ನಿಮ್ಮ ದಾಂಪತ್ಯ ಜೀವನ ಸುಖಮಯ ವಾಗಿರ ಬೇಕಾದರೆ ಹೇಗಿರಬೇಕು ಎಂದು ಟಿಪ್ಸ್​ ಕೊಟ್ಟ ನಿವೇದಿತಾ ಗೌಡ!!

ಬಿಗ್‌ಬಾಸ್ ಮನೆಯಲ್ಲಿ ಸ್ಪರ್ಧಿಯಾಗಿದ್ದಾಗಲೇ ಚಂದನ್‌ ಶೆಟ್ಟಿಯವರ ಪ್ರೀತಿಗೆ ಬಿದ್ದ ನಿವೇದಿತಾ ಗೌಡ, ಮೈಸೂರು ದಸರಾ ವೇದಿಕೆಯಲ್ಲಿ ನಡೆದ ಪ್ರಪೋಸ್‌ನಿಂದಲೇ ಸುದ್ದಿಯಲ್ಲಿದ್ದರು. ಆ ಸಮಯದಲ್ಲಿ ಹಲವರ ಟೀಕೆಗೂ ಗುರಿಯಾದರು. ನಂತರ ಇಬ್ಬರ ದಾಂಪತ್ಯ ಜೀವನದಲ್ಲಿ ಹೊಂದಾಣಿಕೆ ಕಷ್ಟವಾಗಿ, ವಿಚ್ಛೇದನ ಪಡೆದರು.

ನಿಮ್ಮ  ದಾಂಪತ್ಯ ಜೀವನ ಸುಖಮಯ ವಾಗಿರ ಬೇಕಾದರೆ ಹೇಗಿರಬೇಕು ಎಂದು ಟಿಪ್ಸ್​ ಕೊಟ್ಟ ನಿವೇದಿತಾ ಗೌಡ!!
ನಿಮ್ಮ ದಾಂಪತ್ಯ ಜೀವನ ಸುಖಮಯ ವಾಗಿರ ಬೇಕಾದರೆ ಹೇಗಿರಬೇಕು ಎಂದು ಟಿಪ್ಸ್​ ಕೊಟ್ಟ ನಿವೇದಿತಾ ಗೌಡ!!

ವಿಚ್ಛೇದನದ ನಂತರ ನಿವೇದಿತಾ ಗೌಡ ಸದಾ ಸುದ್ದಿಯಲ್ಲಿರುವ ನಟಿಯಾಗಿ ಹೊರಹೊಮ್ಮಿದ್ದಾರೆ. ತುಂಡುಡುಗೆಯಲ್ಲಿ ರೀಲ್ಸ್ ಮಾಡುವುದರಿಂದ ಹಿಡಿದು, ಸಂದರ್ಶನಗಳಲ್ಲಿ ತಮ್ಮ ಅಭಿಪ್ರಾಯ ಹಂಚಿಕೊಳ್ಳುವುದರವರೆಗೆ, ಅವರು ಜನರ ಗಮನ ಸೆಳೆಯುತ್ತಿದ್ದಾರೆ.

ಇತ್ತೀಚೆಗೆ anything_about_everything ಎಂಬ ಸೋಷಿಯಲ್ ಮೀಡಿಯಾ ಚಾನೆಲ್‌ಗೆ ನೀಡಿದ ಸಂದರ್ಶನದಲ್ಲಿ, ದಾಂಪತ್ಯ ಜೀವನದ ಬಗ್ಗೆ ಟಿಪ್ಸ್ ಹಂಚಿಕೊಂಡಿದ್ದಾರೆ. “ಸಂಗಾತಿಗೆ ಎಷ್ಟು ಗಂಟೆ ಮೀಸಲು ಇಡುತ್ತೇವೆ ಎನ್ನುವುದು ಮುಖ್ಯವಲ್ಲ. ನಾವು ಜೊತೆಯಾಗಿ ಕಳೆಯುವ ಸಮಯದ ಗುಣಮಟ್ಟವೇ ಮುಖ್ಯ. 24 ಗಂಟೆ ಅವರೊಟ್ಟಿಗೆ ಇರಬೇಕೆಂಬುದಿಲ್ಲ, ಅರ್ಧ ಗಂಟೆ ಇದ್ದರೂ ಗುಣಮಟ್ಟದ ಸಮಯ ನೀಡಬೇಕು. Quantity ಮುಖ್ಯವಲ್ಲ, Quality ಮುಖ್ಯ” ಎಂದು ಹೇಳಿದ್ದಾರೆ.

ಈ ಹೇಳಿಕೆ ಕೇಳಿ ನೆಟ್ಟಿಗರು ವಿಭಿನ್ನ ಪ್ರತಿಕ್ರಿಯೆ ನೀಡಿದ್ದಾರೆ. ಕೆಲವರು “ಅವಳು ಏನು ಹೇಳುತ್ತಿದ್ದಾಳೆ ಎನ್ನುವುದು ಅವಳಿಗೆ ಗೊತ್ತಾ?” ಎಂದು ಪ್ರಶ್ನಿಸಿದರೆ, ಇನ್ನೂ ಕೆಲವರು “ನಿನ್ನ ಬಾಯಿಂದ ಕಿವಿಮಾತು ಕೇಳಿ ಧನ್ಯನಾದೆ” ಎಂದು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ಚಂದನ್‌ ಶೆಟ್ಟಿ ಅವರು, “ನಿವೇದಿತಾ ಐಷಾರಾಮಿ ಜೀವನ ಬಯಸುವವಳು, ನನಗೆ ಸಿಂಪಲ್ ಲೈಫ್ ಇಷ್ಟ. ಅದರಿಂದ ಹೊಂದಾಣಿಕೆ ಕಷ್ಟವಾಯಿತು” ಎಂದು ಹೇಳಿಕೊಂಡಿದ್ದರು. ಮದುವೆಯಾದ ಮೇಲೂ ತಮ್ಮ ದುಡ್ಡಿನಲ್ಲಿಯೇ ಖರ್ಚು ಮಾಡುತ್ತಿದ್ದೆ ಎಂದು ನಿವೇದಿತಾ ಒಪ್ಪಿಕೊಂಡಿದ್ದರು.

ಆರ್ಥಿಕವಾಗಿ ಸ್ವಾವಲಂಬಿಯಾಗಿ ಬದುಕಬೇಕು ಎಂಬ ಗುರಿ ಹೊಂದಿರುವ ನಿವೇದಿತಾ, ಈಗ ಯಾವ ಹಂತಕ್ಕಾದರೂ ಹೋಗಲು ಸಿದ್ಧರಾಗಿದ್ದಾರೆ. ಸಿನಿಮಾದಲ್ಲಿ ನಟನೆಯ ಆಸೆ ಇದ್ದು, ಅದು ಸಿಗದಿದ್ದರೆ ಐಟಂ ಸಾಂಗ್ ಆದರೂ ಮಾಡುತ್ತೇನೆ, ನನಗೆ ದುಡ್ಡು ಬೇಕು, ಫೈನಾನ್ಷಿಯಲ್ ಸ್ಟ್ರಾಂಗ್ ಆಗಬೇಕು ಎಂದು ಧೈರ್ಯದಿಂದ ಹೇಳಿದ್ದಾರೆ.