"ಗಿಲ್ಲಿ ನಟ ಅಭಿನಯದ ಸಸ್ಪೆನ್ಸ್ ಕಥೆ – ಸರ್ಕಾರಿ ಶಾಲೆ H8 ಫೆ.6ರಂದು ತೆರೆಕಾಣಲಿದೆ!"

ಕಿರುತೆರೆ ಮಾತ್ರವಲ್ಲದೇ ಹಿರಿತೆರೆಯಲ್ಲೂ ಗಿಲ್ಲಿ ನಟ ಅವರು ಆ್ಯಕ್ಟೀವ್ ಆಗಿದ್ದಾರೆ. ಅವರಿಗೆ ಬೇಡಿಕೆ ಹೆಚ್ಚಿದೆ. ಗಿಲ್ಲಿ ಅಭಿನಯಿಸಿದ ‘ಸರ್ಕಾರಿ ಶಾಲೆ-H8’ ಬಿಡುಗಡೆ ಆಗಲಿದೆ. ಶೀರ್ಷಿಕೆಯಿಂದಲೇ ಈ ಸಿನಿಮಾ ಕೌತುಕ ಮೂಡಿಸಿದೆ. ಫೆ.6ರಂದು ‘ಸರ್ಕಾರಿ ಶಾಲೆ-H8’ ಚಿತ್ರ ತೆರೆಕಾಣಲಿದೆ. ಗುಣ ಹರಿಯಬ್ಬೆ ಅವರು ಈ ಚಿತ್ರವನ್ನು ನಿರ್ದೇಶಿಸಿದ್ದಾರೆ.ಹಾಸ್ಯ ಕಲಾವಿದ ಗಿಲ್ಲಿ ನಟ (Gilli Nata) ಅವರು ಬಿಗ್ ಬಾಸ್ ಶೋನಿಂದ ಅಪಾರ ಜನಪ್ರಿಯತೆ ಪಡೆದಿದ್ದಾರೆ. ಬಿಗ್ ಬಾಸ್ ಟ್ರೋಫಿ ವಿನ್ ಆದ ಬಳಿಕ ಹಲವು ಊರುಗಳಲ್ಲಿ ಮೆರವಣಿಗೆ ಮಾಡಿದ್ದೇ ಅವರ ಜನಪ್ರಿಯತೆಗೆ ಸಾಕ್ಷಿ ಆಗಿದೆ. ಬಿಗ್ ಬಾಸ್​​ನಲ್ಲಿ ಸ್ಪರ್ಧಿಸುವುದಕ್ಕೂ ಮುನ್ನವೇ ಅವರು ಒಂದಷ್ಟು ಸಿನಿಮಾಗಳಲ್ಲಿ ನಟಿಸಿದ್ದರು. ಆ ಪೈಕಿ ‘ಸರ್ಕಾರಿ ಶಾಲೆ H8’ (Sarkari Shale H8) ಕೂಡ ಇದೆ. ಈ ಸಿನಿಮಾ ಈಗ ಬಿಡುಗಡೆಗೆ ಸಜ್ಜಾಗಿದೆ. ಫೆಬ್ರವರಿಯಿಂದ 6ರಂದು ಈ ಚಿತ್ರ ರಿಲೀಸ್ ಆಗಲಿದೆ. ಇದರಲ್ಲಿ ಸಸ್ಪೆನ್ಸ್, ಥ್ರಿಲ್ಲರ್ ಕಹಾನಿ ಇದೆ.

"ಗಿಲ್ಲಿ ನಟ ಅಭಿನಯದ ಸಸ್ಪೆನ್ಸ್ ಕಥೆ – ಸರ್ಕಾರಿ ಶಾಲೆ H8 ಫೆ.6ರಂದು ತೆರೆಕಾಣಲಿದೆ!"

ಸರ್ಕಾರಿ ಶಾಲೆ H8’ ಸಿನಿಮಾದಲ್ಲಿ ಗಿಲ್ಲಿ ನಟ ಮಾತ್ರವಲ್ಲದೇ ಗುಣ ಹರಿಯಬ್ಬೆ, ಮೇಘಶ್ರೀ, ಜನಪದ ಕಲಾವಿದ ಮೋಹನ್, ಸುಚೇಂದ್ರ ಪ್ರಸಾದ್ ಮುಂತಾದವರು ಅಭಿನಯಿಸಿದ್ದಾರೆ. ಗುಣ ಹರಿಯಬ್ಬೆ ಅವರು ಕಥೆ, ಚಿತ್ರಕಥೆ ಬರೆದು ಈ ಸಿನಿಮಾಗೆ ನಿರ್ದೇಶನ ಮಾಡಿದ್ದಾರೆ. ‘ಗಿರಿಚಂದ್ರ ಪ್ರೊಡಕ್ಷನ್ಸ್’ ಮೂಲಕ ಈ ಚಿತ್ರ ನಿರ್ಮಾಣ ಆಗಿದೆ. ತೇಜಸ್ವಿನಿ ಎಸ್. ಅವರು ಬಂಡವಾಳ ಹೂಡಿದ್ದಾರೆ.

ಕೆಲವು ಕಾರಣಗಳಿಂದಾಗಿ ‘ಸರ್ಕಾರಿ ಶಾಲೆ H8’ ಸಿನಿಮಾ ಮೇಲೆ ನಿರೀಕ್ಷೆ ಇದೆ. ಟೈಟಲ್ ಗಮನ ಸೆಳೆದಿದೆ. ಗಿಲ್ಲಿ ನಟ ಅಭಿನಯದ ಸಿನಿಮಾ ಆದ್ದರಿಂದ ಅವರ ಅಭಿಮಾನಿಗಳಲ್ಲಿ ಹೈಪ್ ಇದೆ. ಈ ಸಿನಿಮಾದ ಕಥೆಯು ಒಂದು ವಿಗ್ರಹದ ಸುತ್ತ ಸುತ್ತಲಿದೆಯಂತೆ. ಈ ಸಿನಿಮಾಗೆ ಬೆಂಗಳೂರು, ಚಿತ್ರದುರ್ಗ, ಶಿರಾ, ಶಿವಮೊಗ್ಗ ಸುತ್ತಮುತ್ತ ಶೂಟಿಂಗ್ ಮಾಡಲಾಗಿದೆ.ಸರ್ಕಾರಿ ಶಾಲೆ H8’ ಸಿನಿಮಾಗೆ ವಿಜೇತ್ ಮಂಜಯ್ಯ ಅವರ ಸಂಗೀತ ನಿರ್ದೇಶನ ಮಾಡಿದ್ದಾರೆ. 3 ಹಾಡುಗಳು ಈ ಸಿನಿಮಾದಲ್ಲಿವೆ. ಕಾಮಿಡಿ ಸಿನಿಮಾಗಳ ಮೂಲಕ ಫೇಮಸ್ ಆದ ನಟ ಶರಣ್ ಮತ್ತು ಮೆಹಬೂಬ್ ಸಾಬ್ ಒಂದೊಂದು ಹಾಡನ್ನು ಹಾಡಿದ್ದಾರೆ. ನಾಗೇಂದ್ರ ಪ್ರಸಾದ್ ಅವರು ಸಾಹಿತ್ಯ ರಚಿಸಿದ್ದಾರೆ.ಹಿರಿಯ ನಟ ರಾಘವೇಂದ್ರ ರಾಜ್​ಕುಮಾರ್, ಜಗಪ್ಪ, ನವಾಜ್, ಸುಶ್ಮಿತಾ ಜಗಪ್ಪ, ಜೋತಿರಾಜ್, ಕಡ್ಡಿ ವಿಶ್ವ, ನಮ್ರತಾ ಕೂಡ ಈ ಸಿನಿಮಾದಲ್ಲಿ ನಟಿಸಿದ್ದಾರೆ. ರವಿ ರಾಮದುರ್ಗ ಮತ್ತು ವೀನಸ್ ಮೂರ್ತಿ ಅವರು ‘ಸರ್ಕಾರಿ ಶಾಲೆ H8’ ಸಿನಿಮಾಗೆ ಛಾಯಾಗ್ರಹಣ ಮಾಡಿದ್ದಾರೆ. ರವಿತೇಜ ಸಿ.ಹೆಚ್. ಅವರು ಸಂಕಲನದ ಜವಾಬ್ದಾರಿ ನಿಭಾಯಿಸಿದ್ದಾರೆ.