ಕೇಂದ್ರ ಸರ್ಕಾರದಿಂದ ಗ್ಯಾಸ್ ಸಿಲಿಂಡರ್ ಬುಕ್ ಮಾಡಲು ಹೊಸ ನಿಯಮ ಜಾರಿ !!

ಗ್ಯಾಸ್‌ ಸಿಲಿಂಡರ್ ಬುಕ್ಕಿಂಗ್ ನಿಯಮದಲ್ಲಿ ಇತ್ತೀಚೆಗೆ ಕೆಲವು ಮಾರ್ಪಾಡುಗಳನ್ನು ಮಾಡಲಾಗಿದೆ. ಈ ಬದಲಾವಣೆಗಳ ಬಗ್ಗೆ ಜನರಲ್ಲಿ ಗೊಂದಲ ಉಂಟಾಗಿರುವುದರಿಂದ ಕೇಂದ್ರ ಸರ್ಕಾರವೇ ಸ್ಪಷ್ಟನೆ ನೀಡಿದೆ.

ಕೇಂದ್ರ ಸರ್ಕಾರದಿಂದ  ಗ್ಯಾಸ್ ಸಿಲಿಂಡರ್ ಬುಕ್ ಮಾಡಲು ಹೊಸ ನಿಯಮ ಜಾರಿ !!
ಕೇಂದ್ರ ಸರ್ಕಾರದಿಂದ ಗ್ಯಾಸ್ ಸಿಲಿಂಡರ್ ಬುಕ್ ಮಾಡಲು ಹೊಸ ನಿಯಮ ಜಾರಿ !!

ಉಜ್ವಲ ಯೋಜನೆ ಅಡಿಯಲ್ಲಿ ಸಿಲಿಂಡರ್ ಪಡೆಯುತ್ತಿರುವವರು 45 ದಿನಗಳ ಕಾಲಾವಕಾಶ ಕಾಯಬೇಕಾಗಿದೆ. ಅಂದರೆ, ಒಂದು ಬಾರಿ ಸಿಲಿಂಡರ್ ಪಡೆದ ನಂತರ 45 ದಿನಗಳ ನಂತರವೇ ಹೊಸ ಬುಕ್ಕಿಂಗ್ ಮಾಡಬಹುದು. ಇದನ್ನು ಸರ್ಕಾರ ಅಂತಿಮ ನಿಯಮವಾಗಿ ಘೋಷಿಸಿದೆ.

ಒಂದು ಸಿಲಿಂಡರ್ ಹೊಂದಿರುವ ಗ್ರಾಹಕರು 25 ದಿನಗಳ ಕಾಲ ಕಾಯಬೇಕು. 25 ದಿನಗಳ ನಂತರವೇ ಅವರು ಹೊಸ ಬುಕ್ಕಿಂಗ್ ಮಾಡಬಹುದು. ಎರಡು ಸಿಲಿಂಡರ್ ಹೊಂದಿರುವವರು 35 ದಿನಗಳ ಕಾಲ ಕಾಯಬೇಕಾಗಿದೆ. 35 ದಿನಗಳ ನಂತರವೇ ಬುಕ್ಕಿಂಗ್ ಮಾಡಲು ಅವಕಾಶವಿದೆ.

ಇದರ ಹೊರತಾಗಿ ಬೇರೆ ಯಾವುದೇ ಬದಲಾವಣೆಗಳನ್ನು ಸರ್ಕಾರ ಮಾಡಿಲ್ಲ. “ಕಾಲಮಿತಿ ಬದಲಾಗಿದೆ” ಎಂಬಂತೆ ಹರಿದಾಡುತ್ತಿರುವ ಸುದ್ದಿಗಳು ಸುಳ್ಳು ಎಂದು ಕೇಂದ್ರ ಸರ್ಕಾರ ಸ್ಪಷ್ಟವಾಗಿ ಹೇಳಿದೆ. ಜನರು ಇಂತಹ ಸುಳ್ಳು ಸುದ್ದಿಗಳಿಗೆ ಕಿವಿಗೊಡಬಾರದು ಎಂದು ಮನವಿ ಮಾಡಲಾಗಿದೆ.

ಆದರೆ, ಈ ನಿಯಮಗಳ ನಡುವೆ ಜನರು ಸಿಲಿಂಡರ್‌ಗಾಗಿ ಪರದಾಡುತ್ತಿರುವುದು ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ಕಂಡುಬರುತ್ತಿದೆ. ಸಮಯಕ್ಕೆ ಸರಿಯಾಗಿ ಸಿಲಿಂಡರ್ ದೊರೆಯದ ಕಾರಣ ಸಾಮಾನ್ಯ ಜನರು ತೊಂದರೆ ಅನುಭವಿಸುತ್ತಿದ್ದಾರೆ. ಸರ್ಕಾರದ ನಿಯಮಗಳು ಸ್ಪಷ್ಟವಾಗಿದ್ದರೂ, ಪೂರೈಕೆ ವ್ಯವಸ್ಥೆಯಲ್ಲಿ ಸುಗಮತೆ ತರಬೇಕೆಂಬ ಬೇಡಿಕೆ ಹೆಚ್ಚುತ್ತಿದೆ.