ಗ್ಯಾಸ್ ಬುಕಿಂಗ್ ಮಾಡುವದಕ್ಕೆ ಹೊಸ ನಿಯಮ !! ಇದನ್ನು ನೀವು ಮಾಡದಿದ್ದರೆ ನಿಮಗೆ ಗ್ಯಾಸ್ ಸಿಗುವುದಿಲ್ಲ

ದೇಶಾದ್ಯಂತ ಗ್ಯಾಸ್ ಸಿಲಿಂಡರ್‌ಗಳಿಗೆ ಬೇಡಿಕೆ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಸರ್ಕಾರವು LPG ಸಂಪರ್ಕಗಳಿಗೆ ಸಂಬಂಧಿಸಿದ ನಿಯಮಗಳಲ್ಲಿ ತಿದ್ದುಪಡಿ ಮಾಡಿದೆ. ಅದರ ಪ್ರಮುಖ ಅಂಶವೆಂದರೆ ಆಧಾರ್ ಆಧಾರಿತ ಇ-KYC ಕಡ್ಡಾಯಗೊಳಿಸಲಾಗಿದೆ. ಈಗ ಎಲ್ಲಾ LPG ಬಳಕೆದಾರರು ಬಯೋಮೆಟ್ರಿಕ್ ಆಧಾರ್ ಪರಿಶೀಲನೆಗೆ ಒಳಪಡಬೇಕು. ಇ-KYC ಇಲ್ಲದೆ ಸಿಲಿಂಡರ್‌ಗಳನ್ನು ಬುಕ್ ಮಾಡುವುದು ಸಾಧ್ಯವಿಲ್ಲ.

ಗ್ಯಾಸ್ ಬುಕಿಂಗ್ ಮಾಡುವದಕ್ಕೆ   ಹೊಸ ನಿಯಮ !! ಇದನ್ನು ನೀವು ಮಾಡದಿದ್ದರೆ ನಿಮಗೆ ಗ್ಯಾಸ್  ಸಿಗುವುದಿಲ್ಲ
ಗ್ಯಾಸ್ ಬುಕಿಂಗ್ ಮಾಡುವದಕ್ಕೆ ಹೊಸ ನಿಯಮ !! ಇದನ್ನು ನೀವು ಮಾಡದಿದ್ದರೆ ನಿಮಗೆ ಗ್ಯಾಸ್ ಸಿಗುವುದಿಲ್ಲ

ಗ್ಯಾಸ್ ಕೊರತೆ ಉಂಟಾಗುತ್ತಿರುವ ಸಂದರ್ಭದಲ್ಲಿ ನಕಲಿ ಸಂಪರ್ಕಗಳನ್ನು ರದ್ದುಪಡಿಸಲು ಹಾಗೂ ಕಾಳಸಂತೆ ಮಾರಾಟ ತಡೆಯಲು ಸರ್ಕಾರ ಈ ಕ್ರಮ ಕೈಗೊಂಡಿದೆ. ಕೆಲವರು ಸಿಲಿಂಡರ್‌ಗಳನ್ನು ದಾಸ್ತಾನು ಮಾಡುತ್ತಿರುವುದು ಪತ್ತೆಯಾದ ಹಿನ್ನೆಲೆಯಲ್ಲಿ, ಇ-KYC ಮೂಲಕ ನಿಜವಾದ ಬಳಕೆದಾರರನ್ನು ಗುರುತಿಸಿ ಸರಬರಾಜು ಸುಗಮಗೊಳಿಸುವ ಉದ್ದೇಶ ಸರ್ಕಾರದಾಗಿದೆ.

ಇ-KYC ಮಾಡಿಸಲು ಗ್ಯಾಸ್ ಏಜೆನ್ಸಿಗೆ ಭೇಟಿ ನೀಡಬೇಕಾಗಿಲ್ಲ. ಮೊಬೈಲ್ ಫೋನ್ ಮೂಲಕವೇ LPG ಆಧಾರ್ ಇ-KYC ಪೂರ್ಣಗೊಳಿಸಬಹುದು. ಮುಖ ಗುರುತಿನ ಪರಿಶೀಲನೆ ಅಥವಾ ಬಯೋಮೆಟ್ರಿಕ್ ದೃಢೀಕರಣದ ಮೂಲಕ ನಿಮ್ಮ ಗುರುತನ್ನು ಪರಿಶೀಲಿಸಲಾಗುತ್ತದೆ. ಈ ಪ್ರಕ್ರಿಯೆ ಯಶಸ್ವಿಯಾಗಿ ಪೂರ್ಣಗೊಂಡರೆ ಎಂದಿನಂತೆ ಸಿಲಿಂಡರ್ ಸಿಗುತ್ತದೆ ಮತ್ತು ಸಬ್ಸಿಡಿಯೂ ಲಭ್ಯವಾಗುತ್ತದೆ.

LPG e-KYC ಎಂದರೇನು? ಇದು ಆಧಾರ್ ಮೂಲಕ ನಿಮ್ಮ ಗುರುತನ್ನು ಡಿಜಿಟಲ್ ರೂಪದಲ್ಲಿ ದೃಢೀಕರಿಸುವ ಪ್ರಕ್ರಿಯೆ. ಆಧಾರ್ ಸಂಖ್ಯೆ ಹಾಗೂ ಮುಖ/ಬಯೋಮೆಟ್ರಿಕ್ ಪರಿಶೀಲನೆಯ ಮೂಲಕ ಗ್ಯಾಸ್ ಸಂಪರ್ಕವು ಸರಿಯಾದ ಹೆಸರಿನಲ್ಲಿದೆಯೇ ಎಂದು ಖಚಿತಪಡಿಸಲಾಗುತ್ತದೆ. ಇದರಿಂದ ಗ್ಯಾಸ್ ಕಂಪನಿಯ ದಾಖಲೆಗಳು ನವೀಕರಿಸಲ್ಪಡುತ್ತವೆ. ಪ್ರಕ್ರಿಯೆ ಸುಲಭ, ಉಚಿತ ಮತ್ತು ಕೆಲವೇ ನಿಮಿಷಗಳಲ್ಲಿ ಪೂರ್ಣಗೊಳ್ಳುತ್ತದೆ.