ಉಚಿತ ಹೊಲಿಗೆ ಯಂತ್ರ ಪಡೆಯಲು !! ಇಂದೇ ಅರ್ಜಿ ಸಲ್ಲಿಸಿ

ಪಿಎಂ ವಿಶ್ವಕರ್ಮ ಯೋಜನೆ – ಮಹಿಳೆಯರು ಮತ್ತು ಉದ್ಯೋಗ ಬಯಸುವವರಿಗೆ ಸುವರ್ಣಾವಕಾಶ  ನಮಸ್ಕಾರ ಸ್ನೇಹಿತರೆ, ಕೇಂದ್ರ ಸರ್ಕಾರದಿಂದ ಇದೀಗ ಮಹಿಳೆಯರಿಗೆ ಹಾಗೂ ಗ್ರಾಮೀಣ ಮತ್ತು ನಗರ ಪ್ರದೇಶಗಳಲ್ಲಿ ಸ್ವಂತ ಉದ್ಯೋಗ ಪ್ರಾರಂಭಿಸಲು ಬಯಸುವವರಿಗೆ ಭರ್ಜರಿ ಸುದ್ದಿ ಬಂದಿದೆ. ಪಿಎಂ ವಿಶ್ವಕರ್ಮ ಯೋಜನೆ ಅಡಿಯಲ್ಲಿ ಅರ್ಜಿ ಸಲ್ಲಿಸಿದ ಫಲಾನುಭವಿಗಳಿಗೆ ಉಚಿತ ಹೊಲಿಗೆ ಯಂತ್ರ ಜೊತೆಗೆ ಸಾಲ ಸೌಲಭ್ಯವನ್ನು ನೀಡಲಾಗುತ್ತಿದೆ. ಈ ಯೋಜನೆಯ ಮೂಲಕ ನೀವು ಅತ್ಯಾಧುನಿಕ ಎಲೆಕ್ಟ್ರಿಕ್ ಹೊಲಿಗೆ ಯಂತ್ರವನ್ನು ಖರೀದಿಸಲು 15,000 ರೂಪಾಯಿವರೆಗೆ ಉಚಿತ ಹಣವನ್ನು ಪಡೆಯಬಹುದು. ಇದೊಂದು ಸುವರ್ಣಾವಕಾಶವಾಗಿದ್ದು, ಸ್ವಂತ ಉದ್ಯೋಗ ಪ್ರಾರಂಭಿಸಲು ಬಯಸುವವರಿಗೆ ಬಹಳ ಉಪಯುಕ್ತ.

ಉಚಿತ ಹೊಲಿಗೆ ಯಂತ್ರ ಪಡೆಯಲು !! ಇಂದೇ ಅರ್ಜಿ ಸಲ್ಲಿಸಿ
ಉಚಿತ ಹೊಲಿಗೆ ಯಂತ್ರ ಪಡೆಯಲು !! ಇಂದೇ ಅರ್ಜಿ ಸಲ್ಲಿಸಿ

ಪಿಎಂ ವಿಶ್ವಕರ್ಮ ಯೋಜನೆ ಎಂದರೇನು?

ಕೇಂದ್ರ ಸರ್ಕಾರವು ನಮ್ಮ ದೇಶದಲ್ಲಿ ವಂಶಪಾರಂಪರಿಕವಾಗಿ ನಡೆಸಿಕೊಂಡು ಬಂದಿರುವ ವೃತ್ತಿಗಳನ್ನು ಸಂರಕ್ಷಿಸಿ, ಅವುಗಳಿಗೆ ಆಧುನಿಕ ಮಾರುಕಟ್ಟೆ ಒದಗಿಸುವ ಉದ್ದೇಶದಿಂದ ಈ ಯೋಜನೆಯನ್ನು ಜಾರಿಗೆ ತಂದಿದೆ.

ಈ ಯೋಜನೆಯಡಿ ಅರ್ಜಿದಾರರಿಗೆ:

15,000 ರೂಪಾಯಿವರೆಗೆ ಉಚಿತ ಹಣ (e-ವೋಚರ್ ರೂಪದಲ್ಲಿ)

ಏಳು ದಿನಗಳ ಕೌಶಲ್ಯ ತರಬೇತಿ

ಮೂರು ಲಕ್ಷ ರೂಪಾಯಿವರೆಗೆ ಕಡಿಮೆ ಬಡ್ಡಿದರದಲ್ಲಿ ಸಾಲ ಸೌಲಭ್ಯ

ಇವುಗಳನ್ನು ಒದಗಿಸುವುದು ಮುಖ್ಯ ಉದ್ದೇಶವಾಗಿದೆ.

ಉಚಿತ ಹೊಲಿಗೆ ಯಂತ್ರ ಪಡೆಯುವ ವಿಧಾನ

ಅರ್ಜಿದಾರರು ಮೊದಲು 7 ದಿನಗಳ ತರಬೇತಿಯನ್ನು ಪಡೆಯಬೇಕು. ತರಬೇತಿ ಪೂರ್ಣಗೊಂಡ ನಂತರ, ತಮ್ಮ ವೃತ್ತಿಗೆ ಅನುಗುಣವಾಗಿ 15,000 ರೂಪಾಯಿಯ e-ವೋಚರ್ ನೀಡಲಾಗುತ್ತದೆ. ಈ ಹಣವನ್ನು ಬಳಸಿಕೊಂಡು ಹೊಲಿಗೆ ಯಂತ್ರ ಅಥವಾ ಇತರೆ ಅಗತ್ಯ ಟೂಲ್ ಕಿಟ್ ಖರೀದಿಸಬಹುದು.

ನೀವು ಹೊಲಿಗೆ ಯಂತ್ರ ಪಡೆಯಲು ಬಯಸಿದರೆ, ಅರ್ಜಿ ಸಲ್ಲಿಸುವಾಗ ಹೊಲಿಗೆ ಯಂತ್ರ ಆಯ್ಕೆಯನ್ನು ಮಾಡಿಕೊಳ್ಳಬೇಕು. ನಂತರ ಈ ಯಂತ್ರದ ಮೂಲಕ ಸ್ವಂತ ಉದ್ಯೋಗ ಪ್ರಾರಂಭಿಸಲು ಮೂರು ಲಕ್ಷ ರೂಪಾಯಿವರೆಗೆ ಸಾಲ ಸೌಲಭ್ಯವೂ ದೊರೆಯುತ್ತದೆ.

ಯೋಜನೆಯ ಪ್ರಮುಖ ಪ್ರಯೋಜನಗಳು

15,000 ರೂಪಾಯಿವರೆಗೆ ಉಚಿತ e-ವೋಚರ್ ಮೂಲಕ ಹೊಲಿಗೆ ಯಂತ್ರ ಅಥವಾ ಟೂಲ್ ಕಿಟ್ ಖರೀದಿ

ಏಳು ದಿನಗಳ ಕೌಶಲ್ಯ ತರಬೇತಿ, ಪ್ರತಿದಿನ 500 ರೂಪಾಯಿ ಕೂಲಿ (ಒಟ್ಟು 3,500 ರೂಪಾಯಿ ನೇರವಾಗಿ ಖಾತೆಗೆ)

ಮೂರು ಲಕ್ಷ ರೂಪಾಯಿವರೆಗೆ ಕಡಿಮೆ ಬಡ್ಡಿದರದಲ್ಲಿ ಸಾಲ ಸೌಲಭ್ಯ

ಅರ್ಜಿ ಸಲ್ಲಿಸಲು ಅಗತ್ಯ ದಾಖಲೆಗಳು

ಆಧಾರ್ ಕಾರ್ಡ್

ಬ್ಯಾಂಕ್ ಪಾಸ್ ಬುಕ್

ಮೊಬೈಲ್ ಸಂಖ್ಯೆ

ವೃತ್ತಿ ಪ್ರಮಾಣ ಪತ್ರ

ರೇಷನ್ ಕಾರ್ಡ್

ಇತರೆ ಅಗತ್ಯ ದಾಖಲೆಗಳು

ಅರ್ಜಿ ಸಲ್ಲಿಸುವ ವಿಧಾನ

ಪಿಎಂ ವಿಶ್ವಕರ್ಮ ಯೋಜನೆಗೆ ಅರ್ಜಿ ಸಲ್ಲಿಸಲು ಕೇಂದ್ರ ಸರ್ಕಾರ ಅಧಿಕೃತ ಆನ್ಲೈನ್ ಪೋರ್ಟಲ್ ಬಿಡುಗಡೆ ಮಾಡಿದೆ. ನೀವು ಆ ಪೋರ್ಟಲ್‌ಗೆ ಭೇಟಿ ನೀಡಿ ಅರ್ಜಿ ಸಲ್ಲಿಸಬಹುದು. ಜೊತೆಗೆ ಹತ್ತಿರದ ಆನ್ಲೈನ್ ಸೆಂಟರ್‌ಗಳ ಮೂಲಕವೂ ಅರ್ಜಿ ಸಲ್ಲಿಸಲು ಅವಕಾಶವಿದೆ.

???? ಅರ್ಜಿ ಸಲ್ಲಿಸಲು ಇಲ್ಲಿ ಕ್ಲಿಕ್ ಮಾಡಿ  https://pmvishwakarma.gov.in/