ಇಂದು (ಫೆಬ್ರವರಿ 12, 2026) ದೇಶಾದ್ಯಂತ ಭಾರತ್ ಬಂದ್ !! ಯಾವುದು ಇರುತ್ತೆ ಮತ್ತು ಯಾವುದು ಇಲ್ಲ ನೋಡಿ ?

ಇಂದು (ಫೆಬ್ರವರಿ 12, 2026) ದೇಶಾದ್ಯಂತ ಭಾರತ್ ಬಂದ್ ನಡೆಯುತ್ತಿದೆ. ಈ ಮುಷ್ಕರಕ್ಕೆ ಕರೆ ನೀಡಿರುವವರು ಪ್ರಮುಖ ಕಾರ್ಮಿಕ ಸಂಘಟನೆಗಳು, ರೈತ ಸಂಘಟನೆಗಳು ಹಾಗೂ ಕೆಲವು ಸಾಮಾಜಿಕ ಸಂಘಟನೆಗಳ ಒಕ್ಕೂಟ. ಒಟ್ಟು 10ಕ್ಕೂ ಹೆಚ್ಚು ಕಾರ್ಮಿಕ ಹಾಗೂ ರೈತ ಸಂಘಟನೆಗಳು ಸೇರಿ ಈ ಬಂದ್‌ಗೆ ಕರೆ ನೀಡಿವೆ.

ಇಂದು (ಫೆಬ್ರವರಿ 12, 2026) ದೇಶಾದ್ಯಂತ ಭಾರತ್ ಬಂದ್ !! ಯಾವುದು ಇರುತ್ತೆ ಮತ್ತು ಯಾವುದು ಇಲ್ಲ ನೋಡಿ ?
ಇಂದು (ಫೆಬ್ರವರಿ 12, 2026) ದೇಶಾದ್ಯಂತ ಭಾರತ್ ಬಂದ್ !! ಯಾವುದು ಇರುತ್ತೆ ಮತ್ತು ಯಾವುದು ಇಲ್ಲ ನೋಡಿ ?

ಕರೆ ನೀಡಿದವರು
ಅಖಿಲ ಭಾರತ ಕಾರ್ಮಿಕ ಸಂಘಟನೆಗಳ ಒಕ್ಕೂಟ

ಪ್ರಮುಖ ರೈತ ಸಂಘಟನೆಗಳು

ಹಲವಾರು ಸಾಮಾಜಿಕ ಸಂಘಟನೆಗಳು

ಪ್ರಮುಖ ಬೇಡಿಕೆಗಳು
ಕೇಂದ್ರ ಸರ್ಕಾರದ ಕೃಷಿ ನೀತಿಗಳ ವಿರುದ್ಧ ತೀವ್ರ ವಿರೋಧ.

ಕಾರ್ಮಿಕ ಸುಧಾರಣೆಗಳು ಕಾರ್ಮಿಕರ ಹಕ್ಕುಗಳನ್ನು ಹಾಳು ಮಾಡುತ್ತಿವೆ ಎಂಬ ಆರೋಪ.

ಆರ್ಥಿಕ ನೀತಿಗಳು ಸಾಮಾನ್ಯ ಜನರ ಜೀವನಮಟ್ಟವನ್ನು ಕುಗ್ಗಿಸುತ್ತಿವೆ ಎಂಬ ಅಸಮಾಧಾನ.

ಸಾರ್ವಜನಿಕ ವಲಯದ ಖಾಸಗೀಕರಣವನ್ನು ತಡೆಗಟ್ಟಬೇಕು ಎಂಬ ಒತ್ತಾಯ.

ಕನಿಷ್ಠ ವೇತನ ಹೆಚ್ಚಳ, ಉದ್ಯೋಗ ಭದ್ರತೆ ಹಾಗೂ ಸಾಮಾಜಿಕ ಭದ್ರತಾ ಯೋಜನೆಗಳನ್ನು ಬಲಪಡಿಸುವ ಬೇಡಿಕೆ.
ಮುಷ್ಕರದ ಪರಿಣಾಮಗಳು ದೇಶಾದ್ಯಂತ ಕಾಣಸಿಗುವ ಸಾಧ್ಯತೆ ಇದೆ. ಕಾರ್ಖಾನೆಗಳು, ಕಚೇರಿಗಳು, ಬ್ಯಾಂಕುಗಳು ಮತ್ತು ವಿಮಾ ಸಂಸ್ಥೆಗಳು ಬಂದ್ ಆಗಬಹುದು. ಸಾರ್ವಜನಿಕ ಸಾರಿಗೆ, ವ್ಯಾಪಾರ ಮಳಿಗೆಗಳು ಮತ್ತು ಶಾಲೆಗಳು ಪ್ರಭಾವಿತವಾಗಬಹುದು. ಕರ್ನಾಟಕದಲ್ಲಿ ಜಂಟಿ ಕ್ರಿಯಾ ಸಮಿತಿಯಿಂದ ಬೃಹತ್ ಪ್ರತಿಭಟನೆಗಳು ನಡೆಯಲಿವೆ. ರೈತ ಸಂಘಟನೆಗಳ ಬೆಂಬಲದಿಂದ ರಸ್ತೆ ತಡೆ ಮತ್ತು ಧರಣಿಗಳು ಸಂಭವಿಸಬಹುದು.

ಪರಿಣಾಮ
ಈ ಬಂದ್‌ನಿಂದ ಬ್ಯಾಂಕಿಂಗ್ ಸೇವೆಗಳು, ಸಾರ್ವಜನಿಕ ಸಾರಿಗೆ, ಸರ್ಕಾರಿ ಕಚೇರಿಗಳು ಹಾಗೂ ಕೈಗಾರಿಕಾ ವಲಯಗಳ ಮೇಲೆ ಭಾರಿ ಪರಿಣಾಮ ಬೀರುವ ನಿರೀಕ್ಷೆಯಿದೆ. ಸಾಮಾನ್ಯ ಜನಜೀವನದಲ್ಲಿ ವ್ಯತ್ಯಯ ಉಂಟಾಗುವ ಸಾಧ್ಯತೆ ದಟ್ಟವಾಗಿದೆ
ಈ ಮುಷ್ಕರದ ಹಿನ್ನೆಲೆಯಲ್ಲಿ ಕರ್ನಾಟಕದಲ್ಲಿ ಜಂಟಿ ಕ್ರಿಯಾ ಸಮಿತಿಯಿಂದ ನಗರಗಳಲ್ಲಿ ಬೃಹತ್ ಪ್ರತಿಭಟನೆಗೆ ಸಿದ್ಧತೆ ನಡೆದಿದೆ. ಕಾರ್ಮಿಕ ಸಂಘಟನೆಗಳು ಈಗಾಗಲೇ ಕರ್ನಾಟಕ ಕಾರ್ಮಿಕ ಇಲಾಖೆಗೆ ನೋಟಿಸ್ ನೀಡಿವೆ. ಇಂದು (ಫೆಬ್ರವರಿ 11) ವಿಧಾನಸೌಧದಲ್ಲಿ ಕಾರ್ಮಿಕ ಸಚಿವರು ಕಾರ್ಮಿಕ ಸಂಘಗಳೊಂದಿಗೆ ಸಭೆ ನಡೆಸಿದ್ದಾರೆ. ಸಭೆಯಲ್ಲಿ ಕಾರ್ಮಿಕರ ಬೇಡಿಕೆಗಳನ್ನು ಈಡೇರಿಸುವ ನಿಟ್ಟಿನಲ್ಲಿ ಪರಿಹಾರ ಕಂಡುಕೊಳ್ಳುವ ಯತ್ನ ನಡೆದಿದೆ. ಕಾರ್ಮಿಕರನ್ನು ಮನವೊಲಿಸುವ ಪ್ರಯತ್ನ ಮಾಡಲಾಗಿದೆ. ಆದರೆ ಮುಷ್ಕರ ನಡೆದೇ ನಡೆಯುತ್ತದೆ ಎಂದು ಸಂಘಟನೆಗಳು ಹೇಳಿವೆ. ಯಾಕೆಂದರೆ ಇದು ಅಖಿಲ ಭಾರತ ಮಟ್ಟದ ಕರೆ ಎಂದು ಹೇಳಿದ್ದಾರೆ