ಇಡೀ ಕನ್ನಡಿಗರ ಮನಸ್ಸು ಗೆದ್ದಿದ್ದ ‘ಪುಟ್ಟಕ್ಕನ ಮಕ್ಕಳು’ ಧಾರಾವಾಹಿಯ ಸ್ನೇಹಳ ಪಾತ್ರದ ಮೂಲಕ ಸಂಜನ ಬುರ್ಲಿ ಅವರು ಮನೆಮಾತಾಗಿದ್ದರು. ಈಗ ಅವರು ‘ಗಂಧದ ಗುಡಿ’ ಎಂಬ ಹೊಸ ಧಾರಾವಾಹಿಯ ಮೂಲಕ ಮತ್ತೆ ಸ್ಮಾಲ್ ಸ್ಕ್ರೀನ್‌ಗೆ ವಾಪಸ್ ಆಗುತ್ತಿದ್ದಾರೆ. ಈ ಕುರಿತು ಅವರು ತಮ್ಮ ಅನುಭವಗಳನ್ನು ಹಂಚಿಕೊಂಡಿದ್ದಾರೆ.
ಸಂಜನ ಹೇಳುತ್ತಾರೆ: “ಪುಟ್ಟಕ್ಕನ ಮಕ್ಕಳು ಧಾರಾವಾಹಿಯಿಂದ ನನಗೆ ಕರ್ನಾಟಕದಾದ್ಯಂತ ಅಪಾರ ಪ್ರೀತಿ ಸಿಕ್ಕಿತು. ಸ್ನೇಹಳ ಪಾತ್ರ ನನಗೆ ತುಂಬಾ ಪರ್ಸನಲ್ ಆಗಿತ್ತು. ನಾನು ಆ ಪಾತ್ರ ಬಿಟ್ಟ ನಂತರ ಜನರು ಎಷ್ಟು ಅತ್ತುಬಿಟ್ಟಿದ್ರು, ಎಷ್ಟು ಮಿಸ್ ಮಾಡಿದ್ರು ಅನ್ನೋದು ನನಗೆ ಆಮೇಲೆ ಗೊತ್ತಾಯ್ತು. ಮೂರು ವರ್ಷ ನಾನು ಆ ಪಾತ್ರದಲ್ಲಿ ಸಂಪೂರ್ಣವಾಗಿ ಇನ್ವಾಲ್ವ್ ಆಗಿದ್ದೆ. ಆ ಪಾತ್ರಕ್ಕೆ ನ್ಯಾಯ ಒದಗಿಸಲು ನಾನು ತುಂಬಾ ಕಷ್ಟಪಟ್ಟೆ. ಆದರೆ ನಾನು ಬಿಟ್ಟ ನಂತರ ಜನರು ತೋರಿಸಿದ ಪ್ರೀತಿ, ಅವರ ಪ್ರತಿಕ್ರಿಯೆ, ಅವರ ನೆನಪಿನಲ್ಲಿ ನಾನು ಉಳಿದಿರುವುದು—all that is the true reward for an actor.”
ಅವರು ಮುಂದುವರೆದು ಹೇಳುತ್ತಾರೆ: “ನಾನು ಇಂಜಿನಿಯರಿಂಗ್ ಮಾಡುತ್ತಿದ್ದೆ. ಜೊತೆಗೆ ‘ಪುಟ್ಟಕ್ಕನ ಮಕ್ಕಳು’ ಮಾಡುತ್ತಿದ್ದೆ. ಅದು ತುಂಬಾ ಹೆಕ್ಟಿಕ್ ಆಗಿತ್ತು. ಆ ಕಾರಣದಿಂದಾಗಿ ನನಗೆ ಒಂದು ವರ್ಷ ಬ್ರೇಕ್ ಬೇಕಿತ್ತು—ಮೆಂಟಲಿ, ಫಿಸಿಕಲಿ, ಸ್ಪಿರಿಚುಲಿ. ಆ ಸಮಯದಲ್ಲಿ ನಾನು ಸ್ವಲ್ಪ ರೆಜುಮನೇಟ್ ಆಗಿದೆ. ಈ ನಡುವೆ ಹಲವಾರು ಪ್ರಾಜೆಕ್ಟ್ಸ್ ಬಂದಿದ್ರು. ಆದರೆ ಯಾವುದು ನನ್ನ ಮನಸ್ಸಿಗೆ ತಟ್ಟಲಿಲ್ಲ. ಆದರೆ ‘ಗಂಧದ ಗುಡಿ’ ಬಂದಾಗ, ಟೈಟಲ್ ಗೊತ್ತಿಲ್ಲದಿದ್ದರೂ, ಕಥೆ ಮತ್ತು ಪಾತ್ರ ಕೇಳಿದ ತಕ್ಷಣ ನನಗೆ ‘ಇದು ಮಾಡಲೇಬೇಕು’ ಅನ್ನಿಸಿತು. ಆ ಗಟ್ಟ ಫೀಲಿಂಗ್ ನನಗೆ ಈ ಪ್ರಾಜೆಕ್ಟ್ ಒಪ್ಪಿಕೊಳ್ಳಲು ಕಾರಣವಾಯ್ತು.”
‘ಗಂಧದ ಗುಡಿ’ ಧಾರಾವಾಹಿಯ ಕಥೆಯ ಬಗ್ಗೆ ಅವರು ಹೀಗೆ ಹೇಳುತ್ತಾರೆ: “ಇದು ಒಂದು ಕಾಮಿಕಲ್ ಡ್ರಾಮಾ. ನಗಿಸುತ್ತೆ, ಅಳಿಸುತ್ತೆ—ಎಮೋಷನಲ್ ರೂಲರ್ ಕೋಸ್ಟರ್ ತರ. ನಾನು ತಮಿಳು ಸ್ಪಿನ್ ಆಫ್ ‘ಐಎನ್ಆರ್ ತುಯಕೆ’ ಕೆಲವೊಂದು ಎಪಿಸೋಡ್ಸ್ ನೋಡಿದ್ದೆ. ಆದರೆ ನಮ್ಮ ಕನ್ನಡದ ಸೊಗಡಕ್ಕೆ ತಕ್ಕಂತೆ ಈ ಕಥೆಯನ್ನು ಅಡಾಪ್ಟ್ ಮಾಡಲಾಗಿದೆ. ನಮ್ಮ ಆಡಿಯನ್ಸ್‌ಗಾಗಿ ನಾವು ಸ್ವಲ್ಪ ಬದಲಾವಣೆಗಳನ್ನು ಮಾಡಿದ್ದೇವೆ. ನಾನು ಖಚಿತವಾಗಿ ಹೇಳಬಹುದು, ಕರ್ನಾಟಕದ ಜನರಿಗೆ ಈ ಧಾರಾವಾಹಿ ತುಂಬಾ ಇಷ್ಟ ಆಗುತ್ತದೆ.”
ಈ ಸೀರಿಯಲ್‌ನ್ನು ಏಕೆ ಆಯ್ಕೆ ಮಾಡಿದರು ಎಂಬ ಪ್ರಶ್ನೆಗೆ ಅವರು ಉತ್ತರಿಸುತ್ತಾರೆ: “ನನಗೆ ಗಟ್ ಫೀಲಿಂಗ್ ಆಯ್ತು—this is a once-in-a-lifetime opportunity. ಕನ್ನಡ ಧಾರಾವಾಹಿಗಳಲ್ಲಿ ಈ ತರಹದ ಕಾನ್ಸೆಪ್ಟ್ ನೋಡಿರಲ್ಲ. ಸಾಮಾನ್ಯವಾಗಿ ಅತ್ತೆ–ಸೊಸೆ ಡ್ರಾಮಾ ಜಾಸ್ತಿ ಇರುತ್ತೆ. ಆದರೆ ಇಲ್ಲಿ ಒಂದು ಹುಡುಗಿ ಎಂಟ್ರಿ ಕೊಟ್ಟ ತಕ್ಷಣ ಎಲ್ಲರ ಲೈಫ್ ಚೇಂಜ್ ಆಗುತ್ತೆ. ಇದು ಸಿನಿಮಾದಲ್ಲಿ ನೋಡಿರಬಹುದು, ಆದರೆ ಧಾರಾವಾಹಿಯಲ್ಲಿ ಹೊಸದು. ಜೊತೆಗೆ ನಾನು ಕಾಮಿಡಿ ಹೆಚ್ಚು ಮಾಡಿಲ್ಲ. ಈ ಧಾರಾವಾಹಿಯಲ್ಲಿ ಕಾಮಿಕಲ್ ಡ್ರಾಮಾ ಇರುವುದರಿಂದ ನನ್ನ ಕಾಮಿಡಿ ಟೈಮಿಂಗ್‌ನ್ನು ಇಂಪ್ರೂವ್ ಮಾಡಿಕೊಳ್ಳಲು ಅವಕಾಶ ಸಿಗುತ್ತೆ. ಇದು ಒಂದು ಚಾಲೆಂಜಿಂಗ್ ಮತ್ತು ಸೂಪರ್ ಆಪರ್ಚುನಿಟಿ.”
ಅವರು ಕೊನೆಗೆ ಹೇಳುತ್ತಾರೆ: “ಎಲ್ಲಾ ಹುಡುಗರ ಮಧ್ಯದಲ್ಲಿ ಒಂದು ಹುಡುಗಿಯಾಗಿ ಪರ್ಫಾರ್ಮ್ ಮಾಡೋದು, ಎದ್ದು ಕಾಣಿಸಿಕೊಳ್ಳೋದು, ಹೈಲೈಟ್ ಆಗೋದು—ಇದು ಒಂದು ಆಕ್ಟರ್ ಆಗಿ ನನಗೆ ಸಿಕ್ಕ ಅವಕಾಶ. ಸ್ವಲ್ಪ ಆರ್ಟಿಸ್ಟ್ ಆಗಿ, ಸ್ವಲ್ಪ ಸೆಲ್ಫಿಶ್ ಆಗಿ ಯೋಚನೆ ಮಾಡಿ ಈ ಪ್ರಾಜೆಕ್ಟ್ ಒಪ್ಪಿಕೊಂಡೆ.”