ಖ್ಯಾತ ನಟಿ ಭೀಕರ ಕಾರು ಅಪಘಾತದಿಂದ ಧಿಡೀರ್ ಸಾವು!!

ಜೈಪುರದ ಶಿಪ್ರಾ ಪಥ್ ರಸ್ತೆಯಲ್ಲಿ ನಡೆದ ಭೀಕರ ಕಾರು ಅಪಘಾತದಲ್ಲಿ ನಟ ಹಾಗೂ ಮಾದರಿ ಹರ್ಷಿಲ್ ಕಾಲಿಯಾ ದುರ್ಮರಣ ಹೊಂದಿದ್ದಾರೆ. ಸೋಮವಾರ ರಾತ್ರಿ ಕೆಲಸ ಮುಗಿಸಿಕೊಂಡು ಮನೆಗೆ ಮರಳುತ್ತಿದ್ದ ವೇಳೆ ಅವರ ಕಾರು ನಿಯಂತ್ರಣ ತಪ್ಪಿ ಡಿವೈಡರ್‌ಗೆ ಡಿಕ್ಕಿ ಹೊಡೆದು ತಲೆಕೆಳಗಾಗಿ ಬಿದ್ದಿತು. ಸ್ಥಳೀಯರು ತಕ್ಷಣವೇ ಅವರನ್ನು ಆಸ್ಪತ್ರೆಗೆ ಕರೆದೊಯ್ದರೂ ತೀವ್ರ ಗಾಯಗಳಿಂದ ಅವರು ಪ್ರಾಣ ಕಳೆದುಕೊಂಡರು.

ಖ್ಯಾತ ನಟಿ ಭೀಕರ ಕಾರು ಅಪಘಾತದಿಂದ ಧಿಡೀರ್ ಸಾವು!!
ಖ್ಯಾತ ನಟಿ ಭೀಕರ ಕಾರು ಅಪಘಾತದಿಂದ ಧಿಡೀರ್ ಸಾವು!!

ಹರ್ಷಿಲ್ ಕಾಲಿಯಾ ಕ್ರೈಮ್ ನೆಕ್ಸ್ಟ್ ಡೋರ್ ವೆಬ್ ಸರಣಿಯಲ್ಲಿ ಅಭಿನಯಿಸಿದ್ದರು. ಜೊತೆಗೆ ಅವರು ನ್ಯೂಸ್ ಚಾನೆಲ್‌ನಲ್ಲಿ ಆಂಕರ್ ಆಗಿ ಕೆಲಸ ಮಾಡಿದ್ದರು ಹಾಗೂ ಹಲವು ರಾಜಸ್ಥಾನಿ ಹಾಡುಗಳಲ್ಲಿ ನಟಿಸಿದ್ದರು. ಮಾದರಿಯಾಗಿ ತಮ್ಮ ವೃತ್ತಿಜೀವನವನ್ನು ಮುಂದುವರಿಸುತ್ತಿದ್ದ ಅವರು, ಕೇವಲ 30 ವರ್ಷ ವಯಸ್ಸಿನಲ್ಲಿ ಅಕಾಲಿಕವಾಗಿ ಸಾವನ್ನಪ್ಪಿರುವುದು ಮನರಂಜನಾ ಕ್ಷೇತ್ರಕ್ಕೆ ದೊಡ್ಡ ಆಘಾತವಾಗಿದೆ.

ಪೊಲೀಸರು ಅಪಘಾತದ ಕಾರಣವನ್ನು ತನಿಖೆ ನಡೆಸುತ್ತಿದ್ದಾರೆ. ವೇಗದ ಚಾಲನೆ ಅಥವಾ ಇನ್ನೊಂದು ವಾಹನದ ತೀವ್ರ ತಿರುವು ಕಾರಣವಾಗಿರಬಹುದೆಂದು ಶಂಕೆ ವ್ಯಕ್ತಪಡಿಸಲಾಗಿದೆ. ಅಪಘಾತದ ನಿಖರ ಕಾರಣವನ್ನು ಪತ್ತೆಹಚ್ಚಲು ತಾಂತ್ರಿಕ ಪರಿಶೀಲನೆ ನಡೆಯುತ್ತಿದೆ.

ಹರ್ಷಿಲ್ ಕಾಲಿಯಾ ಅವರ ಅಕಾಲಿಕ ನಿಧನವು ಕುಟುಂಬ, ಅಭಿಮಾನಿಗಳು ಹಾಗೂ ಕಲಾರಂಗಕ್ಕೆ ಅತೀವ ದುಃಖ ತಂದಿದೆ. ಸಾಮಾಜಿಕ ಜಾಲತಾಣಗಳಲ್ಲಿ ಅಭಿಮಾನಿಗಳು ಶ್ರದ್ಧಾಂಜಲಿ ಸಲ್ಲಿಸುತ್ತಿದ್ದು, ಅವರ ಪ್ರತಿಭೆ ಮತ್ತು ಸಾಧನೆಗಳನ್ನು ನೆನೆದು ಕಣ್ಣೀರು ಹಾಕುತ್ತಿದ್ದಾರೆ.