ಅನುಪಮಾ ಗೌಡ ಮದುವೆ ಆಗುತ್ತಿರುವ ಹುಡುಗ ಯಾರು !! ಇಲ್ಲಿದೆ ಅಸಲಿ ಸತ್ಯ ?

ಅನುಪಮಾ ಗೌಡ ಮತ್ತು ರಾಘವ್‌ ಅನು ಅವರ ಬಗ್ಗೆ ಹರಿದಾಡುತ್ತಿದ್ದ ಎಂಗೇಜ್‌ಮೆಂಟ್‌ ಗಾಸಿಪ್‌ಗಳಿಗೆ ಕೊನೆಗೂ ಅನುಪಮಾ ಗೌಡ ಸ್ವತಃ ಸ್ಪಷ್ಟನೆ ನೀಡಿದ್ದಾರೆ.

 ಅನುಪಮಾ ಗೌಡ ಮದುವೆ ಆಗುತ್ತಿರುವ ಹುಡುಗ ಯಾರು !! ಇಲ್ಲಿದೆ ಅಸಲಿ ಸತ್ಯ ?
ಅನುಪಮಾ ಗೌಡ ಮದುವೆ ಆಗುತ್ತಿರುವ ಹುಡುಗ ಯಾರು !! ಇಲ್ಲಿದೆ ಅಸಲಿ ಸತ್ಯ ?

ಪ್ರಸ್ತುತ ʻಕಲರ್ಸ್‌ ಕನ್ನಡʼ ವಾಹಿನಿಯ ʻಗಿಚ್ಚಿ ಗಿಲಿಗಿಲಿ ಜೂನಿಯರ್ಸ್‌ʼ ಶೋ ನಿರೂಪಿಸುತ್ತಿರುವ ಅನುಪಮಾ ಗೌಡ ಇತ್ತೀಚೆಗೆ ತಮ್ಮ 35ನೇ ಹುಟ್ಟುಹಬ್ಬವನ್ನು ಆಚರಿಸಿದರು. ಈ ಸಂದರ್ಭದಲ್ಲಿ ಅವರ ಗೆಳೆಯ ಹಾಗೂ ಫೋಟೋಗ್ರಾಫರ್‌ ರಾಘವ್‌ ಅನು ಅವರು ಇಬ್ಬರ ಫೋಟೋಗಳನ್ನು ಹಂಚಿಕೊಂಡು ವಿಶೇಷವಾಗಿ ಶುಭಾಶಯ ತಿಳಿಸಿದ್ದರು. ಅದನ್ನು ನೋಡಿ ಹಲವರು ಇವರಿಬ್ಬರಿಗೂ ನಿಶ್ಚಿತಾರ್ಥವಾಗಿದೆ, ಮದುವೆ ಸಮೀಪದಲ್ಲಿದೆ ಎಂದು ಊಹಿಸಿದ್ದರು.

ಈ ಬಗ್ಗೆ ಅನುಪಮಾ ಗೌಡ ಇನ್‌ಸ್ಟಾಗ್ರಾಮ್‌ನಲ್ಲಿ ವಿಡಿಯೋ ಹಂಚಿಕೊಂಡು ಹಾಸ್ಯಮಯವಾಗಿ ಪ್ರತಿಕ್ರಿಯಿಸಿದ್ದಾರೆ. ಅವರು ಹೇಳಿದ್ದು ಹೀಗಿದೆ:
“ಎರಡು ದಿನದ ಹಿಂದೆ ನನ್ನ ಎಂಗೇಜ್‌ಮೆಂಟ್‌ ಆಯ್ತು ಅಂತ ಎಲ್ಲರೂ ಹೇಳ್ತಿದ್ದಾರೆ. ಆದರೆ, ದುರ್ಭಾಗ್ಯವಶಾತ್‌ ನಮ್ಮಿಬ್ಬರೂ ಆ ಎಂಗೇಜ್‌ಮೆಂಟ್‌ಗೆ ಹಾಜರಾಗಲಿಲ್ಲ. ಯಾಕೆಂದರೆ ನಮಗೆ ಯಾರೂ ಮಾಹಿತಿ ನೀಡಲಿಲ್ಲ!” ಎಂದು ವ್ಯಂಗ್ಯವಾಗಿ ಹೇಳಿದ್ದಾರೆ.
ಈ ವೇಳೆ ಅವರ ಗೆಳೆಯ ಫೋಟೋಗ್ರಾಫರ್‌ ರಾಘವ್‌ ಅನು ಅವರು ಇಬ್ಬರ ಜೊತೆಗಿನ ಫೋಟೋಗಳನ್ನ ಹಂಚಿಕೊಂಡು ವಿಶೇಷವಾಗಿ ಬರ್ತ್‌ಡೇಗೆ ವಿಶ್‌ ಮಾಡಿದ್ದರು. ಹಲವರು ಈ ಫೋಟೋಗಳನ್ನ ನೋಡಿ ಇವರಿಬ್ಬರಿಗೂ ಎಂಗೇಜ್‌ಮೆಂಟ್‌ ಆಗಿದೆ. ಇನ್ನೇನು ಮದುವೆಯಾಗಲಿದ್ದಾರೆ ಅಂತೆಲ್ಲಾ ಪೋಸ್ಟ್‌ ಮಾಡುತ್ತಿದ್ದರು. ಈ ಬಗ್ಗೆ ಅನುಪಮಾ ಗೌಡ ಇದೀಗ ತಮ್ಮದೇ ಸ್ಟೈಲ್‌ನಲ್ಲೇ ಖಡಕ್‌ ಆಗಿ ರಿಪ್ಲೈ ನೀಡಿದ್ದಾರೆ.

ಅವರು ಮುಂದುವರಿಸಿ, “ಜನರು ನನ್ನ ಹುಟ್ಟುಹಬ್ಬದ ಫೋಟೋಗಳನ್ನು ತೆಗೆದುಕೊಂಡು ಎಂಗೇಜ್‌ಮೆಂಟ್‌ ಪೋಸ್ಟ್‌ ಮಾಡುತ್ತಿದ್ದಾರೆ. ಆದರೆ, ಇಷ್ಟೆಲ್ಲಾ ಕ್ರಿಯೇಟಿವಿಟಿ ತೋರಬೇಕಾದರೆ, ಕನಿಷ್ಠ ರಿಂಗ್‌ ಹಾಕಿರುವ ಫೋಟೋವನ್ನಾದರೂ ಎಡಿಟ್‌ ಮಾಡಿ ಹಾಕಿದ್ರೆ ನಮಗೆ ಇನ್ನೂ ಖುಷಿಯಾಗುತ್ತಿತ್ತು” ಎಂದು ಹೇಳಿದ್ದಾರೆ.

ಅನುಪಮಾ ಗೌಡ ತಮ್ಮದೇ ಶೈಲಿಯಲ್ಲಿ ಕೌಂಟರ್‌ ನೀಡುತ್ತಾ, “ಮದುವೆ ಪೋಸ್ಟ್‌ ಕೂಡಾ ಒಂದೆರಡು ತಿಂಗಳು ಬಿಟ್ಟು ಹಾಕಿ. ಆಗ ನಿಮಗೆ ಇನ್ನೂ ಹೆಚ್ಚು ಟ್ರಾಕ್ಷನ್‌ ಸಿಗುತ್ತದೆ. ಸಾಧ್ಯವಾದರೆ ನಮ್ಮ ಮದುವೆಗೆ ಕರೀರಿ, ನಾವು ಖಂಡಿತಾ ಬಂದು ಖುಷಿಪಡುತ್ತೇವೆ” ಎಂದು ಹಾಸ್ಯಮಯವಾಗಿ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ಅವರ ಈ ವಿಡಿಯೋ ಈಗ ಸೋಶಿಯಲ್‌ ಮೀಡಿಯಾದಲ್ಲಿ ವೈರಲ್‌ ಆಗಿದ್ದು, ಗಾಸಿಪ್‌ಗಳಿಗೆ ಸ್ಪಷ್ಟನೆ ನೀಡುವ ಜೊತೆಗೆ ಅಭಿಮಾನಿಗಳನ್ನು ನಗಿಸುತ್ತಿದೆ.