರ್ಷ ದರ್ಶನ್ ಹುಟ್ಟುಹಬ್ಬದಂದು ಅವರ ನಿವಾಸವಿರುವ ಆರ್ ಆರ್ ನಗರ ಜಗಮಗಿಸುತ್ತಿತ್ತು. ಮನೆಯ ರಸ್ತೆಯುದ್ದಕ್ಕೂ ಕಟೌಟ್ಸ್, ಪೋಸ್ಟರ್ಸ್ ಅಲಂಕರಿಸುತ್ತಿದ್ದವು. ಸಾವಿರಾರು ಅಭಿಮಾನಿಗಳು ದೂರದಿಂದ ಹರಿದು ಬರುತ್ತಿದ್ದರು. ಬಂದ ಅಭಿಮಾನಿಗಳಿಗೆ ದರ್ಶನ ನೀಡುತ್ತಿದ್ದ ದರ್ಶನ್, ಎಲ್ಲರಿಗೂ ಊಟದ ವ್ಯವಸ್ಥೆ ಮಾಡಿಸುತ್ತಿದ್ದರು. 2023ರಲ್ಲಿ ಕೈ ನೋವಿದ್ದರೂ ಅಭಿಮಾನಿಗಳನ್ನು ಎದುರುಗೊಂಡು ಶೇಕ್ ಹ್ಯಾಂಡ್ ನೀಡಿದ್ದರು. ಇಂಥಾ ದೃಶ್ಯವನ್ನು ಮತ್ತೆ ಯಾವಾಗ ನೋಡಲು ಸಾಧ್ಯವಾಗುತ್ತದೋ ಗೊತ್ತಿಲ್ಲ.

ಅಭಿಮಾನಿಗಳ ನಿರಾಶೆ ಈ ಬಾರಿ ಅಭಿಮಾನಿಗಳು ದರ್ಶನ್ ಇಲ್ಲದೇ ಹುಟ್ಟುಹಬ್ಬವನ್ನು ಆಚರಿಸಲು ಸಜ್ಜಾಗುತ್ತಿದ್ದಾರೆ. ಅನೇಕ ಕಡೆ ಅಭಿಮಾನಿ ಸಂಘಗಳು ಕಾರ್ಯಕ್ರಮಗಳನ್ನು ಏರ್ಪಡಿಸುತ್ತಿವೆ. ಆದರೆ ಎಷ್ಟೇ ಸಂಭ್ರಮಿಸಿದರೂ ದರ್ಶನ್ ಇಲ್ಲದ ಹುಟ್ಟುಹಬ್ಬ ಸಪ್ಪೆಯೇ. ವಿಶೇಷವಾಗಿ, ದರ್ಶನ್ ಹುಟ್ಟುಹಬ್ಬವನ್ನು ಮೊದಲ ಬಾರಿಗೆ ಜೈಲಿನಲ್ಲೇ ಆಚರಿಸಬೇಕಾದ ಪರಿಸ್ಥಿತಿ ಬಂದಿರುವುದು ಅಭಿಮಾನಿಗಳಿಗೆ ದೊಡ್ಡ ದುರಂತವಾಗಿದೆ.