ಕನ್ನಡ ಖ್ಯಾತ ಕಿರುತೆರೆ ನಟಿ ಮತ್ತು ಅವರ ಪತಿಯ ಮೇಲೆ ಹಲ್ಲೆ !! ಯಾರಿಂದ ನೋಡಿ ?

ನಟಿ ಕಾವ್ಯಾ ಗೌಡ ಮತ್ತು ಅವರ ಪತಿ ಸೋಮಶೇಖರ್‌ ಮೇಲೆ ದಾರುಣ ಹಲ್ಲೆ ನಡೆದಿದೆ. ಈ ಹಲ್ಲೆಯನ್ನು ಸೋಮಶೇಖರ್‌ ಅವರ ಅತ್ತಿಗೆಯ ತಂದೆ ರವಿಕುಮಾರ್ ನಡೆಸಿದ್ದಾರೆಂದು ವರದಿಯಾಗಿದೆ. ಕಾವ್ಯಾ ಗೌಡ ಅವರ ಜನಪ್ರಿಯತೆಯನ್ನು ಸಹಿಸದೇ ಈ ಘಟನೆ ನಡೆದಿದೆ ಎಂದು ಹೇಳಲಾಗಿದೆ. ಈ ಸಂಬಂಧ ಕಾವ್ಯಾ ಗೌಡ ಅವರ ಅಕ್ಕ ಭವ್ಯಾ ಗೌಡ ಅವರು ರಾಮಮೂರ್ತಿ ನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.

ಕನ್ನಡ ಖ್ಯಾತ ಕಿರುತೆರೆ ನಟಿ ಮತ್ತು ಅವರ ಪತಿಯ ಮೇಲೆ ಹಲ್ಲೆ !! ಯಾರಿಂದ ನೋಡಿ ?
ಕನ್ನಡ ಖ್ಯಾತ ಕಿರುತೆರೆ ನಟಿ ಮತ್ತು ಅವರ ಪತಿಯ ಮೇಲೆ ಹಲ್ಲೆ !! ಯಾರಿಂದ ನೋಡಿ ?

ಸೋಮಶೇಖರ್‌ ಅವರ ಅತ್ತಿಗೆಯ ತಂದೆ ರವಿಕುಮಾರ್ ಅವರು ‘ರೇಪ್ ಮಾಡ್ತೇನೆ’ ಎಂದು ಬೆದರಿಕೆ ಹಾಕಿದ್ದಾರೆಂಬ ಆರೋಪವೂ ಕೇಳಿಬಂದಿದೆ. ನಂದಿಶ್, ಪ್ರಿಯಾ ಮತ್ತು ರವಿಕುಮಾರ್ ವಿರುದ್ಧ ರಾಮಮೂರ್ತಿ ನಗರ ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್ ದಾಖಲಾಗಿದೆ. ಸದ್ಯ ಕಾವ್ಯಾ ಗೌಡ ಮತ್ತು ಅವರ ಪತಿ ಸೋಮಶೇಖರ್‌ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ಕಾವ್ಯಾ ಗೌಡ ಅವರ ಪತಿ ಸೋಮಶೇಖರ್‌ ಉದ್ಯಮಿ. ಅವರ ತಂದೆ ರಾಜಕೀಯ ಹಿನ್ನಲೆ ಹೊಂದಿದ್ದಾರೆ. 2021ರಲ್ಲಿ ಬೆಂಗಳೂರಿನ ತಾಜ್ ವೆಸ್ಟೆಂಡ್ ಹೋಟೆಲ್‌ನಲ್ಲಿ ಕಾವ್ಯಾ ಮತ್ತು ಸೋಮಶೇಖರ್‌ ಅವರ ಮದುವೆ ಅದ್ದೂರಿಯಾಗಿ ನಡೆದಿತ್ತು.

‘ರಾಧಾ ರಮಣ’ ಧಾರಾವಾಹಿ ಮೂಲಕ ಖ್ಯಾತಿ ಪಡೆದ ಕಾವ್ಯಾ ಗೌಡ ಮತ್ತು ಅವರ ಪತಿ ಸೋಮಶೇಖರ್‌ ಮೇಲೆ ಸಂಬಂಧಿಕರಿಂದಲೇ ಹಲ್ಲೆ ನಡೆದಿರುವುದು ಆಘಾತಕಾರಿ ಸಂಗತಿ. ಜನಪ್ರಿಯತೆಯನ್ನು ಸಹಿಸದೇ ಮನೆಗೆ ನುಗ್ಗಿ ಹಲ್ಲೆ, ಅತ್ತ್ಯಾಚಾರ ಹಾಗೂ ಕೊಲೆ ಬೆದರಿಕೆ ಹಾಕಲಾಗಿದೆ ಎಂದು ದೂರು ದಾಖಲಾಗಿದೆ.

1992ರಲ್ಲಿ ಜನಿಸಿದ ಕಾವ್ಯಾ ಗೌಡ ಅವರಿಗೆ ಭವ್ಯಾ ಗೌಡ ಎಂಬ ಸಹೋದರಿ ಹಾಗೂ ಒಬ್ಬ ಅಣ್ಣ ಇದ್ದಾರೆ. ಅವರು ‘ಮೀರಾ ಮಾಧವ’, ‘ಗಾಂಧಾರಿ’, ‘ರಾಧಾ ರಮಣ’ ಮುಂತಾದ ಧಾರಾವಾಹಿಗಳಲ್ಲಿ ನಟಿಸಿದ್ದಾರೆ. ಜೊತೆಗೆ ‘ಬಕಾಸುರ’ ಎಂಬ ಸಿನಿಮಾದಲ್ಲಿಯೂ ಅಭಿನಯಿಸಿದ್ದು, ಆ ಚಿತ್ರದಲ್ಲಿ ರೋಹಿತ್‌ ಹೀರೋ ಆಗಿದ್ದರು.

ಕಾವ್ಯಾ ಗೌಡ ಮತ್ತು ಸೋಮಶೇಖರ್‌ ಅವರ ಮದುವೆ ಸಂದರ್ಭದಲ್ಲಿ ದುಬೈನಲ್ಲಿ ಪ್ರಿ ವೆಡ್ಡಿಂಗ್‌ ಫೋಟೋಶೂಟ್‌ ನಡೆಸಲಾಗಿತ್ತು. ಮದುವೆ ಬಹಳ ಅದ್ದೂರಿಯಾಗಿ ನಡೆದಿತ್ತು.