ರೈತರಿಗೆ ಭರ್ಜರಿ ಸುದ್ದಿ – ಅರ್ಧ ಬೆಲೆಗೆ ಟ್ರಾಕ್ಟರ್ ಸಬ್ಸಿಡಿ ಯೋಜನೆ !! ಇಂದೇ ಅರ್ಜಿ ಸಲ್ಲಿಸಿ

ರೈತರಿಗೆ ಭರ್ಜರಿ ಸುದ್ದಿ – ಅರ್ಧ ಬೆಲೆಗೆ ಟ್ರಾಕ್ಟರ್ ಸಬ್ಸಿಡಿ ಯೋಜನೆ  ನಮಸ್ಕಾರ ಸ್ನೇಹಿತರೆ, ಕರ್ನಾಟಕದ ರೈತರಿಗೆ ಇದೀಗ ಮತ್ತೊಂದು ಸಂತಸದ ಸುದ್ದಿ ಬಂದಿದೆ. ನಮ್ಮ ರಾಜ್ಯವು ಕೃಷಿ ಅವಲಂಬಿತವಾಗಿದ್ದು, ಹಳ್ಳಿಗಳಲ್ಲಿಯೂ ಪಟ್ಟಣಗಳಲ್ಲಿಯೂ ಹೆಚ್ಚಿನ ಜನರು ಕೃಷಿಯ ಮೇಲೆ ಜೀವನ ಸಾಗಿಸುತ್ತಿದ್ದಾರೆ. ಇಂತಹ ರೈತರಿಗೆ ಸಹಾಯವಾಗುವಂತೆ ಕಿಸಾನ್ ಟ್ರಾಕ್ಟರ್ ಸಬ್ಸಿಡಿ ಯೋಜನೆ ಜಾರಿಗೆ ತರಲಾಗಿದೆ. ಏನಿದು ಕಿಸಾನ್ ಟ್ರಾಕ್ಟರ್ ಸಬ್ಸಿಡಿ ಯೋಜನೆ? ಈ ಯೋಜನೆಯ ಉದ್ದೇಶ ರೈತರಿಗೆ ಆಧುನಿಕ ಯಂತ್ರೋಪಕರಣಗಳನ್ನು ಒದಗಿಸಿ ಕಡಿಮೆ ಶ್ರಮದಿಂದ ಹೆಚ್ಚಿನ ಲಾಭ ಪಡೆಯುವಂತೆ ಮಾಡುವುದು. ರೈತರು ತಮ್ಮ ಜಮೀನಿನಲ್ಲಿ ಅತ್ಯಾಧುನಿಕ ತಂತ್ರಜ್ಞಾನ ಮತ್ತು ಯಂತ್ರೋಪಕರಣಗಳನ್ನು ಬಳಸಿಕೊಂಡು ಕಡಿಮೆ ಖರ್ಚಿನಲ್ಲಿ ಹೆಚ್ಚು ಆದಾಯ ಗಳಿಸಲು ಈ ಯೋಜನೆ ನೆರವಾಗುತ್ತದೆ.

ರೈತರಿಗೆ ಭರ್ಜರಿ ಸುದ್ದಿ – ಅರ್ಧ ಬೆಲೆಗೆ ಟ್ರಾಕ್ಟರ್ ಸಬ್ಸಿಡಿ ಯೋಜನೆ !! ಇಂದೇ ಅರ್ಜಿ ಸಲ್ಲಿಸಿ
ರೈತರಿಗೆ ಭರ್ಜರಿ ಸುದ್ದಿ – ಅರ್ಧ ಬೆಲೆಗೆ ಟ್ರಾಕ್ಟರ್ ಸಬ್ಸಿಡಿ ಯೋಜನೆ !! ಇಂದೇ ಅರ್ಜಿ ಸಲ್ಲಿಸಿ

ಸಣ್ಣ ಮತ್ತು ಅತಿ ಸಣ್ಣ ರೈತರಿಗೆ ವಿಶೇಷವಾಗಿ ಈ ಯೋಜನೆ ಉಪಯುಕ್ತವಾಗಿದ್ದು, ಮಿನಿ ಟ್ರಾಕ್ಟರ್‌ಗಳನ್ನು ಶೇಕಡಾ 50ರಷ್ಟು ಸಬ್ಸಿಡಿ ದರದಲ್ಲಿ ಖರೀದಿಸಲು ಅವಕಾಶ ನೀಡಲಾಗಿದೆ.

ಯೋಜನೆಯ ಪ್ರಮುಖ ಉದ್ದೇಶ

ರೈತರಿಗೆ ಆಧುನಿಕ ಯಂತ್ರೋಪಕರಣಗಳನ್ನು ಒದಗಿಸುವುದು.

ಹೊಲದ ಕೆಲಸದಲ್ಲಿ ಸಮಯ ಉಳಿತಾಯ ಮಾಡುವುದು.

ಮಾನವ ಶ್ರಮವನ್ನು ಕಡಿಮೆ ಮಾಡುವುದು.

ಉತ್ಪಾದನೆ ಹೆಚ್ಚಿಸಿ ರೈತರಿಗೆ ಹೆಚ್ಚಿನ ಆದಾಯ ದೊರಕುವಂತೆ ಮಾಡುವುದು.

ಅರ್ಹತೆ ಮತ್ತು ಷರತ್ತುಗಳು

ಅರ್ಜಿ ಸಲ್ಲಿಸಲು ರೈತರು ಕರ್ನಾಟಕದ ಕಾಯಂ ನಿವಾಸಿಯಾಗಿರಬೇಕು.

ಜಮೀನು ಕನಿಷ್ಠ 1 ಎಕರೆಯಿಂದ ಗರಿಷ್ಠ 5 ಎಕರೆಯೊಳಗೆ ಇರಬೇಕು.

ವಾರ್ಷಿಕ ಆದಾಯ 3 ಲಕ್ಷ ರೂಪಾಯಿಗಿಂತ ಕಡಿಮೆ ಇರಬೇಕು.

ಸಣ್ಣ ಅಥವಾ ಅತಿ ಸಣ್ಣ ರೈತರಾಗಿರಬೇಕು.

ಈ ಹಿಂದೆ ಈ ಯೋಜನೆಯಡಿ ಸಬ್ಸಿಡಿ ಪಡೆದಿರಬಾರದು.

ಒಂದು ಕುಟುಂಬದಲ್ಲಿ ಒಬ್ಬ ರೈತರಿಗೆ ಮಾತ್ರ ಅರ್ಜಿ ಸಲ್ಲಿಸಲು ಅವಕಾಶ.

ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ಮಹಿಳಾ ರೈತರಿಗೆ ಹೆಚ್ಚಿನ ಆದ್ಯತೆ.

ಸಬ್ಸಿಡಿ ವಿವರಗಳು

ಸಾಮಾನ್ಯ ವರ್ಗದ ರೈತರಿಗೆ ಶೇಕಡಾ 35ರಷ್ಟು ಸಬ್ಸಿಡಿ.

ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ಮಹಿಳಾ ರೈತರಿಗೆ ಶೇಕಡಾ 50ರಷ್ಟು ಸಬ್ಸಿಡಿ.

ಉದಾಹರಣೆಗೆ, ಟ್ರಾಕ್ಟರ್ ಬೆಲೆ 8 ಲಕ್ಷ ರೂಪಾಯಿ ಇದ್ದರೆ ಸಾಮಾನ್ಯ ರೈತರಿಗೆ ಗರಿಷ್ಠ 2.5 ಲಕ್ಷ ರೂಪಾಯಿ ಸಬ್ಸಿಡಿ ಸಿಗುತ್ತದೆ.

ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ಮಹಿಳಾ ರೈತರಿಗೆ 4 ಲಕ್ಷ ರೂಪಾಯಿವರೆಗೆ ಸಬ್ಸಿಡಿ ದೊರೆಯುತ್ತದೆ.

8HP ರಿಂದ 90HP ವರೆಗೆ ಮಿನಿ ಟ್ರಾಕ್ಟರ್‌ಗಳನ್ನು ಖರೀದಿಸಲು ಅವಕಾಶ.

ಅಗತ್ಯ ದಾಖಲೆಗಳು

ಆಧಾರ್ ಕಾರ್ಡ್

ಮೊಬೈಲ್ ನಂಬರ್

ರೇಷನ್ ಕಾರ್ಡ್

ಆದಾಯ ಪ್ರಮಾಣ ಪತ್ರ

ಜಾತಿ ಪ್ರಮಾಣ ಪತ್ರ

ಪಹಣಿ ಅಥವಾ RTC ಜಮೀನು ದಾಖಲೆ

ಇತ್ತೀಚಿನ ಫೋಟೋಗಳು

ಬ್ಯಾಂಕ್ ಖಾತೆ ವಿವರಗಳು

ಟ್ರಾಕ್ಟರ್ ಡೀಲರ್ ನೀಡುವ ಕೊಟೇಶನ್

ಅರ್ಜಿ ಸಲ್ಲಿಸುವ ವಿಧಾನ

ರೈತರು ಈ ಯೋಜನೆಗೆ ಅರ್ಜಿ ಸಲ್ಲಿಸಲು ಅಧಿಕೃತ ವೆಬ್‌ಸೈಟ್‌ಗೆ ಭೇಟಿ ನೀಡಿ ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸಬಹುದು. ಹತ್ತಿರದ ಆನ್‌ಲೈನ್ ಸೆಂಟರ್‌ಗಳಲ್ಲಿ ಸಹ ಅರ್ಜಿ ಸಲ್ಲಿಸಲು ಅವಕಾಶವಿದೆ. ಆಫ್‌ಲೈನ್ ಮೂಲಕ ಅರ್ಜಿ ಸಲ್ಲಿಸಲು ಬಯಸಿದರೆ ಹತ್ತಿರದ ಕೃಷಿ ಇಲಾಖೆಯ ಕಚೇರಿ ಅಥವಾ ರೈತ ಸಂಪರ್ಕ ಕೇಂದ್ರಕ್ಕೆ ಭೇಟಿ ನೀಡಬಹುದು.