ʻಬಿಗ್‌ ಬಾಸ್‌ ಕನ್ನಡ ನಟಿಯ ಮೇಲೆ "ಲೈಂ*ಗಿ*ಕ"* ದೌರ್ಜನ್ಯ !! ಕಪಾಳಮೋಕ್ಷ ಮಾಡಿದ ನಟಿ

‘ಬಿಗ್‌ ಬಾಸ್‌ ಕನ್ನಡ ಸೀಸನ್‌ 12’ರ ವೈಲ್ಡ್‌ ಕಾರ್ಡ್ ಸ್ಪರ್ಧಿ ರಿಷಾ ಗೌಡ ಅವರು ಸಾರ್ವಜನಿಕ ಸಾರಿಗೆಯಲ್ಲಿ ತಮಗಾದ ಕಹಿ ಅನುಭವವನ್ನು ಹಂಚಿಕೊಂಡಿದ್ದಾರೆ. ಉಡುಗೆ ಮತ್ತು ದೌರ್ಜನ್ಯಕ್ಕೆ ಯಾವುದೇ ಸಂಬಂಧವಿಲ್ಲವೆಂದು ಸ್ಪಷ್ಟಪಡಿಸಿದ ಅವರು, ಅನ್ಯಾಯದ ವಿರುದ್ಧ ಧ್ವನಿ ಎತ್ತದ ಸಮಾಜದ ಮೌನವನ್ನು ತೀವ್ರವಾಗಿ ಟೀಕಿಸಿದ್ದಾರೆ. ಈ ಘಟನೆ ಮೂಲಕ ಮಹಿಳೆಯರ ಸುರಕ್ಷತೆಯ ಬಗ್ಗೆ ಗಂಭೀರ ಪ್ರಶ್ನೆಗಳನ್ನು ಎತ್ತಿದ್ದಾರೆ.
ಬಿಗ್‌ಬಾಸ್ ಕನ್ನಡ ಸೀಸನ್ 12ರ ಸ್ಪರ್ಧಿ ರಿಷಾ ಗೌಡ ಅವರು ತಮಗಾದ ಕಹಿ ಅನುಭವವೊಂದನ್ನು ಹಂಚಿಕೊಳ್ಳುವ ಮೂಲಕ ಸಮಾಜದಲ್ಲಿ ಹೆಣ್ಣುಮಕ್ಕಳ ಸುರಕ್ಷತೆಯ ಬಗ್ಗೆ ಗಂಭೀರ ಪ್ರಶ್ನೆಗಳನ್ನು ಎತ್ತಿದ್ದಾರೆ. ನಮ್ಮಲ್ಲಿ ಬೇರೆ ದೇಶಗಳಂತೆ ಹೆಣ್ಣುಮಕ್ಕಳಿಗೆ ಸೂಕ್ತ ರಕ್ಷಣೆಯೇ ಇಲ್ಲ ಎಂದು ರಿಷಾ ಬೇಸರ ಹಂಚಿಕೊಂಡಿದ್ದಾರೆ.

ʻಬಿಗ್‌ ಬಾಸ್‌ ಕನ್ನಡ ನಟಿಯ ಮೇಲೆ
ʻಬಿಗ್‌ ಬಾಸ್‌ ಕನ್ನಡ ನಟಿಯ ಮೇಲೆ "ಲೈಂ*ಗಿ*ಕ"* ದೌರ್ಜನ್ಯ !! ಕಪಾಳಮೋಕ್ಷ ಮಾಡಿದ ನಟಿ


ರಿಷಾ ತಮ್ಮ ಅನುಭವವನ್ನು ವಿವರಿಸುತ್ತಾ, “ಟಾಪ್ ಮತ್ತು ಜೀನ್ಸ್ ಧರಿಸಿ ಏರ್‌ಪೋರ್ಟ್‌ಗೆ ಬಸ್‌ನಲ್ಲಿ ಹೋಗುತ್ತಿದ್ದೆ. ನನ್ನ ಹಿಂದೆ ಕುಳಿತಿದ್ದ ವ್ಯಕ್ತಿಯೊಬ್ಬ ಪದೇ ಪದೇ ಅಸಭ್ಯವಾಗಿ ಮುಟ್ಟುತ್ತಿದ್ದ. ಸಹಿಸಿಕೊಳ್ಳುವಷ್ಟು ಸಹಿಸಿಕೊಂಡು, ಕೊನೆಗೆ ಅಲ್ಲಿಯೇ ಅವನ ಕಪಾಳಕ್ಕೆ ಬಾರಿಸಿದೆ. ಆದರೆ ಆ ಸಮಯದಲ್ಲಿ ಬಸ್ ಕಂಡಕ್ಟರ್ ಮಾತ್ರ ನೆರವಿಗೆ ಬಂದರು. ಇತರ ಪುರುಷ ಪ್ರಯಾಣಿಕರು ಏನೂ ಆಗದಂತೆ ಸುಮ್ಮನೆ ನೋಡುತ್ತಿದ್ದರು. ಇದೇನಾ ಮಹಿಳೆಯರಿಗೆ ರಕ್ಷಣೆ?” ಎಂದು ಪ್ರಶ್ನಿಸಿದ್ದಾರೆ.

ಮಹಿಳೆಯರು ಧರಿಸುವ ಬಟ್ಟೆಯ ಬಗ್ಗೆ ಟೀಕೆ ಮಾಡುವವರಿಗೆ ತಿರುಗೇಟು ನೀಡಿದ ರಿಷಾ, “ಚೂಡಿದಾರ್, ಸೀರೆ, ಲಂಗ ದಾವಣಿ ಹಾಕಿದವರ ಮೇಲೂ ದೌರ್ಜನ್ಯಗಳು ನಡೆಯುತ್ತಿವೆ. ಶಾರ್ಟ್ಸ್ ಅಥವಾ ಸ್ಲೀವ್‌ಲೆಸ್ ಟಾಪ್ ಹಾಕಿದರೆ ಮಾತ್ರ ಈ ಘಟನೆಗಳು ಆಗುತ್ತಿವೆಯೇ? ಗಂಡಾಗಲಿ, ಹೆಣ್ಣಾಗಲಿ ಮೊದಲು ಶಿಕ್ಷಣ ಪಡೆದಿರಬೇಕು. ಸಮಾಜದಲ್ಲಿ ಮಹಿಳೆಯರು ತಲೆ ಎತ್ತಿ ನಡೆಯಬೇಕಾದರೆ, ಆಪತ್ತಿನ ಸಂದರ್ಭಗಳಲ್ಲಿ ಪುರುಷರು ಸಹಾಯಕ್ಕೆ ನಿಲ್ಲಬೇಕು” ಎಂದು ಹೇಳಿದ್ದಾರೆ.

ಅವರ ಮಾತುಗಳು ಮಹಿಳೆಯರ ಸುರಕ್ಷತೆ, ಸಮಾಜದ ಜವಾಬ್ದಾರಿ ಮತ್ತು ಶಿಕ್ಷಣದ ಅಗತ್ಯತೆಯ ಬಗ್ಗೆ ಗಂಭೀರ ಚಿಂತನೆಗೆ ಕಾರಣವಾಗಿವೆ.