ಇನ್ಮುಂದೆ ನಂದಿನಿ ಹಾಲು, ಮೊಸರು 10ರೂ.ಗೂ ಸಿಗುತ್ತೆ; ಗ್ರಾಹಕರು ಫುಲ್ ಕುಶ್

ನಂದಿನಿ ಬ್ರ್ಯಾಂಡ್‌ನ ಹಾಲು ಮತ್ತು ಮೊಸರನ್ನು ಇತ್ತೀಚೆಗೆ ಕಡಿಮೆ ಪ್ರಮಾಣದಲ್ಲಿ, ಕಡಿಮೆ ಬೆಲೆಗೆ ಗ್ರಾಹಕರಿಗೆ ಲಭ್ಯವಾಗುವಂತೆ ಕರ್ನಾಟಕ ಸಹಕಾರ ಹಾಲು ಉತ್ಪಾದಕ ಮಹಾಮಂಡಳ (ಕೆಎಂಎಫ್) ಮುಂದಾಗಿದೆ. ಇದುವರೆಗೆ ಅರ್ಧ ಲೀಟರ್‌ ಹಾಗೂ ಒಂದು ಲೀಟರ್‌ ಪ್ಯಾಕೆಟ್‌ಗಳನ್ನು ಮಾತ್ರ ಖರೀದಿಸಬೇಕಾಗಿದ್ದ ಗ್ರಾಹಕರು, ಈಗ 160 ಎಂಎಲ್‌ ಹಾಲು ಮತ್ತು 140 ಎಂಎಲ್‌ ಮೊಸರನ್ನು ಕೇವಲ 10 ರೂಪಾಯಿಗೆ ಪಡೆಯಬಹುದು. ಫ್ರಿಡ್ಜ್‌ ಇಲ್ಲದ ಮನೆಗಳಿಗೆ ಇದು ವಿಶೇಷವಾಗಿ ಅನುಕೂಲವಾಗಲಿದೆ, ಏಕೆಂದರೆ ದಿನಕ್ಕಾಗುವಷ್ಟನ್ನು ಮಾತ್ರ ಖರೀದಿಸಿ ತಾಜಾ ಹಾಲು ಮತ್ತು ಮೊಸರು ಬಳಸುವ ಅವಕಾಶ ದೊರೆಯುತ್ತದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ವಿಧಾನಸೌಧದಲ್ಲಿ ನಡೆದ ಸಮಾರಂಭದಲ್ಲಿ ನಂದಿನಿ ಮಳಿಗೆಗಳಲ್ಲಿ ಲಭ್ಯವಾಗುವ ಹತ್ತು ಹೊಸ ಉತ್ಪನ್ನಗಳನ್ನು ಬಿಡುಗಡೆ ಮಾಡಿದರು. ಹಾಲು ಮತ್ತು ಮೊಸರಿನ ಪ್ಯಾಕೆಟ್‌ಗಳ ಜೊತೆಗೆ ಮೀಡಿಯಂ ಫ್ಯಾಟ್‌ ಪನೀರ್‌, ಹೈ ಆರೋಮ ತುಪ್ಪ, ಪ್ರೊಬಯಾಟಿಕ್‌ ಮಾವಿನ ಲಸ್ಸಿ, ಡೇರಿ ವೈಟ್ನರ್‌ ಸೇರಿದಂತೆ ಹಲವು ಆರೋಗ್ಯಪೂರ್ಣ ಉತ್ಪನ್ನಗಳನ್ನು ಮಾರುಕಟ್ಟೆಗೆ ಪರಿಚಯಿಸಲಾಯಿತು. ಈ ಮೂಲಕ ನಂದಿನಿ ತನ್ನ ಉತ್ಪನ್ನಗಳ ವೈವಿಧ್ಯತೆಯನ್ನು ಹೆಚ್ಚಿಸಿ, ಗ್ರಾಹಕರಿಗೆ ಹೆಚ್ಚಿನ ಆಯ್ಕೆಯನ್ನು ನೀಡುತ್ತಿದೆ.

ಇನ್ಮುಂದೆ ನಂದಿನಿ ಹಾಲು, ಮೊಸರು 10ರೂ.ಗೂ ಸಿಗುತ್ತೆ; ಗ್ರಾಹಕರು ಫುಲ್ ಕುಶ್
ಇನ್ಮುಂದೆ ನಂದಿನಿ ಹಾಲು, ಮೊಸರು 10ರೂ.ಗೂ ಸಿಗುತ್ತೆ; ಗ್ರಾಹಕರು ಫುಲ್ ಕುಶ್

ಹೊಸ ಉತ್ಪನ್ನಗಳ ಬಿಡುಗಡೆ ಸಮಾರಂಭದಲ್ಲಿ ಕೋಲಾರ ಹಾಲು ಒಕ್ಕೂಟದ ಅಧ್ಯಕ್ಷ ಕೆ.ವೈ. ನಂಜೇಗೌಡ, ಪುತ್ತೂರು ಶಾಸಕ ಅಶೋಕ್‌ ಕುಮಾರ್‌ ರೈ, ಕೆಎಂಎಫ್‌ ವ್ಯವಸ್ಥಾಪಕ ನಿರ್ದೇಶಕ ಬಿ. ಶಿವಸ್ವಾಮಿ, ಮುಖ್ಯಮಂತ್ರಿಗಳ ಹೆಚ್ಚುವರಿ ಕಾರ್ಯದರ್ಶಿ ಎಸ್‌. ಜಿಯಾವುಲ್ಲಾ ಹಾಗೂ ಆಡಳಿತಾಧಿಕಾರಿ ಟಿ.ಎಚ್‌.ಎಂ. ಕುಮಾರ್‌ ಉಪಸ್ಥಿತರಿದ್ದರು. ಈ ಸಂದರ್ಭದಲ್ಲಿ ‘ಗುಡ್ ಲೈಫ್ ತುಪ್ಪ’, ‘ಪ್ರೊ ಮಿಲ್ಕ್’, ‘ಪ್ರೋ ಬಯಟಿಕ್ ಮೊಸರು’ ಸೇರಿದಂತೆ ಹಲವು ಉತ್ಪನ್ನಗಳನ್ನು ಲೋಕಾರ್ಪಣೆ ಮಾಡಲಾಯಿತು.

ನಂದಿನಿ ಉತ್ಪನ್ನಗಳು ತಮ್ಮ ಗುಣಮಟ್ಟ ಮತ್ತು ರುಚಿಗೆ ಹೆಸರುವಾಸಿಯಾಗಿದ್ದು, ದೇಶ-ವಿದೇಶಗಳಲ್ಲಿ ಬೇಡಿಕೆ ಹೆಚ್ಚುತ್ತಿದೆ. ಗ್ರಾಹಕರ ಆರೋಗ್ಯವನ್ನು ಗಮನದಲ್ಲಿಟ್ಟುಕೊಂಡು ಉತ್ಪನ್ನಗಳ ತಯಾರಿಕೆಯಲ್ಲಿ ತೊಡಗಿರುವ ಏಕೈಕ ಸಂಸ್ಥೆ ನಮ್ಮ ಕೆಎಂಎಫ್‌ ಎಂದು ಸಿಎಂ ಸಿದ್ದರಾಮಯ್ಯ ಹೆಮ್ಮೆಯಿಂದ ಹೇಳಿದ್ದಾರೆ. ನಂದಿನಿ ಬ್ರ್ಯಾಂಡ್‌ನ ಈ ಹೊಸ ಪ್ರಯತ್ನವು ಗ್ರಾಮೀಣ ಹಾಗೂ ನಗರ ಪ್ರದೇಶಗಳಲ್ಲಿರುವ ಎಲ್ಲಾ ವರ್ಗದ ಜನರಿಗೆ ತಾಜಾ, ಗುಣಮಟ್ಟದ ಹಾಲು ಮತ್ತು ಹಾಲು ಉತ್ಪನ್ನಗಳನ್ನು ಸುಲಭವಾಗಿ ಲಭ್ಯವಾಗುವಂತೆ ಮಾಡಲಿದೆ.