“ಕ್ರಿಕೆಟ್ ಮೈದಾನವೇ ಹೋಟೆಲ್: ನಾಥದ್ವಾರದಲ್ಲಿ ಹೊಸ ಕ್ರಿಕೆಟ್ ಕ್ರಾಂತಿ!”

ರಾಜಸ್ಥಾನದಲ್ಲಿ ಭಾರತದ ಮೊದಲ ನೆಕ್ರಿಕೆಟ್ ಸ್ಟೇಡಿಯಂ-ಹೋಟೆಲ್ ಸಂಯೋಜನೆ

“ಕ್ರಿಕೆಟ್ ಮೈದಾನವೇ ಹೋಟೆಲ್: ನಾಥದ್ವಾರದಲ್ಲಿ ಹೊಸ ಕ್ರಿಕೆಟ್ ಕ್ರಾಂತಿ!”
“ಕ್ರಿಕೆಟ್ ಮೈದಾನವೇ ಹೋಟೆಲ್: ನಾಥದ್ವಾರದಲ್ಲಿ ಹೊಸ ಕ್ರಿಕೆಟ್ ಕ್ರಾಂತಿ!”

ನಾಥದ್ವಾರ, ರಾಜಸ್ಥಾನ – ಭಾರತದ ಕ್ರೀಡಾ ಮೂಲಸೌಕರ್ಯದಲ್ಲಿ ಹೊಸ ಅಧ್ಯಾಯವನ್ನು ಬರೆಯುವ ಮಹತ್ವಾಕಾಂಕ್ಷಿ ಯೋಜನೆ ಇದೀಗ ಬೆಳಕಿಗೆ ಬಂದಿದೆ. ಮದನ್ ಪಾಳಿವಾಲ್ ಮಿರಾಜ್ ಸ್ಪೋರ್ಟ್ಸ್ ಸೆಂಟರ್ ಎಂಬ ಹೆಸರಿನಲ್ಲಿ ನಿರ್ಮಾಣಗೊಂಡಿರುವ ಈ ವಿಶಿಷ್ಟ ಕ್ರೀಡಾಂಗಣವು ಕ್ರಿಕೆಟ್ ಮೈದಾನ ಮತ್ತು ಐಷಾರಾಮಿ ಹೋಟೆಲ್‌ನ್ನು ಒಂದೇ ಸಂಕೀರ್ಣದಲ್ಲಿ ಒಟ್ಟುಗೂಡಿಸಿದೆ.

ಮಿರಾಜ್ ಗ್ರೂಪ್‌ನ ಅಧ್ಯಕ್ಷ ಮದನ್ ಪಾಳಿವಾಲ್ ಅವರ ಕನಸಿನ ಯೋಜನೆಯಾಗಿ ನಾಥದ್ವಾರದಲ್ಲಿ ನಿರ್ಮಾಣಗೊಂಡಿರುವ ಈ ಕ್ರೀಡಾಂಗಣವು ಭಾರತದ ಕ್ರೀಡಾ ಮೂಲಸೌಕರ್ಯದಲ್ಲಿ ಹೊಸ ಅಧ್ಯಾಯವನ್ನು ಬರೆಯುತ್ತಿದೆ. ಐಪಿಎಲ್ ಪಂದ್ಯಗಳು, ಅಂತರರಾಷ್ಟ್ರೀಯ ಕ್ರಿಕೆಟ್ ಪಂದ್ಯಾವಳಿ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಇಲ್ಲಿ ಆಯೋಜಿಸುವ ಸಾಧ್ಯತೆ ಇದ್ದು, ಇದಕ್ಕಾಗಿ ಬಿಸಿಸಿಐಯಿಂದ ಪಿಚ್ ಮತ್ತು ಸೌಲಭ್ಯಗಳಿಗೆ ಅನುಮೋದನೆ ದೊರಕಬೇಕಿದೆ. ಕ್ರಿಕೆಟ್ ಅಭಿಮಾನಿಗಳು ಈ ಯೋಜನೆಯನ್ನು ಭಾರತದ ಹೆಮ್ಮೆ ಎಂದು ಕೊಂಡಾಡುತ್ತಿದ್ದು, ನಾಥದ್ವಾರವನ್ನು ಜಾಗತಿಕ ಕ್ರಿಕೆಟ್ ನಕ್ಷೆಯಲ್ಲಿ ಗುರುತಿಸುವಲ್ಲಿ ಇದು ಮಹತ್ವದ ಪಾತ್ರ ವಹಿಸಲಿದೆ ಎಂಬ ನಿರೀಕ್ಷೆ ವ್ಯಕ್ತಪಡಿಸಿದ್ದಾರೆ. ಆದರೆ, ಕೆಲವರು ಈ ವಿನ್ಯಾಸವನ್ನು ಐಷಾರಾಮಿ ಕೇಂದ್ರೀಕೃತ ಎಂದು ಟೀಕಿಸುತ್ತಿದ್ದು, ಲಾರ್ಡ್ಸ್ (ಲಂಡನ್) ಅಥವಾ ಈಡನ್ ಗಾರ್ಡನ್ಸ್ (ಕೊಲ್ಕತ್ತಾ) ಮುಂತಾದ ಐತಿಹಾಸಿಕ ಮೈದಾನಗಳಂತೆ ಕ್ರೀಡಾ ಪರಂಪರೆಯ ಸೌಂದರ್ಯ ಇಲ್ಲದಿರುವುದನ್ನು ಪ್ರಶ್ನಿಸುತ್ತಿದ್ದಾರೆ

ಈ ಕ್ರೀಡಾಂಗಣವು ಕೇವಲ ಪಂದ್ಯಾವಳಿಗಳ ಸ್ಥಳವಾಗಿರದೆ, ಕ್ರೀಡೆ ಮತ್ತು ಪ್ರವಾಸೋದ್ಯಮವನ್ನು ಒಟ್ಟುಗೂಡಿಸುವ ಕೇಂದ್ರವಾಗಲಿದೆ.ಕ್ರಿಕೆಟ್ ನೋಡಲು ಬಂದ ಅಭಿಮಾನಿಗಳು ಹೋಟೆಲ್‌ನಲ್ಲೇ ವಾಸ್ತವ್ಯ ಮಾಡಿ, ಆರಾಮ ಮತ್ತು ಮನರಂಜನೆ ಎರಡನ್ನೂ ಅನುಭವಿಸಬಹುದು.

ಇದು ಕಕ್ರೀಡಾ ಆರ್ಥಿತೆಗೆ ಹೊಸ ದಾರಿ ತೆರೆದು, ಸ್ಥಳೀಯ ಉದ್ಯೋಗ ಮತ್ತು ಪ್ರವಾಸೋದ್ಯಮವನ್ನು ಉತ್ತೇಜಿಸುವ ನಿರೀಕ್ಷೆಯಿದೆ.