ಅಪ್ಪನ ಆಸ್ತಿಯಲ್ಲಿ ಮಗನಿಗೆ ಹಕ್ಕಿಲ್ಲವೆಂದು ಕೇರಳ ಹೈಕೋರ್ಟ್ ಸ್ಪಷ್ಟಪಡಿಸಿದೆ. ಅನೆಕರಲ್ಲಿ ಇರುವ ಭ್ರಮೆ ಏನೆಂದರೆ – ತಂದೆ ದುಡಿದು ಸಂಪಾದಿಸಿದ ಆಸ್ತಿ ಮಗನಿಗೆ ಸ್ವಾಭಾವಿಕವಾಗಿ ಸೇರಬೇಕು ಎಂಬುದು. ಆದರೆ ಕಾನೂನು ಪ್ರಕಾರ ಇದು ತಪ್ಪು ಕಲ್ಪನೆ.
ಸ್ವಯಾರ್ಜಿತ ಆಸ್ತಿ ಎಂದರೇನು? ತಂದೆ ತನ್ನ ಶ್ರಮದಿಂದ, ಉದ್ಯೋಗ ಅಥವಾ ವ್ಯವಹಾರದಿಂದ ಸಂಪಾದಿಸಿ ಖರೀದಿಸಿದ ಆಸ್ತಿಯನ್ನು ಸ್ವಯಾರ್ಜಿತ ಆಸ್ತಿ ಎಂದು ಕರೆಯಲಾಗುತ್ತದೆ. ಈ ಆಸ್ತಿಯ ಮೇಲೆ ಮಗನಿಗೆ ಯಾವುದೇ ಜನ್ಮಸಿದ್ಧ ಹಕ್ಕಿಲ್ಲ. ತಂದೆ ಜೀವಂತವಾಗಿರುವವರೆಗೆ ಮಕ್ಕಳು ಈ ಆಸ್ತಿಯಲ್ಲಿ ಪಾಲು ಕೇಳಲು ಸಾಧ್ಯವಿಲ್ಲ.
ಪಿತ್ರಾರ್ಜಿತ ಆಸ್ತಿಯಲ್ಲಿ ಮಾತ್ರ ಹಕ್ಕು ಒಂದು ವೇಳೆ ಆಸ್ತಿಯು ತಂದೆಗೆ ಅವರ ತಂದೆ ಅಥವಾ ಮುತ್ತಜ್ಜನಿಂದ ವಂಶಪಾರಂಪರ್ಯವಾಗಿ ಬಂದಿದ್ದರೆ, ಅದನ್ನು ಪಿತ್ರಾರ್ಜಿತ ಆಸ್ತಿ ಎಂದು ಕರೆಯಲಾಗುತ್ತದೆ. ಇದರಲ್ಲಿ ಮಾತ್ರ ಮಕ್ಕಳಿಗೆ ಜನ್ಮಸಿದ್ಧ ಹಕ್ಕು ಇರುತ್ತದೆ.
ಕೇರಳ ಹೈಕೋರ್ಟ್ ತೀರ್ಪು ಕೇರಳದ ವ್ಯಕ್ತಿಯೊಬ್ಬ ತನ್ನ ತಂದೆಯ ಹೆಸರಿನಲ್ಲಿದ್ದ 46 ಸೆಂಟ್ಸ್ ಭೂಮಿ ತನ್ನದಾಗಬೇಕು ಎಂದು ಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದ. ಆದರೆ ತಾಯಿ ಆ ಆಸ್ತಿಯನ್ನು ಇತರರಿಗೆ ಹಂಚಲು ವಿಲ್ ಬರೆದಿದ್ದರು. ವಿಚಾರಣೆ ನಡೆಸಿದ ಹೈಕೋರ್ಟ್, ಆ ಭೂಮಿ ತಂದೆಯ ಸ್ವಯಾರ್ಜಿತ ಆಸ್ತಿಯಾಗಿದೆ ಎಂದು ಕಂಡುಹಿಡಿದು, ತಂದೆಗೆ ಅದನ್ನು ಹೆಂಡತಿಗೆ ಉಡುಗೊರೆಯಾಗಿ ನೀಡುವ ಅಥವಾ ಯಾರಿಗೆ ಬೇಕಾದರೂ ವಿಲ್ ಬರೆಯುವ ಸಂಪೂರ್ಣ ಹಕ್ಕು ಇದೆ ಎಂದು ತೀರ್ಪು ನೀಡಿತು.
ಸರಳವಾಗಿ ಹೇಳುವುದಾದರೆ:
ತಂದೆಯ ಸ್ವಂತ ಶ್ರಮದಿಂದ ಸಂಪಾದಿಸಿದ ಆಸ್ತಿಯಲ್ಲಿ ಮಗನಿಗೆ ಜೀವಂತಾವಸ್ಥೆಯಲ್ಲಿ ಯಾವುದೇ ಹಕ್ಕಿಲ್ಲ.
ವಂಶಪಾರಂಪರ್ಯವಾಗಿ ಬಂದ ಆಸ್ತಿಯಲ್ಲಿ ಮಾತ್ರ ಮಕ್ಕಳಿಗೆ ಜನ್ಮಸಿದ್ಧ ಹಕ್ಕು ಇರುತ್ತದೆ.
ಈ ತೀರ್ಪು ಆಸ್ತಿ ಹಂಚಿಕೆ ಕುರಿತಂತೆ ಜನರಲ್ಲಿ ಇರುವ ಅನೇಕ ಗೊಂದಲಗಳಿಗೆ ತೆರೆ ಎಳೆದಿದೆ.