ಯುವತಿಯರು ಸದಾ ಯೌವನದಿಂದ ಕಾಣಲು ಸಲಹೆಗಳು
ಆರೋಗ್ಯಕರ ಆಹಾರ ಸೇವನೆ ಯೌವನವನ್ನು ಕಾಪಾಡಿಕೊಳ್ಳಲು ಆಹಾರ ಅತ್ಯಂತ ಮುಖ್ಯ. ಹಣ್ಣುಗಳು, ತರಕಾರಿಗಳು, ಹಸಿರು ಸೊಪ್ಪುಗಳು, ಕಡಲೆಕಾಯಿ, ಬೀಜಗಳು ಇತ್ಯಾದಿ ಪೋಷಕಾಂಶಗಳಿಂದ ಕೂಡಿದ ಆಹಾರವನ್ನು ಸೇವಿಸುವುದು ಚರ್ಮಕ್ಕೆ ಹೊಳಪು ನೀಡುತ್ತದೆ. ತೈಲಯುಕ್ತ, ಹೆಚ್ಚು ಸಕ್ಕರೆ ಇರುವ ಆಹಾರವನ್ನು ಕಡಿಮೆ ಮಾಡುವುದು ಉತ್ತಮ.
ನಿಯಮಿತ ವ್ಯಾಯಾಮ ಪ್ರತಿದಿನ ಕನಿಷ್ಠ ಅರ್ಧ ಗಂಟೆ ವ್ಯಾಯಾಮ ಮಾಡುವುದರಿಂದ ದೇಹ ಚುರುಕಾಗುತ್ತದೆ, ರಕ್ತಸಂಚಾರ ಸುಧಾರಿಸುತ್ತದೆ ಮತ್ತು ಚರ್ಮಕ್ಕೆ ನೈಸರ್ಗಿಕ ಹೊಳಪು ಬರುತ್ತದೆ. ಯೋಗ, ನಡಿಗೆ, ಸೈಕ್ಲಿಂಗ್ ಅಥವಾ ನೃತ್ಯ—
ಸಾಕಷ್ಟು ನಿದ್ರೆ ನಿದ್ರೆ ಕೊರತೆ ಚರ್ಮದ ಮೇಲೆ ನೇರ ಪರಿಣಾಮ ಬೀರುತ್ತದೆ. ಪ್ರತಿದಿನ 7–8 ಗಂಟೆಗಳ ನಿದ್ರೆ ದೇಹವನ್ನು ಪುನರುಜ್ಜೀವನಗೊಳಿಸುತ್ತದೆ ಮತ್ತು ಮನಸ್ಸಿಗೆ ಶಾಂತಿ ನೀಡುತ್ತದೆ. ಉತ್ತಮ ನಿದ್ರೆ ಯೌವನದ ರಹಸ್ಯಗಳಲ್ಲಿ ಒಂದು.
ಮನಶಾಂತಿ ಮತ್ತು ಧನಾತ್ಮಕತೆ ಒತ್ತಡವು ವಯಸ್ಸನ್ನು ಬೇಗ ತೋರಿಸುತ್ತದೆ. ಧ್ಯಾನ, ಪ್ರಾಣಾಯಾಮ, ಹವ್ಯಾಸಗಳಲ್ಲಿ ತೊಡಗುವುದು ಮನಸ್ಸಿಗೆ ಶಾಂತಿ ನೀಡುತ್ತದೆ. ಸದಾ ಧನಾತ್ಮಕವಾಗಿ ಯೋಚಿಸುವುದು ಮುಖದಲ್ಲಿ ನಗು ಮೂಡಿಸುತ್ತದೆ, ಇದು ಯೌವನದ ನೈಸರ್ಗಿಕ ಗುರುತು.
ಚರ್ಮದ ಆರೈಕೆ ಪ್ರತಿದಿನ ಮುಖವನ್ನು ಸ್ವಚ್ಛಗೊಳಿಸಿ, ತೇವಾಂಶ ಕ್ರೀಮ್ ಬಳಸಿ, ಸೂರ್ಯನ ಬೆಳಕಿನಲ್ಲಿ ಹೊರಡುವಾಗ ಸನ್‌ಸ್ಕ್ರೀನ್ ಹಚ್ಚುವುದು ಅಗತ್ಯ. ನೈಸರ್ಗಿಕ ತೈಲಗಳು (ತೆಂಗಿನೆಣ್ಣೆ, ಬಾದಾಮಿ ಎಣ್ಣೆ) ಚರ್ಮವನ್ನು ಮೃದುವಾಗಿಸುತ್ತದೆ.
ಸಾಮಾಜಿಕ ಸಂಪರ್ಕ ಮಿತ್ರರೊಂದಿಗೆ ಸಮಯ ಕಳೆಯುವುದು, ಕುಟುಂಬದೊಂದಿಗೆ ನಗು-ನಲಿವು ಹಂಚಿಕೊಳ್ಳುವುದು ಮನಸ್ಸಿಗೆ ಸಂತೋಷ ನೀಡುತ್ತದೆ. ಸಂತೋಷದಿಂದಿರುವವರು ಸದಾ ಯುವಕರಂತೆ ಕಾಣುತ್ತಾರೆ.
ಒಂದು ಸೂರ್ಯನು ಸುಡುವ ಬಿಸಿಲಿನಿಂದ ನಿಮ್ಮ ಚರ್ಮವನ್ನು ರಕ್ಷಿಸಿಕೊಳ್ಳಿ
ಎರಡು ಪ್ರತಿದಿನ ಆರರಿಂದ ಏಳು ಗ್ಲಾಸ್ ನೀರು ಕುಡಿಯುವುದರಿಂದ ನಿಮ್ಮ ಚರ್ಮದ ಕಾಂತಿ ಹೆಚ್ಚುತ್ತದೆ
ಮೂರು ನಿಮ್ಮ ತ್ವಚೆಯನ್ನು ಕಾಪಾಡಿಕೊಳ್ಳಲು ವಿಟಮಿನ್ ಸಿ ಇರುವ ಆಹಾರವನ್ನು ಹೆಚ್ಚಾಗಿ ಬಳಸಿ
ನಾಲ್ಕು ಪ್ರತಿದಿನ ಮುಖಕ್ಕೆ ರೋಸ್ ವಾಟರ್ ಹಚ್ಚಿ ಇದು ನಿಮ್ಮ ಚರ್ಮವನ್ನು ಮೃದುವಾಗಿರಿಸುತ್ತದೆ
ಐದು ಪ್ರತಿದಿನ ಮುಕ್ತವಾಗಿ ನಗುವುದರಿಂದ ಮುಖದ ರಕ್ತದ ಪರಿಚಲನೆಯಾಗಿ ಮುಖದಲ್ಲಿ ಹೊಳಪು] ಹೆಚ್ಚುತ್ತದೆ ಆರು ಸ್ನಾನ ಮಾಡುವಾಗ ಹೆಚ್ಚು ಹೊತ್ತು ಉಜ್ಜಿ ಸ್ನಾನ ಮಾಡುವುದರಿಂದ ತ್ವಚೆಯು ಕಾಂತಿಯನ್ನು ಕಳೆದುಕೊಳ್ಳುತ್ತದೆ ಏಳು ಒಂದೇ ಕಡೆ ಕುಳಿತುಕೊಳ್ಳದೆ ಪ್ರತಿದಿನ ಅರ್ಧ ಗಂಟೆ ಆದರೂ ವಾಕಿಂಗ್ ಮಾಡುವುದನ್ನು ರೂಡಿಸಿಕೊಳ್ಳಿ
ಎಂಟು ನಿಮ್ಮ ಆರೋಗ್ಯವನ್ನು ಕಾಪಾಡಿಕೊಳ್ಳಲು ಪ್ರೋಟೀನ್ ಯುಕ್ತ ಆಹಾರ ಪದಾರ್ಥಗಳನ್ನು ಹಾಗೂ ಹಸಿರು ತರಕಾರಿಗಳನ್ನು ಹೆಚ್ಚಾಗಿ ಸೇವಿಸಬೇಕು
ಒಂಬತ್ತು ಬೇಸಿಗೆಯ ಸಮಯದಲ್ಲಿ ಹೋಗಲಾಡಿಸಲು ದಿನಕ್ಕೆ ಎರಡು ಬಾರಿಯಾದರೂ ಮುಖವನ್ನು ಕಳೆಯುವುದು ಅಥವಾ ಸ್ನಾನ ಮಾಡುವುದು
10 ನಿದ್ರೆಗೆ ಪ್ರಾಮುಖ್ಯತೆಯನ್ನು ಕೊಡಿ ಕನಿಷ್ಠ ಏಳರಿಂದ ಎಂಟು ಗಂಟೆಯಾದರೂ ನಿದ್ದೆ ಮಾಡುವುದರಿಂದ ಆರೋಗ್ಯವಾಗಿಯೂ ಹಾಗೂ ಅಂದವಾಗಿಯೂ ಇರುತ್ತೀರಾ ತುಂಬಾ ಧನ್ಯವಾದಗಳು ಸ್ನೇಹಿತರೆ