ಬ್ಯಾನ್ ಆಗುತ್ತಾ 500 ರೂಪಾಯಿ ನೋಟು? ಇಲ್ಲಿದೆ ನೋಡಿ ಅಸಲಿ ಸತ್ಯ!!

ಇತ್ತೀಚೆಗೆ ಸಾಮಾಜಿಕ ಮಾಧ್ಯಮಗಳಲ್ಲಿ ₹500 ನೋಟುಗಳು ಸೆಪ್ಟೆಂಬರ್ 2025ರಿಂದ ಅಮಾನ್ಯವಾಗುತ್ತವೆ ಎಂಬ ರೀತಿಯ ಸಂದೇಶಗಳು ಹರಿದಾಡುತ್ತಿವೆ. ಆಪ್‌ಗಳು ಮತ್ತು ಫೋರಂಗಳಲ್ಲಿ ಹರಡುವ ಈ ಸಂದೇಶಗಳು RBI ಈ ನೋಟುಗಳನ್ನು ಹಿಂಪಡೆಯಲು ಸಿದ್ಧವಾಗುತ್ತಿದೆ ಎಂಬ ಭಯವನ್ನು ಉಂಟುಮಾಡಿವೆ. ಈ ನೋಟುಗಳು ಮಾರ್ಚ್ 2026ರೊಳಗೆ ಬಳಕೆಯಿಂದ ಹೊರಹಾಕಲಾಗುತ್ತದೆ ಎಂಬ ದಾವೆ ಮಾಡಿಕೊಂಡಿದೆ. 2016ರ ಡೀಮೋನಿಟೈಸೇಶನ್ ಪರಂಪರೆಯ ಅನುಭವ ಹಿನ್ನೆಲೆಯಲ್ಲಿ ಜನರಲ್ಲಿ ಗೊಂದಲ ಮೂಡುತ್ತಿದೆ.

ಬ್ಯಾನ್ ಆಗುತ್ತಾ 500 ರೂಪಾಯಿ ನೋಟು? ಇಲ್ಲಿದೆ ನೋಡಿ ಅಸಲಿ ಸತ್ಯ!!
ಬ್ಯಾನ್ ಆಗುತ್ತಾ 500 ರೂಪಾಯಿ ನೋಟು? ಇಲ್ಲಿದೆ ನೋಡಿ ಅಸಲಿ ಸತ್ಯ!!

ಆದರೆ RBI ಇದಕ್ಕೆ ಸಂಬಂಧಿಸಿದಂತೆ ಯಾವುದೇ ಅಧಿಕೃತ ಸೂಚನೆ ನೀಡಿಲ್ಲ. ಪ್ರೆಸ್ ಇನ್‌ಫರ್ಮೇಷನ್ ಬ್ಯೂರೋ (PIB) ಮತ್ತು ಹಲವು ಸುದ್ದಿ ಸಂಸ್ಥೆಗಳು ಈ ಸುದ್ದಿಯನ್ನು ಸುಳ್ಳು ಎಂದು ತಳ್ಳಿ ಹಾಕಿವೆ. ₹500 ನೋಟುಗಳು ಸದ್ಯಕ್ಕೂ ಕಾನೂನುಬದ್ಧ ಹಣವಾಗಿದೆ. RBI ಯಾವುದೇ ಅಧಿಕೃತ ಮಾಹಿತಿ ಅಥವಾ ಸುತ್ತೋಲೆ ಪ್ರಕಟಿಸಿರುವುದು ಇಲ್ಲ.

ಇಲ್ಲಿ ಗೊಂದಲ ಉಂಟುಮಾಡಿರುವೆದು ಆರ್‌ಬಿಐ 2025ರ ಏಪ್ರಿಲ್‌ನಲ್ಲಿ ನೀಡಿರುವ ಒಂದು ಸುತ್ತೋಲೆ. ಇದರ ಪ್ರಕಾರ ಬ್ಯಾಂಕುಗಳು ಮತ್ತು ಎಟಿಎಂ ಆಪರೇಟರ್‌ಗಳು ₹100 ಮತ್ತು ₹200 ನೋಟುಗಳ ಲಭ್ಯತೆಯನ್ನು ಹೆಚ್ಚಿಸಬೇಕು ಎಂಬ ಸೂಚನೆ ಇದೆ. ಸೆಪ್ಟೆಂಬರ್ 2025ರಲ್ಲಿನವರೆಗೆ 75% ಎಟಿಎಂ‌ಗಳು ಈ ಚಿಲ್ಲರೆ ನೋಟುಗಳನ್ನು ಪಡೇಬೇಕು ಮತ್ತು 2026ರ ಮಾರ್ಚ್ ಕೊನೆಗೆ 90% ಎಟಿಎಂ‌ಗಳಿಗೆ ಇದು ವಿಸ್ತರಿಸಬೇಕು. ಇದು ₹500 ನೋಟುಗಳನ್ನು ಹಿಂಪಡೆಯುವ ಉದ್ದೇಶವಲ್ಲ.

PIB ತನ್ನ ಅಧಿಕೃತ ಸಾಮಾಜಿಕ ಮಾಧ್ಯಮ ಖಾತೆಗಳಲ್ಲಿ ₹500 ನೋಟುಗಳ ಬದಲಾವಣೆ ಕುರಿತಾಗಿ ಯಾವುದೇ ಸೂಚನೆ ಹೊರಡಿಸಲಾಗಿಲ್ಲ ಎಂದು ಸ್ಪಷ್ಟಪಡಿಸಿದೆ. ಸಾರ್ವಜನಿಕರು ಯಾವುದೇ ಸುದ್ಧಿಯನ್ನು ನಂಬುವ ಮೊದಲು ಅಧಿಕೃತ ಮೂಲಗಳಿಂದ ಪರಿಶೀಲನೆ ಮಾಡಬೇಕು. ಸದ್ಯಕ್ಕೆ ₹500 ನೋಟುಗಳು ಸುರಕ್ಷಿತವಾಗಿವೆ ಮತ್ತು ಚಲಾವಣೆಯಲ್ಲಿವೆ.