2026ರಿಂದ ವಾಹನ ಚಾಲಕರಿಗೆ ಹೊಸ ನಿಯಮಗಳು
ಸ್ನೇಹಿತರೆ, 2026ರಿಂದ ದೇಶಾದ್ಯಂತ ವಾಹನಗಳು ಮತ್ತು ವಾಹನ ಚಾಲಕರಿಗೆ ಸಂಬಂಧಿಸಿದಂತೆ ನಾಲ್ಕು ಪ್ರಮುಖ ಹೊಸ ನಿಯಮಗಳು ಜಾರಿಗೆ ಬರಲಿವೆ. ಈ ನಿಯಮಗಳನ್ನು ಪಾಲಿಸದಿದ್ದರೆ ಕೇವಲ ದಂಡವಷ್ಟೇ ಅಲ್ಲ, ಚಾಲಕರ ಲೈಸೆನ್ಸ್ ಕೂಡ ರದ್ದು ಮಾಡಲಾಗುತ್ತದೆ.
1. ಎಬಿಎಸ್ ಬ್ರೇಕ್ ಸಿಸ್ಟಮ್ ಕಡ್ಡಾಯ
2026ರಿಂದ ಎಲ್ಲಾ ವಾಹನಗಳಿಗೆ ABS (Anti-lock Braking System) ಕಡ್ಡಾಯವಾಗಲಿದೆ. ಇತ್ತೀಚಿನ ದಿನಗಳಲ್ಲಿ ಕೆಲವು ತಯಾರಕರು ಕಳಪೆ ಗುಣಮಟ್ಟದ ಬ್ರೇಕ್‌ಗಳನ್ನು ಅಳವಡಿಸುತ್ತಿರುವುದರಿಂದ ಅಪಘಾತಗಳ ಸಂಖ್ಯೆ ಹೆಚ್ಚಾಗಿದೆ. ಈ ಸಮಸ್ಯೆಯನ್ನು ತಡೆಗಟ್ಟಲು ABS ವ್ಯವಸ್ಥೆಯನ್ನು ಕಡ್ಡಾಯಗೊಳಿಸಲಾಗಿದೆ.
2. ವಾಹನ ಮಾರ್ಪಾಡುಗಳ ಮೇಲೆ ನಿಯಂತ್ರಣ
ಅನುಮತಿ ಇಲ್ಲದೆ ವಾಹನಗಳನ್ನು ಮಾರ್ಪಾಡು ಮಾಡಿದರೆ ದಂಡ ವಿಧಿಸಲಾಗುತ್ತದೆ. ಉದಾಹರಣೆಗೆ:
ದೊಡ್ಡ ಶಬ್ದ ಬರುವ ಸೈಲೆನ್ಸರ್
ಜೋರಾದ ಹಾರ್ನ್
ಅನಧಿಕೃತ ಸೌಂಡ್ ಸಿಸ್ಟಮ್
ಇವುಗಳನ್ನು ಅಳವಡಿಸಿದರೆ ಕಡ್ಡಾಯವಾಗಿ ದಂಡ ಪಾವತಿಸಬೇಕು. ಪದೇ ಪದೇ ತಪ್ಪು ಮಾಡಿದರೆ ವಾಹನವನ್ನು ಜಪ್ತಿ ಮಾಡುವ ಕ್ರಮ ಕೈಗೊಳ್ಳಲಾಗುತ್ತದೆ.
3. ಎಚ್ಎಸ್ಆರ್ಪಿ ನಂಬರ್ ಪ್ಲೇಟ್ ಕಡ್ಡಾಯ
2026ರಿಂದ ಎಲ್ಲಾ ವಾಹನಗಳಿಗೆ HSRP (High Security Registration Plate) ಕಡ್ಡಾಯವಾಗಲಿದೆ. ಈಗಾಗಲೇ ಈ ನಿಯಮ ಜಾರಿಯಲ್ಲಿದ್ದರೂ, ಕೆಲವು ವಾಹನ ಮಾಲೀಕರು ಇನ್ನೂ ಅಳವಡಿಸಿಲ್ಲ. 2026ರಿಂದ HSRP ಇಲ್ಲದ ವಾಹನಗಳು ರಸ್ತೆಗೆ ಬಂದರೆ ಅವುಗಳನ್ನು ಸೀಜ್ ಮಾಡಲಾಗುತ್ತದೆ.
4. ಬಸ್ ಮತ್ತು ದೊಡ್ಡ ವಾಹನಗಳಿಗೆ ಸೆಕ್ಯೂರಿಟಿ ಫೀಚರ್
ಬಸ್‌ಗಳು ಮತ್ತು ದೊಡ್ಡ ವಾಹನಗಳಿಗೆ ಹೆಚ್ಚುವರಿ ಸುರಕ್ಷತಾ ವ್ಯವಸ್ಥೆಗಳನ್ನು ಕಡ್ಡಾಯಗೊಳಿಸಲಾಗಿದೆ:
Auto Emergency Braking System
Lane Departure Warning System
ಚಾಲಕ ನಿದ್ರೆಗೆ ಜಾರಿದರೆ ಎಚ್ಚರಿಸುವ ಅಲಾರಂ ವ್ಯವಸ್ಥೆ
ಕೊನೆ ಮಾತು
ಹೆಲ್ಮೆಟ್ ನಿಯಮ, ಸೀಟ್ ಬೆಲ್ಟ್ ನಿಯಮ, ಮಧ್ಯಪಾನ ನಿಯಮಗಳಂತೆ 2026ರಿಂದ ಈ ಹೊಸ ನಿಯಮಗಳು ಕಟ್ಟುನಿಟ್ಟಾಗಿ ಜಾರಿಯಾಗುತ್ತವೆ. ನಿಯಮಗಳನ್ನು ಪಾಲಿಸದಿದ್ದರೆ ಕಡ್ಡಾಯವಾಗಿ ದಂಡ ಪಾವತಿಸಬೇಕಾಗುತ್ತದೆ.
???? ಈ ನಿಯಮಗಳನ್ನು ಪ್ರತಿಯೊಬ್ಬ ವಾಹನ ಚಾಲಕರಿಗೂ ತಿಳಿಸಿ, ಸುರಕ್ಷಿತ ಚಾಲನೆಗೆ ಸಹಕರಿಸೋಣ.