ರಾಜ್ಯದಲ್ಲಿ ಸುಲಲಿತ ವ್ಯವಹಾರಕ್ಕೆ ಒತ್ತು ನೀಡಲು ಹಾಗೂ ಕೈಗಾರಿಕಾ ಸ್ನೇಹಿ ವಾತಾವರಣ ಸೃಷ್ಟಿಸಲು ಸರ್ಕಾರವು ಏಕಗವಾಕ್ಷಿ ಪೋರ್ಟಲ್ ಅಭಿವೃದ್ಧಿಪಡಿಸಿದೆ. ಈ ಪೋರ್ಟಲ್ ಮೂಲಕ ಹೂಡಿಕೆದಾರರಿಗೆ ಎಲ್ಲಾ ಅನುಮತಿ ಮತ್ತು ಸೇವೆಗಳು ಒಂದೇ ವೇದಿಕೆಯಲ್ಲಿ ಲಭ್ಯವಾಗಲಿವೆ. ಹೂಡಿಕೆಗಳನ್ನು ಸುಗಮಗೊಳಿಸಲು ಡಿಜಿಟಲ್-ಪ್ರಥಮ ವಿಧಾನ ವ್ಯವಸ್ಥೆ ಜಾರಿಗೊಳಿಸಲಾಗಿದೆ. ಇದರಿಂದ ಪ್ರಕ್ರಿಯೆಗಳು ವೇಗವಾಗಿ ನಡೆಯಲಿದ್ದು, ಹೂಡಿಕೆದಾರರಿಗೆ ಸಮಯ ಮತ್ತು ಸಂಪನ್ಮೂಲ ಉಳಿಯಲಿದೆ.
ಇನ್ವೆಸ್ಟ್ ಕರ್ನಾಟಕ 2025 ಸಮಾವೇಶದಲ್ಲಿ ಒಟ್ಟು 98 ಕಂಪೆನಿಗಳೊಂದಿಗೆ ₹6,23,970 ಕೋಟಿ ಹೂಡಿಕೆ ಒಡಂಬಡಿಕೆಗಳಿಗೆ ಸಹಿ ಮಾಡಲಾಗಿದೆ. ಇದು ರಾಜ್ಯದ ಕೈಗಾರಿಕಾ ಬೆಳವಣಿಗೆಗೆ ಮಹತ್ವದ ಹೆಜ್ಜೆಯಾಗಿದೆ.
ಈ ಹೂಡಿಕೆಗಳಿಂದ 2.20 ಲಕ್ಷ ಉದ್ಯೋಗಗಳು ಸೃಷ್ಟಿಯಾಗುವ ನಿರೀಕ್ಷೆಯಿದೆ. ಯುವಕರಿಗೆ ಉದ್ಯೋಗಾವಕಾಶಗಳು ಹೆಚ್ಚುವುದರ ಜೊತೆಗೆ, ರಾಜ್ಯದ ಆರ್ಥಿಕತೆಯು ಮತ್ತಷ್ಟು ಬಲಪಡಲಿದೆ.
ಸರ್ಕಾರದ ಈ ಕ್ರಮವು ಕರ್ನಾಟಕವನ್ನು ಹೂಡಿಕೆದಾರರ ಪ್ರಿಯ ಗಮ್ಯಸ್ಥಳವನ್ನಾಗಿ ರೂಪಿಸುವುದರ ಜೊತೆಗೆ, ಕೈಗಾರಿಕಾ ಕ್ಷೇತ್ರದಲ್ಲಿ ಹೊಸ ಯುಗವನ್ನು ಆರಂಭಿಸುವ ನಿರೀಕ್ಷೆ ಮೂಡಿಸಿದೆ.